ಭಾನುವಾರ, ಏಪ್ರಿಲ್ 27, 2025
HomeNationalFACT CHECK : FASTagನಿಂದ ಹಣವನ್ನು ತೆಗೆಯುತ್ತಾರೆ ಹುಷಾರ್‌ ! ವೈರಲ್‌ ವಿಡಿಯೋದ ಅಸಲಿಯುತ್ತೇನು ?

FACT CHECK : FASTagನಿಂದ ಹಣವನ್ನು ತೆಗೆಯುತ್ತಾರೆ ಹುಷಾರ್‌ ! ವೈರಲ್‌ ವಿಡಿಯೋದ ಅಸಲಿಯುತ್ತೇನು ?

- Advertisement -

ನವದೆಹಲಿ : ಫಾಸ್ಟ್‌ಟ್ಯಾಗ್‌ನಿಂದ ಹಣವನ್ನು ಸ್ಕ್ಯಾನ್‌ ಮಾಡುವ ಮೂಲಕ ತೆಗೆಯಬಹುದು ಎಂಬ ವಿಡಿಯೋ ವೊಂದು (FACT CHECK ) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಈ ವಿಡಿಯೋದ ಹಿಂದಿನ ಸತ್ಯ ಇದೀಗ ಬಹಿರಂಗವಾಗಿದೆ. ನಿಮ್ಮ ಫಾಸ್ಟ್‌ಟ್ಯಾಗ್‌ನಿಂದ ಹಣವನ್ನು ತೆಗೆದುಕೊಳ್ಳಬಹುದೇ ಎಂಬ ಕುರಿತ ಮಾಹಿತಿ ಇಲ್ಲಿದೆ. ರಸ್ತೆ ಮಧ್ಯದಲ್ಲಿ ಬಾಲಕ ಓರ್ವ ಕಾರಿನ ಗ್ಲಾಸ್‌ ಕ್ಲೀನ್‌ ಮಾಡಿದ್ದಾನೆ. ಈ ವೇಳೆಯಲ್ಲಿ ಕಾರಿನಲ್ಲಿದ್ದವರು ಬಾಲಕ ಕಾರು ಕ್ಲೀನ್‌ ಮಾಡುವ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿರುವಂತೆ ಬಾಲಕ ತನ್ನ ಕೈಯಿಂದ ಫಾಸ್ಟ್ಯಾಗ್‌ ಸ್ಕ್ಯಾನ್‌ ಮಾಡಿದ್ದಾನೆ. ನಂತರದಲ್ಲಿ ಗ್ಲಾಸ್‌ ಕ್ಲೀನ್‌ ಮಾಡಿ ಸ್ಥಳದಿಂದ ಬಾಲಕ ಹೊರಡುತ್ತಿದ್ದಂತೆಯೇ ಡ್ರೈವರ್‌ ಹಣವನ್ನು ತೆಗೆದುಕೊಳ್ಳುವುದಿಲ್ಲವೇ ಎಂದು ಪ್ರಶ್ನಿಸುತ್ತಾನೆ.

ಅಲ್ಲದೇ ಬಾಲಕನ ಕೈಯಲ್ಲಿ ಇರುವುದು ಗಡಿಯಾರವೇ ಎಂದು ಕೇಳುತ್ತಾನೆ. ಆಗ ಬಾಲಕ ಸ್ಥಳದಿಂದ ಓಡಿ ಹೋಗುತ್ತಾನೆ. ಈ ವೇಳೆಯಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೋರ್ವ ಬಾಲಕನನ್ನು ಅಟ್ಟಿಸಿಕೊಂಡು ಓಡುತ್ತಾನೆ. ಆದ್ರೆ ಬಾಲಕ ಆತನ ಕೈಗೆ ಸಿಗದೇ ಇದ್ದಾಗ ಮರಳಿ ಕಾರಿಗೆ ಬರುತ್ತಾನೆ. ಈ ವೇಳೆಯಲ್ಲಿ ರಸ್ತೆ ಮಧ್ಯದಲ್ಲಿ ಕಾರಿನ ಗಾಜು ಕ್ಲೀನ್‌ ಮಾಡುವ ನೆಪದಲ್ಲಿ ಫಾಸ್ಟ್ಯಾಗ್‌ ಸ್ಕ್ಯಾಮ್‌ ಮಾಡಿ ಖಾತೆಯಲ್ಲಿರುವ ಹಣವನ್ನು ವಂಚಿಸುವ ಜಾಲವೊಂದು ಸಕ್ರೀಯವಾಗಿ ಎಂಬೆಲ್ಲಾ ವಿವರಣೆಯನ್ನು ನೀಡುತ್ತಾನೆ.

ಯಾವ ರೀತಿಯಲ್ಲಿ ವಂಚನೆ ಮಾಡ್ತಾರೆ ಅನ್ನೋ ಕುರಿತು ವ್ಯಕ್ತಿ ಮಾಹಿತಿಯನ್ನು ನೀಡಿದ್ದ. ಇದೀಗ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ವಿಡಿಯೋವನ್ನು ಬರೋಬ್ಬರಿ 24 ಮಿಲಿಯನ್‌ಗಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು.

ನಿಜಕ್ಕೂ ಫಾಸ್ಟ್ಯಾಗ್‌ನಿಂದ ಹಣ ವಂಚನೆ ಸಾಧ್ಯವೇ ?

ಈ ಕುರಿತು ಫಾಸ್ಟ್‌ಟ್ಯಾಗ್ ಉತ್ತರವನ್ನುನೀಡಿದೆ. ಕೇವಲ ನೋಂದಾಯಿತ ವ್ಯಾಪಾರಿಗಳು ಅಂದರೆ ಟೋಲ್ ಮತ್ತು ಪಾರ್ಕಿಂಗ್ ಪ್ಲಾಜಾ ಆಪರೇಟರ್‌ಗಳು ಆಯಾ ಜಿಯೋ ಸ್ಥಳಗಳಿಂದ ಮಾತ್ರ ವಹಿವಾಟು ಪ್ರಾರಂಭಿಸಬಹುದು. ಆದರೆ ಈ ರೀತಿಯಲ್ಲಿ ವಂಚನೆ ನಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಯಾವುದೇ ಅನಧಿಕೃತ ಸಾಧನವು NETC FASTag ನಲ್ಲಿ ಯಾವುದೇ ಹಣಕಾಸಿನ ವಹಿವಾಟುಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ, ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು FASTag ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಕೇಂದ್ರ ಸರಕಾರದ ‘PIB ಫ್ಯಾಕ್ಟ್ ಚೆಕ್’ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ನಕಲಿ ಹಗರಣದ ಬಗ್ಗೆ ಟ್ವೀಟ್ ಮಾಡಿದೆ. ಅಂತಹ ವಹಿವಾಟುಗಳು ಸಾಧ್ಯವಿಲ್ಲ ಎಂದು PIB ಟ್ವೀಟ್‌ ಮಾಡಿದೆ. “ಪ್ರತಿಯೊಂದು ಟೋಲ್ ಪ್ಲಾಜಾವು ವಿಶಿಷ್ಟವಾದ ಕೋಡ್ ಅನ್ನು ಹೊಂದಿದ್ದು ಅದನ್ನು ನಿರ್ದಿಷ್ಟ ಬ್ಯಾಂಕ್ ಮತ್ತು ಜಿಯೋ ಕೋಡ್‌ನೊಂದಿಗೆ ಮ್ಯಾಪ್ ಮಾಡಲಾಗಿದೆ. ಈ ಸಂಯೋಜನೆಯನ್ನು ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಮ್‌ನಲ್ಲಿ ಮ್ಯಾಪ್ ಮಾಡಲಾಗಿದೆ ಎಂದು ಪಿಐಬಿ ಹೇಳಿಕೆ ತಿಳಿಸಿದೆ.

ಫಾಸ್ಟ್‌ಟ್ಯಾಗ್ ಅನ್ನು ಸ್ವೈಪ್ ಮಾಡಲು ವಾಚ್‌ಗಳಂತಹ ಸಾಧನಗಳನ್ನು ಬಳಸಲಾಗುತ್ತಿದೆ, ಇದು ಪ್ರಿಪೇಯ್ಡ್ ವ್ಯಾಲೆಟ್‌ಗಳಿಂದ ಹಣವನ್ನು ವಂಚನೆಯ ಕಡಿತಕ್ಕೆ ಕಾರಣವಾಗುತ್ತದೆ ಎಂಬ ವೈರಲ್ ವೀಡಿಯೊದಲ್ಲಿ ಮಾಡಿದ ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎನ್ನುವುದು ತಿಳಿದು ಬಂದಿದೆ.

ಇದನ್ನೂ ಓದಿ : BJP Master Plan : ಲೋಕಸಭಾ ಚುನಾವಣೆಗೆ ಹೊಸಮುಖಗಳು : ಬಿಜೆಪಿ ಪ್ಲ್ಯಾನ್ ಏನು ಗೊತ್ತಾ ?

FACT CHECK Can You Take Money From Your FASTag ? Viral Video

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular