Rajat Patidar : ರಣಜಿ ಫೈನಲ್‌ನಲ್ಲಿ ಭರ್ಜರಿ ಶತಕ ಬಾರಿಸಿದ ಆರ್‌ಸಿಬಿ ಸ್ಟಾರ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಸ್ಟಾರ್ ರಜತ್ ಪಾಟಿದಾರ್, ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮುಂಬೈ ವಿರುದ್ಧದ ರಣಜಿ ಫೈನಲ್ ಪಂದ್ಯದ 4ನೇ ದಿನ ಪಾಟಿದರ್ ಶತಕ ಸಿಡಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿದಿದ್ದ ರಜತ್ ಪಾಟಿದಾರ್ (Rajat Patidar), 3ನೇ ದಿನದಂತ್ಯಕ್ಕೆ ಅಜೇಯ 67 ರನ್ ಗಳಿಸಿದ್ದರು. ಪಾಟಿದಾರ್’ಗೂ ಮುನ್ನ ಯಶ್ ದುಬೆ ಮತ್ತು ಶುಭಂ ಶರ್ಮಾ ಶತಕ ಬಾರಿಸಿ ಮಧ್ಯಪ್ರದೇಶ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾಗಿದ್ದಾರೆ.

29 ವರ್ಷದ ರಜತ್ ಪಾಟಿದಾರ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಭರ್ಜರಿ ಪ್ರದರ್ಶನ ತೋರಿದ್ದರು. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪ್ಲೇ ಆಫ್ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿ ಗಮನ ಸೆಳೆದಿದ್ದರು. ಐಪಿಎಲ್-2022 ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿದ್ದ ಪಾಟಿದಾರ್, ಒಂದು ಶತಕ, ಎರಡು ಅರ್ಧಶತಕಗಳ ಸಹಿತ 55.50 ಸರಾಸರಿಯಲ್ಲಿ 152.75ರ ಉತ್ತಮ ಸ್ಟ್ರೈಕ್”ರೇಟ್’ನೊಂದಿಗೆ 333 ರನ್ ಕಲೆ ಹಾಕಿದ್ದಾರು.

ರಣಜಿ ಫೈನಲ್’ನಲ್ಲಿ ಪಾಟಿದಾರ್, ಯಶ್ ದುಬೆ ಮತ್ತು ಶುಭಂ ಶರ್ಮಾ ಶತಕಗಳ ನೆರವಿನಿಂದ ಮುಂಬೈನ ಮೊದಲ ಇನ್ನಿಂಗ್ಸ್ ಮೊತ್ತವಾದ 374 ರನ್”ಗಳನ್ನು ಮೆಟ್ಟಿ ನಿಂತಿರುವ ಮಧ್ಯಪ್ರದೇಶ, ಈಗಾಗ್ಲೇ 100 ರನ್’ಗಳ ಮುನ್ನಡೆ ಪಡೆದಿದೆ. ಪಂದ್ಯ ಡ್ರಾಗೊಂಡರೂ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮಧ್ಯಪ್ರದೇಶ ರಣಜಿ ಚಾಂಪಿಯನ್ ಪಟ್ಟಕ್ಕೇರಲಿದೆ.

1998-99ನೇ ಸಾಲಿನ ರಣಜಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ ಮಧ್ಯಪ್ರದೇಶ, ಚಿನ್ನಸ್ವಾಮಿ ಮೈದಾನದಲ್ಲೇ ನಡೆದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ವಿರುದ್ಧ ಸೋಲು ಕಂಡು ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು. ಇದೀಗ 23 ವರ್ಷಗಳ ನಂತರ ಮತ್ತೆ ರಣಜಿ ಫೈನಲ್’ನಲ್ಲಿ ಆಡುತ್ತಿರುವ ಮಧ್ಯಪ್ರದೇಶ ತಂಡ, ಚಾಂಪಿಯನ್ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ : 1983 World Cup victory : ಭಾರತ ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದು ಇಂದಿಗೆ 29 ವರ್ಷ, ದಿಗ್ಗಜರು ಹೇಳಿದ್ದೇನು ?

ಇದನ್ನೂ ಓದಿ : Umpire Asad rauf : ಪಾಕಿಸ್ತಾನದಲ್ಲಿ ಚಪ್ಪಲಿ ಮಾರುತ್ತಿದ್ದಾರೆ ಮಾಜಿ ಐಸಿಸಿ ಅಂಪೈರ್

RCB star Rajat Patidar to score 100 in Ranji Trophy Final MP VS MUM

Comments are closed.