Fact check on currency note: ಹೊಸ ನೋಟಿನ ಮೇಲೆ ಬರೆದ್ರೆ ನೋಟ್ ಅಮಾನ್ಯ : ಈ ಸುದ್ದಿಯ ಅಸಲಿ ಸತ್ಯವೇನು ?

ನವದೆಹಲಿ: (Fact check on currency note) ನೋಟುಗಳ ಮೇಲೆ ಸಂದೇಶಗಳನ್ನು ಅಥವಾ ಇನ್ನೇನಾದರೂ ಬರೆಯುವ ಅಭ್ಯಾಸ ಕೆಲವರಿಗಿರುತ್ತದೆ. ಅದನ್ನೂ ನೋಡಿಯೂ ಕೂಡ ಇರುತ್ತೇವೆ. ಈ ರೀತಿಯಾಗಿ ಬರೆಯುವುದರಿಂದ ನೋಟು ಅಮಾನ್ಯವಾಗುತ್ತದೆ ಎಂದು, ಇನ್ನೂ ಕೆಲವರಿಗೆ ಏನನ್ನಾದರೂ ಬರೆಯುವುದರಿಂದ ನೋಟು ಅಮಾನ್ಯವಾಗುವುದಿಲ್ಲ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇವೆರಡರಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂಬ ಗೊಂದಲ ಎಲ್ಲರಿಗೂ ಇದ್ದೇ ಇದೆ.

ಇತ್ತೀಚೆಗೆ ” ಹೊಸ ನೋಟುಗಳ ಮೇಲೆ ಏನನ್ನಾದರೂ ಬರೆದರೆ ಆ ನೋಟು ಅಮಾನ್ಯವಾಗುತ್ತದೆ ಮತ್ತು ಅದು ಇನ್ನು ಮುಂದೆ ಕಾನೂನು ಟೆಂಡರ್‌ ಆಗುವುದಿಲ್ಲ” ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಇದರ ಸತ್ಯಾಂಶ ಏನೆಂದು ತಿಳಿಯದೇ ಜನರು ಅದನ್ನೇ ನಂಬಿದ್ದರು. ಇದೀಗ ಪಿಐಬಿ ಫ್ಯಾಕ್ಟ್‌ ಚೆಕ್‌ (Fact check on currency note), ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಈ ಹೇಳಿಕೆಯನ್ನು ಪರಿಶೀಲಿಸಿದ್ದು, ಇದು ನಕಲಿ ಎಂದು ಹೇಳಿದೆ.

ನಕಲಿ ಸಂದೇಶದಲ್ಲಿರುವುದೇನು?
” ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಹೊಸ ಮಾರ್ಗಸೂಚಿಗಳ ಪ್ರಕಾರ, ಹೊಸ ನೋಟುಗಳ ಮೇಲೆ ಏನನ್ನಾದರೂ ಬರೆಯುವುದರಿಂದ ನೋಟು ಅಮಾನ್ಯವಾಗುತ್ತದೆ, ಮತ್ತು ಇದು ಇನ್ನು ಮುಂದೆ ಕಾನೂನು ಬದ್ದ ಟೆಂಡರ್‌ ಆಗಿರುವುದಿಲ್ಲ” ಎಂದು ಹೇಳಲಾಗಿತ್ತು.

ಇದನ್ನು ಪರಿಶೀಲಿಸಿದ ಪಿಐಬಿ “ಸ್ಕ್ರಿಬ್ಲಿಂಗ್‌ ಹೊಂದಿರುವ ಬ್ಯಾಂಕ್‌ ನೋಟುಗಳು ಅಮಾನ್ಯವಲ್ಲ, ಇವು ಕಾನೂನುಬದ್ದ ಟೆಂಡರ್‌ ಗಳಾಗಿ ಮುಂದುವರಿಯುತ್ತವೆ” ಎಂದು ಹೇಳಿದೆ. ಕ್ಲೀನ್‌ ನೋಟ್‌ ನೀತಿಯ ಅಡಿಯಲ್ಲಿ ಜನರು ಕರೆನ್ಸಿ ನೋಟುಗಳನ್ನು ವಿರೂಪಗೊಳಿಸುವುದರಿಂದ ನೋಟಿನ ಗುಣಮಟ್ಟ ಕಡಿಮೆಯಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಎಂಡಿ ಚಂದಾ ದೀಪಕ್ ಕೊಚ್ಚರ್ ದಂಪತಿಗೆ ಜಾಮೀನು

ಅದರೆ ಆರ್‌ ಬಿ ಐ ಜನರಲ್ಲಿ ಒಂದು ಮನವಿಯನ್ನು ಮಾಡಿದೆ. ಅದೇನೆಂದರೆ, “ಅಲಂಕಾರಿಕ ವಸ್ತುವಾಗಿ, ಅಥವಾ ವ್ಯಕ್ತಿಯ ಮೇಲೆ ಸುರಿಯಲು ನೋಟುಗಳನ್ನು ಬಳಸಬೇಡಿ. ಕರೆನ್ಸಿ ನೋಟುಗಳ ಮೇಲೆ ಬರೆಯಬೇಡಿ. ಕೊಳೆಯಾದ ಮತ್ತು ಹರಿದಂತಹ ಕರೆನ್ಸಿ ನೋಟುಗಳನ್ನು ಬ್ಯಾಂಕುಗಳ ಟೆಲ್ಲರ್‌ ಕೌಂಟರ್‌ ಗಳಲ್ಲಿ ಮುಕ್ತವಾಗಿ ವಿನಿಮಯ ಮಾಡಿ ಕೊಡಲಾಗುವುದು.”

Fact check on currency note: If written on a new note, the note is invalid: What is the real truth of this news?

Comments are closed.