ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ : ನಾಳೆ ಸಾಗರ ಬಂದ್ ಗೆ ಕರೆ

ಶಿವಮೊಗ್ಗ: (Assault on Bajrang Dal worker) ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಸಾಗರ ನಗರ ಬಜರಂಗದಳದ ಸಹ ಸಂಚಾಲಕನಾಗಿರುವ ಸುನೀಲ್‌ ಎಂಬಾತನ ಮೇಲೆ ಸಮೀರ್‌ ಎನ್ನುವಾತ ಬಿ.ಎಚ್‌ ನಗರದ ಬಸ್‌ ನಿಲ್ದಾಣದ ಬಳಿಯಲ್ಲಿ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿದ್ದಾನೆ. ಕೂದಲೆಳೆ ಅಂತರದಲ್ಲಿ ಸುನೀಲ್‌ ಪಾರಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಿವಮೊಗ್ಗದಲ್ಲಿ ನಿನ್ನೆ ಶೌರ್ಯ ಸಂಚಲನ ಯಾತ್ರೆ ನಡೆದಿದ್ದು ಅದರಲ್ಲಿ ಸುನೀಲ್‌ ಭಾಗಿಯಾಗಿದ್ದ. ಯಾತ್ರೆಗೆ ಹೋಗುವ ವೇಳೆ ಸುನೀಲ್‌ ಜೊತೆಗೆ ಸಮೀರ್‌ ಕಿರಿಕ್‌ ಮಾಡಿಕೊಂಡಿದ್ದ. ಇದೇ ನೆಪವಾಗಿಸಿಕೊಂಡಿದ್ದ ಸಮೀರ್‌ ಸುನೀಲ್‌ ಮೇಲೆ ಹಲ್ಲೆಗೆ (Assault on Bajrang Dal worker) ಯತ್ನಿಸಿದ್ದಾನೆ. ಘಟನೆಯ ಪೂರ್ತಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗದೆ.

ಸಾಗರದ ಹೊಸ ಬಸ್‌ ನಿಲ್ದಾಣದ ಬಳಿಯಿರುವ ಕಛೇರಿಗೆ ಸುನೀಲ್‌ ಬೈಕ್‌ ಮೂಲಕ ತೆರಳುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಸಮೀರ್‌ ಸಮೀಪ ಹೋಗುತ್ತಿದ್ದಂತೆಯೇ ತನ್ನ ಬೈಕ್‌ ನಲ್ಲಿದ್ದ ಮಚ್ಚನ್ನು ತೆಗೆದು ಬೀಸಿದ್ದಾನೆ. ಕೂದಲೆಳೆ ಅಂತರದಲ್ಲಿ ಸುನೀಲ್‌ ತಪ್ಪಿಸಿಕೊಂಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕರ್ತ ಸುನೀಲ್‌ “ನಾನು ಎಂದಿನಂತೆಯೇ ಆಫೀಸ್‌ ಗೆ ತೆರಳುತ್ತಿದ್ದೆ. ಈ ವೇಳೆ ಅನ್ಯಕೋಮಿನ ಯುವಕ ನನ್ನನ್ನು ಅವಾಚ್ಯ ಶಬ್ಧಗಳಿಂದ ಕರೆದಿದ್ದಾನೆ, ನಾನು ಆತನ ಬಳಿ ಬೈಕ್‌ ನಲ್ಲಿ ಹೋಗುತ್ತಿದ್ದಾಗ ಮಚ್ಚಿನಿಂದ ದಾಳಿ ಮಾಡಲು ಮುಂದಾದ . ಸ್ವಲ್ಪದರಲ್ಲಿಯೇ ನಾನು ತಪ್ಪಿಸಿಕೊಂಡೆ” ಎಂದು ತಿಳಿಸಿದ್ದಾರೆ.

ಮಚ್ಚು ಬೀಸಿ ಸುನೀಲ್‌ ಮೇಲೆ ಹಲ್ಲೆಗೆ ಯತ್ನಿಸುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಸಮೀರ್‌ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಈ ಸಂಬಂಧ ಸಾಗರ ಪೊಲೀಸ್‌ ಠಾಣೆಯಲ್ಲಿ ಸುನೀಲ್‌ ದೂರು ನೀಡಿದ್ದಾರೆ. ಅಲ್ಲದೇ ಸುನೀಲ್‌ ಮೇಲೆ ಹಲ್ಲೆಗೆ ಯತ್ನ ನಡೆಸಿದ ಕಾರಣ ಸಾಗರ ಪೊಲೀಸ್‌ ಟೌನ್‌ ಠಾಣೆಯ ಮುಂಭಾಗದಲ್ಲಿ ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಗುಂಪುಗಟ್ಟಿ ಪ್ರತಿಭಟನೆ ನಡೆಸಿದ್ದಾರೆ. ಸುನೀಲ್‌ ಮೇಲೆ ಹಲ್ಲೆ ನಡೆಸಿದವನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : 2 boys dead: ಚರಂಡಿ ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವು

ಇದನ್ನೂ ಓದಿ : Siddhu Nija Kanasu : ಸಿದ್ಧು ನಿಜ ಕನಸುಗಳು ಪುಸ್ತಕ ಬಿಡುಗಡೆ : ಹೊಸ ವಿವಾದಕ್ಕೆ ಮುನ್ನುಡಿ ಬರೆದ ಬಿಜೆಪಿ

ಬಜರಂಗದಳದ ಕಾರ್ಯಕರ್ತ ಸುನೀಲ್‌ ಮೇಲೆ ಹಲ್ಲೆಗೆ ಯತ್ನವನ್ನು ಖಂಡಿಸಿ ನಾಳೆ ಸಾಗರ ಟೌನ್‌ ಬಂದ್‌ ಗೆ ಕೂಡ ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದಾರೆ.

Assault on Bajrang Dal worker: Case of assault on Bajrang Dal worker: Call for sagar bandh tomorrow

Comments are closed.