ಜೈಪುರ : ಹೋಟೆಲ್‌ವೊಂದರ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ. ಖ್ಯಾತ ಮಾಡೆಲ್ ಗುಂಗುನ್ ಉಪಾಧ್ಯಾಯ (Gungun Upadhyay) ಎಂಬವರೇ ಆತ್ಮಹತ್ಯೆಗೆ ಯತ್ನಿಸಿದವರು. ಕಾಲು, ಎದೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಗುಂಗುನ್ ಉಪಾಧ್ಯಾಯ ಅವರು ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆಯಷ್ಟೇ ಗುಂಗುನ್ ಉದಯಪುರದಿಂದ ಜೋಧ್‌ಪುರಕ್ಕೆ ಬಂದಿದ್ದು, ಇಲ್ಲಿನ ರತನಾಡ ಪ್ರದೇಶದಲ್ಲಿರುವ ಲಾರ್ಡ್ಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ರಾತ್ರಿಯ ವೇಳೆಯಲ್ಲಿ ತನ್ನ ತಂದೆಗೆ ಕರೆ ಮಾಡಿದ್ದ ಗುಂಗುನ್ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ತನ್ನನ್ನು ಕೊನೆಯ ಬಾರಿ ನೋಡಿಕೊಳ್ಳಿ ಎಂದು ತನ್ನ ಮುಖವನ್ನು ತೋರಿಸಿದ್ದಾಳೆ.
ಕೂಡಲೇ ಗುಂಗುನ್ ಉಪಾಧ್ಯಾಯ ಅವರ ತಂದೆ ಗಣೇಶ್ ಉಪಾಧ್ಯಾಯ ಅವರು ಕೂಡಲೇ ಪೊಲೀಸರನ್ನು ಸಂಪರ್ಕಿಸಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಗುಂಗುನ್ ಹೋಟೆಲ್‌ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು ಕೂಡ ತೀವ್ರ ರಕ್ತಶ್ರಾವ ಉಂಟಾಗಿದೆ. ವೈದ್ಯರು ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ.
ಸದ್ಯ ಗುಂಗುನ್ ಉಪಾಧ್ಯಾಯ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಗುಂಗುನ್ ಯಾವುದೇ ಪ್ರತಿಕ್ರೀಯೆಯನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ, ಆಕೆಗೆ ಪ್ರಜ್ಞೆ ಬಂದ ನಂತರವಷ್ಟೇ ಆಕೆಯ ಕೃತ್ಯದ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್
ಇದನ್ನೂ ಓದಿ : ಬೇಬಿ ಬಂಪ್ ಜೊತೆ ಹಾಟ್ ಪೋಟೋಶೂಟ್ : ಸೋಷಿಯಲ್ ಮೀಡಿಯಾ ಗಮನ ಸೆಳೆದ ದಿಶಾ ಮದನ್
ಇದನ್ನೂ ಓದಿ : Malavika mohanan : ಮಾಲ್ಡೀವ್ಸ್ ನಲ್ಲಿ ಮತ್ತೇರಿಸಿದ ಮಾಳವಿಕಾ : ಬೋಲ್ಡ್ ಬಿಕನಿ ವಿಡಿಯೋ ವೈರಲ್
ಇದನ್ನೂ ಓದಿ : ಫ್ಯಾಷನ್‌ಗೆ ವಯಸ್ಸು ಮುಖ್ಯವಲ್ಲ ಅಂದ್ರು ಪ್ರಿಯಾಂಕ : ಪೋಟೋ ನೋಡಿ Beautiful ಅಂದ್ರು ಅಭಿಮಾನಿಗಳು
( Famous Model jumps from sixth floor of hotel attempt suicide, Gungun Upadhyay Condition is serious)