ಭಾನುವಾರ, ಏಪ್ರಿಲ್ 27, 2025
HomeNationalFever Cases in Kerala : ಕೇರಳದಲ್ಲಿ ಜ್ವರಕ್ಕೆ ಒಂದೇ ದಿನ 7 ಮಂದಿ ಸಾವು,...

Fever Cases in Kerala : ಕೇರಳದಲ್ಲಿ ಜ್ವರಕ್ಕೆ ಒಂದೇ ದಿನ 7 ಮಂದಿ ಸಾವು, 10,594 ಮಂದಿ ಆಸ್ಪತ್ರೆಗೆ ದಾಖಲು

- Advertisement -

ತಿರುವನಂತಪುರ : ಮಳೆಗಾಲ ಆರಂಭವಾಗುತ್ತಿದ್ದಂತೆಯೇ ದೇವರನಾಡು ಕೇರಳದಲ್ಲಿ ಜ್ವರ ಪ್ರಕರಣಗಳ (Fever Cases in Kerala) ಸಂಖ್ಯೆಯನ್ನು ಭಾರೀ ಏರಿಕೆಯನ್ನು ಕಂಡಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,594ಕ್ಕೂ ಅಧಿಕ ಮಂದಿ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದುವರೆಗೆ ವಿವಿಧ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿರುವವರ ಸಂಖ್ಯೆ ಐವತ್ತೂ ಸಾವಿರಕ್ಕೂ ಅಧಿಕ ಇದೆ. ಅಲ್ಲದೇ ನಿನ್ನೆ ಒಂದೇ ದಿನ ವಿವಿಧ ಜ್ವರದಿಂದಾಗಿ 7 ಮಂದಿ ಸಾವಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕೇರಳದಲ್ಲಿ ಕಳೆದ ಹದಿನೈದು ದಿನಗಳಿಂದಲೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ್ವರ ಪೀಡಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಡೆಂಗ್ಯೂ, ಇಲಿಜ್ವರ, ಎಚ್1ಎನ್1 ಪ್ರಕರಣ ಸಂಖ್ಯೆ ರಾಜ್ಯದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಕೇರಳ ರಾಜ್ಯದಲ್ಲಿ ಒಟ್ಟು 7 ಮಂದಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ಡೆಂಗ್ಯೂ ಜ್ವರದಿಂದ 3, ಇಲಿ ಜ್ವರದಿಂದ 2 ಮತ್ತು ಎಚ್1ಎನ್1 ನಿಂದ 2 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ನಿನ್ನೆ ಒಂದೇ ದಿನ 10,594 ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ. ಈ ಪೈಕಿ 56 ಮಂದಿಗೆ ಡೆಂಗ್ಯೂ ಜ್ವರ ಹಾಗೂ 16 ಮಂದಿಗೆ ಇಲಿ ಜ್ವರ ಪೀಡಿತರಾಗಿದ್ದಾರೆ.

ರಾಜ್ಯದಲ್ಲಿ ಮಳೆಯ ಜತೆಗೆ ಜ್ವರ ಪೀಡಿತರ ಸಂಖ್ಯೆಯೂ ಹೆಚ್ಚಿದೆ. ಜ್ವರ ಬಂದರೂ ಮನೆಯಲ್ಲಿಯೇ ಸ್ವಯಂ ಔಷದಿ ಮಾಡಿಕೊಳ್ಳುತ್ತಿದ್ದಾರೆ. ಜ್ವರ, ಕೆಮ್ಮು, ತಲೆನೋವು, ಶೀತ ಮತ್ತು ಸ್ನಾಯು ನೋವುಗಳು ಸಹ ಡೆಂಗ್ಯೂ ಜ್ವರ, ರೇಬೀಸ್ ಮತ್ತು H1N1 ನ ಲಕ್ಷಣಗಳಾಗಿವೆ. ಅನಾರೋಗ್ಯಕ್ಕೆ ಒಳಗಾದವರು ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು. ಪರಿಹಾರ ಶಿಬಿರಗಳಲ್ಲಿ ವೈದ್ಯಕೀಯ ತಂಡದ ಸೇವೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಸರಕಾರ ಸೂಚನೆಗಳನ್ನು ನೀಡಿದೆ.

ಇದನ್ನೂ ಓದಿ : Cardiovascular Disease : ರಾತ್ರಿ ಮಲಗುವ ಮುನ್ನ ಬ್ರಶ್‌ ಮಾಡದಿದ್ರೆ ಏನಾಗುತ್ತೆ ? ಎಂದಿಗೂ ಈ ತಪ್ಪನ್ನು ಮಾಡಲೇ ಬೇಡಿ

ಇದನ್ನೂ ಓದಿ : Weight Loss Tips : ಅನಾನಸ್ ನಮ್ಮ ದೇಹದ ತೂಕ ಇಳಿಸಲು ಹೆಚ್ಚು ಸಹಾಯಕಾರಿ ಹೇಗೆ ಗೊತ್ತೆ ?

ಜಲಾವೃತವಾದಾಗ ಇಲಿ ಬಿಲಗಳಲ್ಲಿ ನೀರು ಸೇರುವುದರಿಂದ ರೋಗ ಇಲಿ ಮೂತ್ರದ ಮೂಲಕ ವೇಗವಾಗಿ ಹರಡುತ್ತದೆ. ಕೆಸರು ಅಥವಾ ಕಲುಷಿತ ನೀರು ಬಿದ್ದರೆ ರೇಬಿಸ್ ರೋಗ ನಿವಾರಕ ಡಾಕ್ಸಿಸೈಕ್ಲಿನ್ ಸೇವಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರಾಜ್ಯದಲ್ಲಿ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಆರೋಗ್ಯ ಇಲಾಖೆ ಹೈಅಲರ್ಟ್‌ ಆಗಿದೆ. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.

Fever Cases in Kerala : In Kerala, 7 people died of fever in a single day, 10,594 people were hospitalized

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular