Fire accident : ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಅಗ್ನಿ ಅನಾಹುತದ ಭೀಕರ ದೃಶ್ಯಗಳು

ಸಿಕಂದರಾಬಾದ್ : Fire accident ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ಅಗ್ನಿ ಅನಾಹುತ ಸಂಭವಿಸಿ 8 ಮಂದಿ ಮೃತಪಟ್ಟಿದ್ದಾರೆ. ತೆಲಂಗಾಣದ ಸಿಕಂದರಬಾದ್ (secunderabad) ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಅವ್ರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ ಘಟನೆ ಕುರಿತು ಆಘಾತ ಹೊರಹಾಕಿದ್ದಾರೆ.

ನಿನ್ನೆ ರಾತ್ರಿ ಏನಾಯ್ತು (Fire accident) :

: ಸಿಕಂದರಾಬಾದ್ ನಲ್ಲಿ ರೂಬಿ ಹೆಸರಿನ ಹೋಟೆಲ್ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆ ಒಂದೇ ಕಡೆ ಇದ್ದು, ನೆಲ ಮಾಳಿಗೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಗಳನ್ನ ಬದಲಾಯಿಸುವ ವಿಭಾಗದಲ್ಲಿ ಸೋಮವಾರ ತಡರಾತ್ರಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡ್ತಿದ್ದಂತೆ ಬೆಂಕಿಯ ಕೆನ್ನಾಲಗೆ ಮೇಲೆ ಇರುವ ಹೋಟೆಲ್ ಗೂ ಆವರಿಸಿದೆ. ಹೋಟೆಲ್ ನಲ್ಲಿ 25 ಜನ ಉಳಿದು ಕೊಂಡಿದ್ರು ಅಂತಾ ಗೊತ್ತಾಗಿದೆ. ಬೆಂಕಿಯ ರುದ್ರ ನರ್ತನಕ್ಕೆ ಕಟ್ಟಡದಾದ್ಯಂತ ದಟ್ಟ ಹೊಗೆ ಆವರಿಸಿದೆ. ಮೃತ 8 ಜನರ ಪೈಕಿ ಕೆಲವರು ಸ್ಥಳದಲ್ಲೇ ಉಸಿರು ಗಟ್ಟಿ, ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಕೊನೆಯುಸಿರೆಳೆದಿದ್ರೆ, ಇನ್ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಳಿಗೆಯಲ್ಲಿ ಕಾಣಿಸಿಕೊಂಡ ಹೊಗೆ ಹೋಟೆಲ್ ಕಟ್ಟಡಕ್ಕೆ ಆವರಿಸಿದೆ. ಹಾಗೂ ಹೋಟೆಲ್ ಹೊರಗೆ ಬರಲಾಗದೇ ಅಲ್ಲೇ ಪರದಾಡ್ತಿದ್ರು. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಕೆಲವರನ್ನ ರಕ್ಷಿಸಿದೆ. ಇನ್ ಕೆಲವರು ದಟ್ಟ ಹೊಗೆ ಆವರಿಸಿ ಜೀವಭಯದಲ್ಲಿ ಹೋಟೆಲ್ ಗಳ ಕಿಟಕಿಯಿಂದ ಜಿಗಿದಿದ್ದಾರೆ. ಈ ವೇಳೆ ಕೆಲವರಿಗೆ ಗಾಯಗಳಾಗಿದ್ದು ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಸ್ಥಳಕ್ಕೆ ಆಗಮಿಸಿದ ತೆಲಂಗಾಣ ಗೃಹ ಸಚಿವ ಮೊಹಮ್ಮದ್ ಅಲಿ ಘಟನೆ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆ ಕುರಿತು ತನಿಖೆಗೆ ಆದೇಶಿಸಿರೋದಾಗಿ ಗೃಹ ಸಚಿವ ಮೊಹಮ್ಮದ್ ಅಲಿ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಸಂತಾಪ : ಸಿಕಂದರಾಬಾದ್ ನ ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ಸಹ ಟ್ವೀಟ್ ಮೂಲಕ ಆಘಾತ ವ್ಯಕ್ತಪಡಿಸಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಗುಣವಾಗಲಿ ಅಂತಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗಾಗಿ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಇದನ್ನೂ ಓದಿ : Mega Blood Donation: ಮೋದಿ ಹುಟ್ಟುಹಬ್ಬಕ್ಕೆ ಮೆಗಾ ರಕ್ತದಾನ ಅಭಿಯಾನ

ಇದನ್ನೂ ಓದಿ : Kerala Kannur : ಕಣ್ಣೂರಿನಲ್ಲಿ ಬೀದಿನಾಯಿಗಳ ದಾಳಿಯಿಂದ ಬಾಲಕರಿಬ್ಬರು ಗ್ರೇಟ್‌ ಎಸ್ಕೇಪ್‌ : WATCH VIDEO

Fire Accident fire Breaks out at Secunderabad Ev Showroom Spreads to Lodge

Comments are closed.