ಸತ್ಯನಾರಾಯಣ ಪೂಜೆ ತಂದ ಆಪತ್ತು : ಅಪಾರ್ಟ್‌ಮೆಂಟ್ ‌ನ 20ಕ್ಕೂ ಅಧಿಕ ಮಂದಿಗೆ ಸೋಂಕು

ಬೆಂಗಳೂರು : ಅಪಾರ್ಟ್‌ಮೆಂಟ್‌ವೊಂದರಲ್ಲಿ ಆಯೋಜಿಸಿದ್ದ ಸತ್ಯನಾರಾಯಣ ಪೂಜೆಯಲ್ಲಿ ಪಾಲ್ಗೊಂಡಿದ್ದ 20ಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅಪಾರ್ಟ್‌ಮೆಂಟ್‌ ಅನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಬೇಕೆಂಬ ಕೂಗು ಕೇಳಿಬಂದಿದೆ.

ಬೆಂಗಳೂರಿನ ಪದ್ಮನಾಭನಗರದ 100 ಅಡಿ ಹೊರ ವರ್ತುಲ ರಸ್ತೆ ಯಲ್ಲಿರುವ ಎಸಿಎಸ್‌ ಮೇಘನಾ ಮತ್ತು ಶಾಲಿನಿ ಅಪಾರ್ಟ್ ‌ಮೆಂಟ್‌ನಲ್ಲಿ ಇದೀಗ ಕೊರೊನಾ ಆತಂಕ ಎದುರಾಗಿದೆ. ಕರ್ಪ್ಯೂ ಹಿನ್ನೆಲೆಯಲ್ಲಿ ಧಾರ್ಮಿಕ ಕಾರ್ಯಗಳನ್ನು  ನಡೆಸದಂತೆ ನಿರ್ಬಂಧ ಹೇರಲಾಗಿತ್ತು. ಆದರೂ ಅಪಾರ್ಟ್‌ಮೆಂಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಕೊರೊನಾ ನಿಯಮ ಗಳನ್ನು ಪಾಲಿಸದ ಈ ಕಾರ್ಯಕ್ರಮದಲ್ಲಿ ಸುಮಾರು 600ಕ್ಕೂ ಅಧಿಕ‌ ನಿವಾಸಿಗಳು ಪಾಲ್ಗೊಂಡಿದ್ದರು. ಇದೀಗ ಅಪಾರ್ಟ್‌ಮೆಂಟ್ ನ ನಿವಾಸಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ‌.

ಅಪಾರ್ಟ್‌ಮೆಂಟ್ ನಲ್ಲಿ ಸದ್ಯ 400ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದು, ಒಟ್ಟು 19ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಬಿಬಿಪಿಎಂಪಿ ಅಧಿಕಾರಿ ಗಳು ಭೇಟಿ‌ ನೀಡಿದ್ರೂ ಪರಿಶೀಲನೆಗೆ ನಿವಾಸಿಗಳು ಅವಕಾಶ ಕಲ್ಪಿಸಿಲ್ಲ ಎಂಬ ಆರೋಪ‌ ಕೇಳಿಬಂದಿದೆ. ಒಟ್ಟಿನಲ್ಲಿ ನಿಯಮ‌ ಉಲ್ಲಂಘಿಸಿದ ತಪ್ಪಿಗೆ ಇದೀಗ ವಸತಿ ಸಮುಚ್ಚಯದ ನಿವಾಸಿಗಳು ಪರಿತಪಿಸುವಂತಾ ಗಿದೆ.

Comments are closed.