Haridwar woman sues son : ಮೊಮ್ಮಗು ಬೇಕೆಂದು ಪುತ್ರ, ಸೊಸೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಮಹಿಳೆ

Haridwar woman sues son : ಮನೆಯಲ್ಲಿ ಮಕ್ಕಳು ಮದುವೆಯಾದ ಮೇಲೆ ಮನೆಗೊಂದು ಮೊಮ್ಮಗು ಬರಲಿ ಎಂಬ ಆಸೆ ಎಲ್ಲಾ ಅಜ್ಜಿ ತಾತಂದಿರಿಗೆ ಇರುತ್ತದೆ. ಈ ಶುಭ ಸುದ್ದಿಯನ್ನು ಕೇಳೋದಕ್ಕೆ ಅವರು ಬಹಳಷ್ಟುಕಾತುರರಾಗಿ ಕೂಡ ಇರುತ್ತಾರೆ. ಆದರೆ ಡೆಹರಾಡೂನ್​​ನಲ್ಲಿರುವ ಹರಿದ್ವಾರ ಸಿವಿಲ್​ ನ್ಯಾಯಾಲಯದಲ್ಲಿ ಹೊಸದೊಂದು ಅರ್ಜಿ ಸಲ್ಲಿಕೆಯಾಗಿದ್ದು ಇದರಲ್ಲಿ ಮಗ ಹಾಗೂ ಸೊಸೆ ನಮಗೆ ಮೊಮ್ಮಗು ನೀಡುತ್ತಿಲ್ಲ ಎಂದು ಆರೋಪಿಸಿ 5 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮಹಿಳೆಯ ಪರವಾಗಿ ವಕೀಲ ಎ.ಕೆ ಶ್ರೀವಾತ್ಸವ ಎಂಬವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ನಮಗೊಂದು ಮೊಮ್ಮಗು ಕೊಡಿ ಎಂದಿದ್ದಕ್ಕೆ ಮಗ ಹಾಗೂ ಸೊಸೆ ನಿರಾಕರಿಸಿದ್ದಾರೆ. ಇದರಿಂದಾಗಿ ನಾವು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿದ್ದೇವೆ. ಹೀಗಾಗಿ ಒಂದು ವರ್ಷದ ಒಳಗಾಗಿ ಸೊಸೆಯು ಮಗುವಿಗೆ ಜನ್ಮ ನೀಡದೇ ಇದ್ದಲ್ಲಿ ನಮಗೆ ಐದು ಕೋಟಿ ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡಬೇಕು ಎಂದು ಮಹಿಳೆ ಹೇಳಿದ್ದಾರೆ .


ನಮ್ಮ ಮಗನಿಗೆ ನಾವು ಹಣವನ್ನೆಲ್ಲ ಖರ್ಚು ಮಾಡಿ ಪೈಲಟ್​​ ವಿದ್ಯಾಭ್ಯಾಸ ಮಾಡಿಸಿದ್ದೇವೆ. ಅಲ್ಲದೇ 2016ರಲ್ಲಿ ನಾವೇ ಖರ್ಚು ಮಾಡಿ ಮಗನಿಗೆ ಅತ್ಯಂತ ವಿಜೃಂಭಣೆಯಿಂದ ಮದುವೆ ಕೂಡ ಮಾಡಿಸಿದ್ದೇವೆ. ಇವರ ಥ್ಯಾಲ್ಯಾಂಡ್​ ಹನಿಮೂನ್​ಗೂ ಕೂಡ ನಾವೇ ಖರ್ಚು ಮಾಡಿದ್ದೇವೆ. ಆದರೆ ಸೊಸೆ ಮದುವೆಯಾದ ಬಳಿಕ ನಮ್ಮನ್ನು ಮಗನಿಂದ ದೂರ ಮಾಡಿದ್ದಾಳೆ. ಅವರಿಬ್ಬರು ಈಗ ನಮ್ಮೊಂದಿಗೆ ಮಾತನಾಡುತ್ತಿಲ್ಲ. ಇಬ್ಬರೂ ಹೈದರಬಾದ್​ಗೆ ಶಿಫ್ಟ್​ ಆಗಿದ್ದಾರೆ. ನನ್ನ ಮಗ ಪತ್ನಿ ಹೇಳಿದಂತೆ ಕೇಳುತ್ತಾನೆ. ನಮಗೆ ಒಂದು ಮೊಮ್ಮಗು ಕೊಡಿ ಎಂದಿದ್ದಕ್ಕೂ ಇವರಿಬ್ಬರು ನಿರಾಕರಿಸಿದ್ದಾರೆ. ಹೀಗಾಗಿ ನಮಗೆ ವರ್ಷದೊಳಗಾಗಿ ಮೊಮ್ಮಗು ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಅರ್ಜಿಯಲ್ಲಿ ಮಹಿಳೆ ತಿಳಿಸಿದ್ದಾರೆ.

ಇದನ್ನು ಓದಿ : CSK vs DC Prithvi Shaw : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : MS Dhoni : ಸಿನಿಮಾ ನಿರ್ಮಾಣಕ್ಕೆ ಮುಂದಾದ್ರು ಮಹೇಂದ್ರ ಸಿಂಗ್‌ ಧೋನಿ

Give me grandchild within a year or pay Rs 5 crore: Haridwar woman sues son, daughter-in-law

Comments are closed.