Government Madrasa: ಕರ್ನಾಟಕದಲ್ಲಿ ಹಿಜಾಬ್ ಕೋಲಾಹಲ; ಅತ್ತ ಗಪ್‌ಚುಪ್ ಎಂದು ಸರ್ಕಾರಿ ಮದರಸಾ, ಸಂಸ್ಕೃತ ಶಾಲೆಗಳನ್ನು ಬಂದ್ ಮಾಡಿದ ಅಸ್ಸಾಂ

ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಮದರಸಾಗಳನ್ನು (Government Madrasa) ಏಪ್ರಿಲ್ 1 ರಿಂದ ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲು ಅಸ್ಸಾಂ ಸರ್ಕಾರ ಆದೇಶ (Govt Run Madrasas in Assam) ಹೊರಡಿಸಿದೆ. ಈಕುರಿತು ಅಸ್ಸಾ ರಾಜ್ಯ ಸರ್ಕಾರ ಡಿಸೆಂಬರ್ 30, 2020 ರಂದು ಕಾನೂನನ್ನು ಅಂಗೀಕರಿಸಿತ್ತು. ಈ ಕಾನೂನಿಗೆ ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ನಿನ್ನೆಯಷ್ಟೇ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಮುಂಬರುವ ಏಪ್ರಿಲ್ 1ರಿಂದಲೇ ಅಸ್ಸಾಂ ರಾಜ್ಯದಲ್ಲಿರುವ ಸರ್ಕಾರಿ ಮದರಸಾಗಳು ಸರ್ಕಾರಿ ಶಾಲೆಗಳಾಗಿ ಬದಲಾಗಲಿವೆ. ಈಕುರಿತು ಅಸ್ಸಾಂನ ಶಿಕ್ಷಣ ಇಲಾಖೆ ಸಲ ಅಧಿಕೃತ ಮಾಹಿತಿ ನೀಡಿದೆ.

ಆದರೆ ಖಾಸಗಿ ಮದರಸಾಗಳ ಕುರಿತು ಈವರೆಗೆ ಯಾವುದೇ ನೂತನ ಆದೇಶವನ್ನು ಅಸ್ಸಾಂ ಸರ್ಕಾರ ಈವರೆಗೆ ಹೊರಡಿಸಿಲ್ಲ. ಈವರೆಗೆ ಮದರಸಾಗಳನ್ನು ನಡೆಸಲು ಅಸ್ಸಾಂ ಸರ್ಕಾರ ಪ್ರತಿವರ್ಷ 260 ಕೋಟಿ ಹಣವನ್ನು ವಿನಿಯೋಗಿಸುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೇ ಮದರಸಾಗಳಲ್ಲಿ ತಮ್ಮ ಮಕ್ಕಳು ಕಲಿಯುವ ಶವಿಷಯಗಳ ಕುರಿತು ಸಹ ಪೋಷಕರಿಗೆ ಮಾಹಿತಿ ಅಥವಾ ಜಾಗೃತಿ ಇದ್ದಿರಲಿಲ್ಲ ಎಂದು ಅಸ್ಸಾಂ ಶಿಕ್ಷಣ ಇಲಾಖೆ ಹೇಳಿದ್ದಾಗಿ ವರದಿಯಾಗಿದೆ.

ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಸೇರಿದಂತೆ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ, ಅಸ್ಸಾಂ ರಾಜ್ಯ ಅಸೆಂಬ್ಲಿಯು ಕಳೆದ ವರ್ಷ ಡಿಸೆಂಬರ್ 30 ರಂದು ಅಸ್ಸಾಂ ಮದರಸಾ ಶಿಕ್ಷಣ ರದ್ದತಿ ಮಸೂದೆ 2020 ಅನ್ನು ಅಂಗೀಕರಿಸಿದೆ. ಈ ಕಾನೂನಿನ ಪ್ರಕಾರ ಇವರೆಗೆ ಅಸ್ಸಾಂ ಸರ್ಕಾರ ನಡೆಸುತ್ತಿದ್ದ ಅಸ್ಸಾಂ ಮದರಸಾ ಎಜುಕೇಶನ್ ಬೋರ್ಡ್ ಸಹ ರದ್ದುಗೊಳ್ಳಲಿದೆ.

ಅಷ್ಟೇ ಅಲ್ಲದೇ ಸರ್ಕಾರದ ಅನುದಾನದಲ್ಲಿ ಈವರಗೆ ನಡೆಯುತ್ತಿದ್ದ 97 ಸಂಸ್ಕೃತ ಶಾಲೆಗಳು ಸಹ ಮುಚ್ಚಲ್ಪಡಲಿವೆ. ಜಾತ್ಯಾತೀತ ನೀತಿಗೆ ಭಂಗ ತರುತ್ತವೆ ಎಂಬ ಕಾರಣದಿಂದ ಅಸ್ಸಾಂ ಸರ್ಕಾರ ಈ ಮದರಸಾ ಮತತ್ತು ಸಂಸ್ಕೃತ ಶಿಕ್ಷಣ ಕೇಂದ್ರಗಳಿಗೆ ಬೀಗ ಹಾಕಲು ಹೊರಟಿದೆ.

ಅಂದಹಾಗೆ ಈ 97 ಸಂಸ್ಕೃತ ಶಿಕ್ಷಣ ಸಂಸ್ಥೆಗಳು ಕುಮಾರ್ ಭಾಸ್ಕರವರ್ಮ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಅಸ್ಸಾಂ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ. ಈ ಶಿಕ್ಷಣ ಕೇಂದ್ರಗಳು ಟೋಲ್‌ಗಳನ್ನು ಭಾರತೀಯ ಸಂಸ್ಕೃತಿ, ನಾಗರಿಕತೆ ಮತ್ತು ರಾಷ್ಟ್ರೀಯತೆಯನ್ನು ಅಧ್ಯಯನ ಮಾಡುವ ಕಲಿಕೆ ಮತ್ತು ಸಂಶೋಧನಾ ಕೇಂದ್ರಗಳಾಗಿ ಪರಿವರ್ತಿಸಲಾಗುವುದಾಗಿ ಅಸ್ಸಾಂ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

(Government Madrasa and sanskrit schools are converted to general schools)

Comments are closed.