Gyanvapi Mosque : ಇಂದು ಜ್ಞಾನವಾಪಿ ಮಸೀದಿಯಲ್ಲಿ ಸಿಕ್ಕ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆಯ ತೀರ್ಪು ಸಾಧ್ಯತೆ

ವಾರಾಣಸಿ : Gyanvapi Mosque ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ಮತ್ತು ವೈಜ್ಞಾನಿಕ ತನಿಖೆ ನಡೆಸಬೇಕೆ ಬೇಡವೆ ಅನ್ನೋ ವಿಚಾರವಾಗಿ ಇಂದು ವಾರಾಣಸಿ ಜಿಲ್ಲಾ ಕೋರ್ಟ್ ಮಹತ್ವದ ತೀರ್ಪು ನೀಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರ ಚಿತ್ತ ಈಗ ವಾರಾಣಸಿ ಕೋರ್ಟ್ ಮೇಲೆ ನೆಟ್ಟಿದೆ.

ಮಸೀದಿಯಲ್ಲಿ ಶೃಂಗಾರ ಗೌರಿ ಮೂರ್ತಿ ಪೂಜೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆಗೆ ಯೋಗ್ಯ ಎಂದು ವಾರಾಣಸಿ ಕೋರ್ಟ್ ತೀರ್ಪು ನೀಡಿದ ಬಳಿಕ, ಪೂಜೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ಐವರು ಮಹಿಳೆಯರ ಪೈಕಿ ನಾಲ್ವರು ಮಹಿಳೆಯರು ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಬೇಕೆಂದು ಹಾಗೂ ವೈಜ್ಞಾನಿಕ ತನಿಖೆ ನಡೆಸಬೇಕೆಂದು ಅರ್ಜಿ ಸಲ್ಲಿಸಿದ್ರು. ಇದರಿಂದ ಶಿವಲಿಂಗದಂತಿರುವ ವಸ್ತುವಿನ ವಯಸ್ಸನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ. ಜೊತೆಗೆ ಅದು ಯಾರ ಆಳ್ವಿಕೆಯ ಕಾಲದಲ್ಲಿತ್ತು ಎನ್ನುವ ಸ್ಪಷ್ಟಣೆ ಸಿಗುತ್ತದೆ. ಇದರಿಂದ ಶಿವಲಿಂಗದಂತಿರುವ ರಚನೆ ಬಗ್ಗೆ ಮಾಹಿತಿ ಸಿಗಲಿದೆ ಎಂದು ಅರ್ಜಿದಾರರು ವಾದಿಸಿದ್ರು.

ಇದನ್ನು ಮುಸ್ಲಿಂ ಕಡೆಯವರು ಹಾಗೂ ಮಸೀದಿಯ ಆಡಳಿತ ಮಂಡಳಿ ವಿರೋಧಿಸಿತ್ತು. ಅಲ್ಲದೇ  ಶೃಂಗಾರ ಗೌರಿ ಮೂರ್ತಿ ಪೂಜೆಗೆ ಅರ್ಜಿ ಸಲ್ಲಿಸಿದ್ದ ಐವರು ಮಹಿಳೆಯರ ಪೈಕಿ ಒಬ್ಬರಾಗಿರೋ ರಾಖಿ ಸಿಂಗ್ ಕೂಡ ಶಿವಲಿಂಗದ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸೋದನ್ನ ವಿರೋಧಿಸಿದ್ರು. ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಿದ್ರೆ ಶಿವಲಿಂಗದ ರಚನೆಗೆ ಹಾನಿಯಾಗುತ್ತದೆ ಎಂದು ವಕೀಲರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು.  ಕಳೆದ ಮಂಗಳವಾರ ವಿಚಾರಣೆ ನಡೆಸಿದ ಜಡ್ಜ್ ಎ.ಕೆ.ವಿಶ್ವೇಶ್ ಅವರಿದ್ದ ಪೀಠ ಇಂದು ವಿಚಾರಣೆಯನ್ನ ಮುಂದೂಡಿತ್ತು. ಹೀಗಾಗಿ ಇಂದು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವ ವಿಚಾರವಾಗಿ ತೀರ್ಪು ಬರೋ ಸಾಧ್ಯತೆ ಇದೆ.

ಸೆಪ್ಟೆಂಬರ್ 12 ರಂದು, ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಮಸೀದಿ ಸಂಕೀರ್ಣದೊಳಗೆ ವರ್ಷಪೂರ್ತಿ ಪೂಜೆಗೆ ಅನುಮತಿ ಕೋರಿ ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಗೆ ಕಾನೂನು ಮಾನ್ಯತೆ ಇಲ್ಲ ಎಂದು ವಾದಿಸಿದ ಮಸೀದಿ ಸಮಿತಿಯ ಸವಾಲನ್ನು ವಜಾಗೊಳಿಸಿದರು.  ಈ ವರ್ಷದ ಆರಂಭದಲ್ಲಿ, ವಾರಣಾಸಿಯ ನ್ಯಾಯಾಲಯ ಮಹಿಳೆಯರ ಅರ್ಜಿಯ ಆಧಾರದ ಮೇಲೆ ಶತಮಾನಗಳಷ್ಟು ಹಳೆಯದಾದ ಮಸೀದಿಯ ಚಿತ್ರೀಕರಣಕ್ಕೆ ಆದೇಶ ನೀಡಿತು. ಅರ್ಜಿದಾರರಿಂದ ವಿವಾದಾತ್ಮಕವಾಗಿ ಸೋರಿಕೆಯಾದ ವೀಡಿಯೊಗ್ರಫಿ ವರದಿ, ವಾಜೂ  ಅಥವಾ ಮುಸ್ಲಿಂ ಪ್ರಾರ್ಥನೆಯ ಮೊದಲು ಶುದ್ಧೀಕರಣ ಆಚರಣೆಗಳಿಗಾಗಿ ಬಳಸುವ ಕೊಳದಲ್ಲಿ ಶಿವಲಿಂಗದಂತಹ ರಚನೆ ಪತ್ತೆಯಾಗಿತ್ತು.

ಇದನ್ನೂ ಓದಿ : Super 10 League : ಕ್ರಿಕೆಟ್+ಸಿನಿಮಾ: ಕಿಚ್ಚನ ಸೂಪರ್ 10 ಲೀಗ್‌ನಲ್ಲಿ ಆಡಲಿದ್ದಾರೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್

ಇದನ್ನೂ ಓದಿ : Delhi bomb scare : ಮಾಸ್ಕೋ-ದೆಹಲಿ ವಿಮಾನದಲ್ಲಿ ಬಾಂಬ್ ಬೆದರಿಕೆ

ಇದನ್ನೂ ಓದಿ : Student Teacher Love Suicide: ಟೀಚರ್ ಜೊತೆ ಪ್ರೀತಿ.. ಲವ್ ಬ್ರೇಕ್ ಅಪ್.. ಸಾವಿಗೆ ಶರಣಾದ ವಿದ್ಯಾರ್ಥಿ.. ಶಿಕ್ಷಕಿ ಅರೆಸ್ಟ್

gyanvapi mosque varanasi court likely to decide on tests on shivling in gyanvapi mosque today

Comments are closed.