Pro kabaddi league : ಪ್ರೊ ಕಬಡ್ಡಿ ಲೀಗ್‌ನಲ್ಲಿಂದು ತ್ರಿಪಲ್ ಧಮಾಕ, ಸೂಪರ್ ಸಂಡೇ ಬೆಂಗಳೂರು ಬುಲ್ಸ್ ಮ್ಯಾಚ್

ಬೆಂಗಳೂರು: ಪ್ರೊ ಕಬಡ್ಡಿ ಲೀಗ್ ( Pro kabaddi league) 9ನೇ ಆವೃತ್ತಿಯ ಟೂರ್ನಿಯ 2ನೇ ವಾರಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ. ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿಯ ಮೊದಲ ಚರಣದ ಪಂದ್ಯಗಳು ನಡೆಯುತ್ತಿದ್ದು, ಶುಕ್ರವಾರ ನಡೆಯುವ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್ ಮತ್ತು ಮಾಜಿ ಚಾಂಪಿಯನ್ ಯು ಮುಂಬಾ (u Mumba)ತಂಡಗಳು ಮುಖಾಮುಖಿಯಾಗಲಿವೆ. ತಮಿಳು ತಲೈವಾಸ್ (Tamil Thalaivas) ತಂಡದ ನಾಯಕ ಪವನ್ ಸೆಹ್ರಾವತ್ ಮೊದಲ ಪಂದ್ಯದಲ್ಲೇ ಕಾಲಿನ ಗಾಯಕ್ಕೊಳಗಾಗಿದ್ದು, ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ದಿನದ 2ನೇ ಪಂದ್ಯದಲ್ಲಿ ಲೀಗ್’ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಹರ್ಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ. ಶುಕ್ರವಾರ ನಡೆಯುವ 3ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್’ನ ಯುವ ಪಡೆ, ಗುಜರಾಜ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಆತಿಥೇಯ ಬೆಂಗಳೂರು ಬುಲ್ಸ್ (Bengaluru Bulls) ತಂಡಕ್ಕೆ ಶುಕ್ರವಾರ ಹಾಗೂ ಶನಿವಾರ ಯಾವುದೇ ಪಂದ್ಯಗಳಿಲ್ಲ. ಭಾನುವಾರ ನಡೆಯುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಬುಲ್ಸ್ ಪಡೆ ಯು.ಪಿ ಯೋಧಾ ತಂಡವನ್ನು ಎದುರಿಸಲಿದೆ.

ಅಕ್ಟೋಬರ್ 7ರಂದು ನಡೆದ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 34-29ರಲ್ಲಿ ಮಣಿಸಿ ಶುಭಾರಂಭ ಮಾಡಿದ್ದ ಬೆಂಗಳೂರು ಬುಲ್ಸ್, 2ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ 41-39ರ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತ್ತು. ಆದರೆ 3ನೇ ಪಂದ್ಯದಲ್ಲಿ ಬಲಿಷ್ಠ ಬೆಂಗಾಲ್ ವಾರಿಯರ್ಸ್ ವಿರುದ್ಧ 42-33ರಲ್ಲಿ ಸೋಲು ಕಂಡಿತ್ತು.

ಪ್ರೋ ಕಬ್ಬಡಿ (Pro kabaddi league) ಅಗ್ರಸ್ಥಾನದಲ್ಲಿ ದಬಾಂಗ್‌ ಡೆಲ್ಲಿ

ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 3ರಲ್ಲಿ 2ನ್ನು ಗೆದ್ದು ಒಂದನ್ನು ಸೋತಿರುವ ಬೆಂಗಾಲ್ ವಾರಿಯರ್ಸ್ 2ನೇ ಸ್ಥಾನದಲ್ಲಿದೆ. ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದಿರುವ ಹರ್ಯಾಣ ಸ್ಟೀಲರ್ಸ್ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ರೆ, 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ಒಂದು ಪಂದ್ಯ ಸೋತಿರುವ ಬೆಂಗಳೂರು ಬುಲ್ಸ್ 4ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : Bengal Warriors vs Bengaluru Bulls : ಬೆಂಗಳೂರು ಬುಲ್ಸ್‌ಗೆ ಮೊದಲ ಸೋಲು, ಮನೆಯಂಗಳದಲ್ಲಿ ಸೋತ ಕೆಂಪುಗೂಳಿಗಳು

ಇದನ್ನೂ ಓದಿ : M S Dhoni : ಸಚಿನ್ ತೆಂಡೂಲ್ಕರ್ ಅವರಂತೆ ಆಡಲು ಬಯಸಿದ್ದೆ ಆದ್ರೆ, ಮಹೇಂದ್ರ ಸಿಂಗ್ ಧೋನಿ ಹೇಳಿದ್ದೇನು..?

Pro kabaddi league u Mumba vs Tamil Thalaivas triple dhamaka

Comments are closed.