ಹಮೂನ್‌ ಚಂಡಮಾರುತ ಆರ್ಭಟ : ಕರಾವಳಿಯಲ್ಲಿ 3 ದಿನ ಎಲ್ಲೋ ಅಲರ್ಟ್‌

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್‌ ಚಂಡಮಾರುತದ ಎಫೆಕ್ಟ್‌ ಇದೀಗ ಕರ್ನಾಟಕಕ್ಕೆ ತಟ್ಟಿದೆ. ಹೀಗಾಗಿ ಅಕ್ಟೋಬರ್‌ 26 ರಿಂದ ನವೆಂಬರ್‌ 1ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮತ್ತೆ ಮಳೆ ಸುರಿಯುವ ಮುನ್ಸೂಚನೆ ದೊರೆತಿದೆ. ಈಗಾಗಲೇ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹಮೂನ್‌ ಚಂಡಮಾರುತದ ಎಫೆಕ್ಟ್‌ ಇದೀಗ ಕರ್ನಾಟಕಕ್ಕೆ ತಟ್ಟಿದೆ. ಹೀಗಾಗಿ ಅಕ್ಟೋಬರ್‌ 26 ರಿಂದ ನವೆಂಬರ್‌ 1ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಅರಬ್ಬಿಸಮುದ್ರದಲ್ಲಿ ಸೃಷ್ಟಿಯಾಗಿರುವ ತೇಜ್‌ ಚಂಡಮಾರುತಕ್ಕೆ ಹೋಲಿಸಿದ್ರೆ ಹಮೂನ್‌ ಅಬ್ಬರ ಜೋರಾಗಿ ಇರಲಿದೆ. ಹೀಗಾಗಿ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

Hamoon Cyclone Heavy Rain Alert in Coastal Karnataka Next 3 days Declared Yellow Alert
Image Credit to Original Source

ಕರಾವಳಿ ಮಾತ್ರವಲ್ಲದೇ ಸಿಲಿಕಾನ್‌ ಸಿಟಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಇನ್ನು ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳುರು, ಶಿವಮೊಗ್ಗ ಹಾಸನ, ಮಡಿಕೇರಿಯಲ್ಲಿಯೂ ವರುಣ ಅಬ್ಬರಿಸಲಿದ್ದಾನೆ. ಅರಮನೆ ನಗರಿ ಮೈಸೂರು, ಕೋಲಾರ, ರಾಮನಗರ  ಮುಂತಾದ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ಆಯಾಯ ಜಿಲ್ಲಾಡಳಿತಗಳು ಸಕಲ ಸಿದ್ದತೆಗಳನ್ನು ಮಾಡಿಕೊಂಡಿವೆ.

ಇದನ್ನೂ ಓದಿ : ಸರಕಾರದ ಹೊಸ ರೂಲ್ಸ್‌ : ನವೆಂಬರ್ 1 ರಿಂದ ಬದಲಾಗಲಿದೆ ಈ ನಾಲ್ಕು ನಿಯಮ

ಕರ್ನಾಟಕ ಮಾತ್ರವಲ್ಲದೇ ನೆರೆಯ ತಮಿಳುನಾಡಿನಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಅದ್ರಲ್ಲೂ ದಕ್ಷಿಣ ತಮಿಳುನಾಡು ರಾಜ್ಯದಲ್ಲಿ ಹೈ ಅಲರ್ಟ್‌ ಘೋಣಷೆ ಮಾಡಲಾಗಿದೆ. ಅಕ್ಟೋಬರ್‌ 29ರಂದು ತಮಿಳುನಾಡಿನ ವಿಲ್ಲುಪುರ, ಕಡಲೂರು, ಆರಿಯಲೂರು, ಪೆರಂಬಲೂರ್‌, ಕಲ್ಲುಕುರಿಚಿ, ತಾಂಜಾವೂರು, ಪುದುಕ್ಕೊಟ್ಟೈ, ನಾಗಪಟ್ಟಣ ಮುಂತಾದ ಕಡೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Hamoon Cyclone Heavy Rain Alert in Coastal Karnataka Next 3 days Declared Yellow Alert
Image Credit to Original Source

ಇತ್ತ ಕೇರಳದಲ್ಲಿಯೂ ಹಮೂನ್‌ ಆರ್ಭಟಿಸಲಿದೆ. ಭಾರತೀಯ ಹಮಾಮಾನ ಇಲಾಖೆ ಕೇರಳ ರಾಜ್ಯದಲ್ಲಿ ಎಚ್ಚರಿಕೆಯನ್ನು ರವಾನಿಸಿದೆ. ಮುಂದಿನ ಭಾನುವಾರ ಹಾಗೂ ಸೋಮವಾರ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಅದ್ರಲ್ಲೂ ಇಡುಕ್ಕಿ, ಕೋಝಿಕೋಡ್‌, ಎರ್ನಾಕುಲಂ, ಪಾಲಕ್ಕಾಡ್‌, ಆಳಪ್ಪುಳ, ತ್ರಿಶೂರ್‌, ಕಣ್ಣೂರು ಜಿಲ್ಲೆಗಳಲ್ಲಿಯೂ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಇದನ್ನೂ ಓದಿ : 10 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮೀ ಭಾಗ್ಯ

ಕರ್ನಾಟಕ, ಕೇರಳ, ತಮಿಳುನಾಡ, ಆಂಧ್ರಪ್ರದೇಶ, ಸಿಕ್ಕಿಂ, ಮೇಘಾಲಯ, ಅಸ್ಸಾಂ, ಅರುಣಾಚಲ ಪ್ರದೇಶ, ತ್ರಿಪುರ, ಮಣಿಪುರ, ಅಂಡಮಾನ್‌ ನಿಕೋಬಾರ್‌ ದ್ವೀಪ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿಯೂ ಮಳೆಯಾಗುವ ಕುರಿತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ದಸರಾ ಮುಗಿದು ದೀಪಾವಳಿ ಸಮೀಪಿಸಯತ್ತಿರುವ ಬೆನ್ನಲ್ಲೇ ಮಳೆ ಆಗಮನ ಆತಂಕ ಮೂಡಿಸಿದೆ.

ಇದನ್ನೂ ಓದಿ : ಬಿಪಿಎಲ್‌ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ : ಅನ್ನಭಾಗ್ಯ ಬೆನ್ನಲ್ಲೇ ಸರಕಾರದಿಂದ ಮತ್ತೊಂದು ಯೋಜನೆ

ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಭತ್ತದ ಕಟಾವು ಕಾರ್ಯ ಆರಂಭಗೊಂಡಿದ್ದು, ಇದೀಗ ಹಮೂನ್‌ ಚಂಡಮಾರುತದಿಂದಾಗಿ ಅನ್ನದಾತರು ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ಒಂದು ವಾರಗಳಲ್ಲಿ ಮಳೆ ಸುರಿದ್ರೆ ಭತ್ತದ ಪೈರು ನಾಶವಾಗುವ ಭೀತಿ ಎದುರಾಗಿದೆ.  ಈ ಬಾರಿ ಮಳೆ ಭತ್ತದ ನಾಟಿಯ ಸಂದರ್ಭದಲ್ಲಿ ಕೈಕೊಟ್ಟಿತ್ತು. ಆದ್ರೀಗ ಕಟಾವಿನ ಸಂದರ್ಭದಲ್ಲೇ ಮತ್ತೆ ಆರ್ಭಟಿಸಲಿದೆ.

Hamoon Cyclone Heavy Rain Alert in Coastal Karnataka Next 3 days Declared Yellow Alert

Comments are closed.