Heart attack death: ಭೀಕರ ಚಳಿಗೆ ಉತ್ತರ ತತ್ತರ : 5 ದಿನದಲ್ಲಿ 98 ಮಂದಿ ಹೃದಯಾಘಾತದಿಂದ ಸಾವು

ಉತ್ತರ ಪ್ರದೇಶ: (Heart attack death) ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಹಲವು ಕಡೆ ಭೀಕರ ಚಳಿಯ ವಾತಾವರಣ ಏರ್ಪಟ್ಟಿದೆ. ಇದೀಗ ಭೀಕರ ಚಳಿಯಿಂದಾಗಿ ಕಳೆದು ಐದು ದಿನಗಳಲ್ಲಿ ಹೃದಯಾಘಾತಕ್ಕೊಳಗಾಗಿ 98 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ದಿನೇ ದಿನೇ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚಿಕ್ಕ ವಯಸ್ಸಿನಿಂದ ಹಿಡಿದು ವಯಸ್ಕರವರೆಗೂ ಹೃದಯಾಘಾತ ಕಾಡುತ್ತಿದೆ. ಇದೀಗ ಚಳಿಯ ವಾತಾವರಣ ಕೂಡ ಹೆಚ್ಚಾಗಿದ್ದು ಚಳಿಯಿಂದಾಗಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಐದು ದಿನದಲ್ಲಿ ಉತ್ತರ ಪ್ರದೇಶದಲ್ಲಿ ಹೃದಯಾಘಾತಕ್ಕೆ 98 ಮಂದಿ ಬಲಿಯಾಗಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ 98 ಜನರಲ್ಲಿ 44 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 54 ಮಂದಿ ಚಿಕಿತ್ಸೆಗೂ ಮೊದಲೇ ಸಾವನ್ನಪ್ಪಿದ್ದಾರೆ (Heart attack death) ಎಂದು ಎಲ್‌ ಪಿ ಎಸ್‌ ಇನ್ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಮಾಹಿತಿ ನೀಡಿದೆ. ಕಳೆದ ಒಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ನಿಗಾ ಘಟಕ ಮತ್ತು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಭೀಕರ ಚಳಿಯ ಪರಿಣಾಮ ತೀವ್ರ ಶೀತವಾಗಿ ಶನಿವಾರ ಒಂದೇ ದಿನಕ್ಕೆ 14 ಮಂದಿ ಮೃತಪಟ್ಟಿರುವುದಾಗಿ ಲಕ್ಷ್ಮೀಪತ್‌ ಸಿಂಘಾನಿಯಾ ಇನ್ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್‌ ಸರ್ಜರಿ ಮಾಹಿತಿ ನೀಡಿದೆ.

ಹೃದಯಾಘಾತವಾಗಲೂ ಕಾರಣ:
ವಿಪರೀತ ಚಳಿಯಿಂದಾಗಿ ಮಾನವನ ದೇಹದಲ್ಲಿನ ರಕ್ತ ಪರಿಚಲನೆಯಲ್ಲಿ ಏರುಪೇರಾಗುತ್ತದೆ. ರಕ್ತದಲ್ಲಿ ಒತ್ತಡ ಹೆಚ್ಚು ಕಡಿಮೆ ಆದಾಗ ಹೃದಯ ಮತ್ತು ಮೆದುಳಿನ ಕೆಲಸ ನಿಧಾನಗತಿಗೆ ಸಾಗುತ್ತದೆ. ಕೊನೆಗೆ ರಕ್ತ ಹೆಪ್ಪುಗಟ್ಟಿ ಕಾರ್ಯ ನಿಲ್ಲಿಸುತ್ತದೆ. ಇದರಿಂದ ಹೃದಯಾಘಾತದ ಜೊತೆಗೆ ಮೆದುಳು ನಿಷ್ಕ್ರೀಯಗೊಳ್ಳುತ್ತದೆ.

ಇದನ್ನೂ ಓದಿ : Fact check on currency note: ಹೊಸ ನೋಟಿನ ಮೇಲೆ ಬರೆದ್ರೆ ನೋಟ್ ಅಮಾನ್ಯ : ಈ ಸುದ್ದಿಯ ಅಸಲಿ ಸತ್ಯವೇನು ?

ಇದನ್ನೂ ಓದಿ : ಸಾಲ ವಂಚನೆ ಪ್ರಕರಣ : ಐಸಿಐಸಿಐ ಬ್ಯಾಂಕ್ ಎಂಡಿ ಚಂದಾ ದೀಪಕ್ ಕೊಚ್ಚರ್ ದಂಪತಿಗೆ ಜಾಮೀನು

ಇದನ್ನೂ ಓದಿ : Prohibition of extremist organizations: ಭಯೋತ್ಪಾದನ ನಿಗ್ರಹಕ್ಕೆ ಕಠಿಣ ಕ್ರಮ: ಎರಡು ಉಗ್ರ ಬೆಂಬಲಿತ ಸಂಘಟನೆಗಳು ನಿಷೇಧ

ಇದಕ್ಕೆ ವಯಸ್ಸಿನ ಮಿತಿಯಿಲ್ಲ. ನವಜಾತ ಶಿಶುವಿನಿಂದ ಹಿಡಿದು ವೃದ್ದರವರೆಗೂ ಹೃದಯಾಘಾತ ಸಂಭವಿಸುತ್ತದೆ. ಆದ ಕಾರಣ ವಿಪರೀತ ಚಳಿಯ ಸಂದರ್ಭದಲ್ಲಿ ಹೃದಯ ಸಂಬಂಧಿತ ಅಥವಾ ಇನ್ನಾವುದೇ ರೋಗಿಗಳಿದ್ದಲ್ಲಿ ವಿಶೇಷ ಕಾಳಜಿ ವಹಿಸುವುದು ಉತ್ತಮ. ಹದಗೆಡುತ್ತಿರುವ ವಾತಾವರಣಕ್ಕೆ ರೋಗಿಗಳು ಬೇಗನೇ ಹೃದಯಾಘಾತಕ್ಕೆ ತುತ್ತಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ರೋಗಿಗಳು ಮಾತ್ರವಲ್ಲದೇ ಉಳಿದವರು ಕೂಡ ಚಳಿಯ ವಾತಾವರಣದಲ್ಲಿ ಬೆಚ್ಚಗಿರುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

Heart attack death: Terrible cold weather: 98 people died of heart attack in 5 days

Comments are closed.