Himachal Pradesh : ಭೀಕರ ಬಸ್​ ಅಪಘಾತ : ಶಾಲಾ ಮಕ್ಕಳು ಸೇರಿದಂತೆ 16 ಮಂದಿ ದುರ್ಮರಣ

ಹಿಮಾಚಲ ಪ್ರದೇಶ : Himachal Pradesh : ಅವರೆಲ್ಲ ಬೆಳಗ್ಗೆ ಎಂದಿನಂತೆ ತಮ್ಮ ಕೆಲಸಕ್ಕೆ ಹೊರಟವರು, ಭಾನುವಾರದ ರಜೆಯನ್ನು ಮುಗಿಸಿ ಮಕ್ಕಳು ಕೂಡ ಶಾಲೆಗೆ ಹೊರಟಿದ್ದರು. ಆದರೆ ವಿಧಿಯಾಟ ಅವರ ಬಾಳಲ್ಲಿ ಇನ್ನೊಂದು ಕತೆಯನ್ನೇ ಬರೆದಿತ್ತು. ಖಾಸಗಿ ಬಸ್​ ಹತ್ತಿ ಹೊರಟಿದ್ದ ಅವರ ಬಾಳಲ್ಲಿ ಸಂಪೂರ್ಣ ಕತ್ತಲು ಕವಿದಿತ್ತು. ಖಾಸಗಿ ಬಸ್​ ಕಂದಕಕ್ಕೆ ಉರುಳಿದ ಪರಿಣಾಮ ಶಾಲಾ ಮಕ್ಕಳು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕುಲು ಡೆಪ್ಯೂಟಿ ಕಮಿಷನರ್​​ ಅಶುತೋಷ್​ ಗರ್ಗ್​ ಈ ವಿಚಾರವಾಗಿ ಅಧಿಕೃತ ಮಾಹಿತಿಯನ್ನು ನೀಡಿದ್ದು ಸಾಯಿಂಜ್​ಗೆ ತೆರಳುತ್ತಿದ್ದ ಬಸ್​​ ಬೆಳಗ್ಗೆ 8:30ರ ಸುಮಾರಿಗೆ ಜಂಗ್ಲಾ ಗ್ರಾಮದ ಬಳಿಯಲ್ಲಿ ಕಂದಕಕ್ಕೆ ಉರುಳಿದೆ ಎಂದು ಮಾಹಿತಿ ನೀಡಿದ್ದಾರೆ.

ಅಪಘಾತದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸ್​ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದೆ. ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಅಶುತೋಷ್​ ಗರ್ಗ್ ಮಾಹಿತಿ ನೀಡಿದ್ದಾರೆ. ಗಾಯಗೊಂಡವರಲ್ಲಿ ಬಹುತೇಕರ ಸ್ಥಿತಿ ಚಿಂತಾಜನಕವಾಗಿರೋದ್ರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಈ ನಡುವೆ ಹಿಮಾಚಲ ಪ್ರದೇಶ ಸಿಎಂ ಜೈರಾಮ್​ ಠಾಕೂರ್ ಈ ವಿಚಾರವಾಗಿ ಟ್ವೀಟ್​ ಮಾಡಿದ್ದು ಗಾಯಾಳುಗಳಿಗೆ ನೆರವಾಗಲು ಸಂಪೂರ್ಣ ರಕ್ಷಣಾ ತಂಡ ಅಪಘಾತ ನಡೆದ ಸ್ಥಳದಲ್ಲಿದೆ ಎಂದು ಹೇಳಿದ್ದಾರೆ.
ಕುಲ್ಲುವಿನ ಸೈಂಜ್​ ಕಣಿವೆಯಲ್ಲಿ ಖಾಸಗಿ ಬಸ್​ ಅಪಘಾತಕ್ಕೆ ಒಳಗಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಗಾಯಾಳುಗಳನ್ನು ರಕ್ಷಿಸುವ ಹಾಗೂ ಆಸ್ಪತ್ರೆಗೆ ಸಾಗಿಸುವ ಕಾರ್ಯಗಳನ್ನು ಮಾಡಲು ರಕ್ಷಣಾ ತಂಡ ಸ್ಥಳದಲ್ಲಿದೆ.ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಅಂತಾ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್​ ಟ್ವೀಟಾಯಿಸಿದ್ದಾರೆ.


10 ದಿನಗಳ ಹಿಂದೆಯಷ್ಟೇ ಹಿಮಾಚಲ ಪ್ರದೇಶ ಶಿಮ್ಲಾ ಜಿಲ್ಲೆಯಲ್ಲಿ ಪಿಕಪ್​ ವಾಹನ ಕಂದಕಕ್ಕೆ ಉರುಳಿದ ಪರಿಣಾಮ 28 ಮಂದಿ ಗಾಯಗೊಂಡಿದ್ದರು. 9 ಮಂದಿ ಸ್ಥಿತಿ ಗಂಭೀರವಾಗಿದ್ದು ಇವರನ್ನು ಇಂದಿರಾ ಗಾಂಧಿ ಮೆಡಿಕಲ್​ ಕಾಲೇಜು ಹಾಗೂ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ. ಥಿಯೋಗ್ ಬಳಿಯ ಬುಗಾರೊ ನುಲ್ಲಾ ಎಂಬಲ್ಲಿ ಪಿಕಪ್ ವಾಹನವು ಕಮರಿಗೆ ಬಿದ್ದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಗುರುದ್ವಾರದಲ್ಲಿ ಮಲಗುತ್ತಿದ್ದ ಹುಡುಗ.. ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್ !

ಗುಡ್ ನ್ಯೂಸ್ : ರೋಹಿತ್ ಶರ್ಮಾಗೆ ಕೋವಿಡ್ ನೆಗೆಟಿವ್ !

Himachal Pradesh: 16, including school children, dead as private bus falls into gorge in Kullu

Comments are closed.