Shoulder Pain : ಭುಜದ ನೋವಿನಿಂದ ಬಳಲುತ್ತಿದ್ದೀರಾ? ಈ ವ್ಯಾಯಾಮಗಳನ್ನು ಮಾಡಿ ಭುಜದ ನೋವು ನಿವಾರಿಸಿಕೊಳ್ಳಿ!!

ಕಂಪ್ಯೂಟರ್‌(Computer) ಮುಂದೆ ಗಂಟೆಗಟ್ಟಲೆ ಕುಳಿತು ಟೈಪ್‌ ಮಾಡುವ ಬಹುತೇಕ ಜನರು ಎದುರಿಸುವ ಸಾಮಾನ್ಯ ತೊಂದರೆ ಎಂದರೆ ಭುಜದ ನೋವು(Shoulder Pain). ಹಗಲಿನಲ್ಲಿ ಅದರ ಅನುಭವ ಕಡಿಮೆಯಾದರೂ, ರಾತ್ರಿಯಲ್ಲಿ ಉಲ್ಭಣವಾಗುತ್ತದೆ. ಕೆಲವೊಮ್ಮೆ ಅದು ಕೈಗಳನ್ನು ಅಲುಗಾಡಿಸುವುದು ಕಷ್ಟಸಾಧ್ಯ ಎನಿಸಿಬಿಡುತ್ತದೆ. ಭುಜದ ನೋವಿಗೆ ಸ್ಪಷ್ಟ ಕಾರಣ ತಿಳಿದಿಲ್ಲ. ಆದರೆ ನಿರಂತರವಾಗಿ ಕೆಲಸ ಮಾಡುವುದರಿಂದ ಭುಜದ ಸುತ್ತಲಿನ ಅಂಗಾಂಶಗಳು ಘಾಸಿಯಾಗುವುದರಿಂದ ಸಂಭವಿಸಬಹುದು. ಇದು ಕೈಗಳನ್ನು ಎತ್ತಿದಾಗ, ಇಲ್ಲವೆ ಮಡಿಚಿದಾಗ ಅನುಭಕ್ಕೆ ಬರುವದು. ಕೆಲವೊಮ್ಮ ಅಲ್ಲಿ ಶೇಖರಣೆಗೊಂಡ ಹೆಚ್ಚಿನ ಕ್ಯಾಲ್ಸಿಯಂ ಸಹ ಕಾರಣವಾಗಬಹುದು.

ಭುಜದ ನೋವು(Shoulder Pain) ನಿವಾರಿಸಲು ಸಹಾಯ ಮಾಡುವ ಕೆಲವು ಉತ್ತಮ ವ್ಯಾಯಾಮಗಳು :

  • ಭುಜವನ್ನು ತಿರುಗಿಸುವುದು:
    ಹೆಸರೇ ಹೇಳುವಂತೆ ಇದು ಭುಜವನ್ನು ವೃತ್ತಾಕಾರದಲ್ಲಿ ತಿರುಗಿಸುವ ವ್ಯಾಯಾಮವಾಗಿದೆ. ನಿಮ್ಮ ಕೈ ಮಡಿಚಿ ಬೆರಳುಗಳನ್ನು ಭುಜದ ಮೇಲೆ ಇಡಿ. ಅದು ತ್ರಿಕೋನಾಕೃತಿಯಲ್ಲಿ ಇರಲಿ. ಪ್ರದಕ್ಷಿಣವಾಗಿ ಮತ್ತು ಅಪ್ರದಕ್ಷಿಣವಾಗಿ(Clockwise and Anticlockwise) ವೃತ್ತಾಕಾರವಾಗಿ ತಿರುಗಿಸಿ.
    ಈ ವ್ಯಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ನೋವು ನಿವಾರಿಸಿಕೊಳ್ಳಬಹುದು.
  • ಲೋಲಕದಂತೆ ತಿರುಗಿಸಿ (Pendulum rotation):
    ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ. ಎರಡೂ ಕೈಗಳನ್ನು ಇಳಿಬಿಡಿ. ಅದು ನೆಲಕ್ಕೆ ಸಮಾನಾಂತರವಾಗಿರಲಿ. ಈಗ ಅವುಗಳನ್ನು ವೃತ್ತಾಕಾರವಾಗಿ ತಿರುಗಿಸಿ. ಮೊದಲು ಪ್ರದಕ್ಷಿಣಾಕಾರವಾಗಿ ತಿರುಗಿಸಿ ನಂತರ ಅಪ್ರದಕ್ಷಿಣವಾಗಿ ತಿರುಗಿಸಿ.
  • ಭುಜವನ್ನು ಹಿಗ್ಗಿಸುವುದು:
    ಕೈಗಳನ್ನು ಮುಂದಕ್ಕೆ ಚಾಚುವುದು ನಂತರ ಕೈಗಳನ್ನು ಅಗಲ ಮಾಡುತ್ತಾ ಭುಜಕ್ಕೆ ಸಮಾನಾಂತರವಾಗಿರಿಸಿ. ನಿಮ್ಮ ಎರಡೂ ಕೈಗಳು ಸರಳ ರೇಖೆಯಲ್ಲಿರುವಂತೆ ಮಾಡಿ. ಇದನ್ನು ಕನಿಷ್ಟ ನಾಲ್ಕೈದು ಬಾರಿಯಾದರೂ ಅಭ್ಯಾಸ ಮಾಡಿ.
  • ಟವೆಲ್‌ ಬಳಸಿ ಭುಜವನ್ನು ಹಿಗ್ಗಿಸಿ :
    ಭುಜವನ್ನು ಹಿಗ್ಗಿಸುವ ವ್ಯಾಯಾಮವನ್ನು ಟವೆಲ್‌ ಬಳಸಿಯೂ ಮಾಡಬಹುದು. ಹೇಗೆಂದರೆ, ಟವೆಲ್‌ ನ ಎರಡೂ ತುದಿಗಳನ್ನು ಕೈಯಲ್ಲಿ ಹಿಡಿದುಕೊಳ್ಳಿ. ಎರಡೂ ಕೈಗಳನ್ನು ಜೋಡಿಸಿ, ನಂತರ ಕೈಗಳನ್ನು ಹಿಗ್ಗಿಸಿ. ಅಂದರೆ ಟವೆಲ್‌ ಹಿಗ್ಗಸಿ. ಹೀಗೆ ಮಾಡುವುದರಿಂದ ಭಜುದ ನೋವು ನಿವಾರಿಸಿಕೊಳ್ಳಬಹುದು.

ಇಲ್ಲಿ ಹೇಳಿರುವ ಸರಳ ವ್ಯಾಯಾಮಗಳು ವೈದ್ಯಕೀಯ ಸಮಸ್ಯೆಗಳಿಲ್ಲದವರಿಗಾಗಿದೆ. ತೀವ್ರತರವಾದ ನೋವಿಗೆ ನಿಮ್ಮ ಆಪ್ತ ವೈದ್ಯರನ್ನೇ ಸಂಪರ್ಕಿಸಿ.

ಇದನ್ನೂ ಓದಿ : Musty-smelling Clothes : ಮಳೆಗಾಲದಲ್ಲಿ ಬಟ್ಟೆಗಳಿಂದ ಕೆಟ್ಟ ವಾಸನೆ ಬರುತ್ತಿದೆ ಎಂಬ ಚಿಂತೆಯೇ? ಅದಕ್ಕೆ ಹೀಗೆ ಮಾಡಿ…

ಇದನ್ನೂ ಓದಿ : Bedtime Yoga Benefits : ನಿದ್ರೆಯ ಕೊರತೆ ಕಾಡುತ್ತಿದೆಯೇ? ಈ ಯೋಗಾಸನಗಳನ್ನು ಟ್ರೈ ಮಾಡಿ!

(Shoulder Pain try these simple exercises for frozen shoulder)

Comments are closed.