Bmtc: ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ…! ಸಪ್ಟೆಂಬರ್ ನಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕಲ್ ಬಸ್….!!

ಕೊನೆಗೂ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಬಿಎಂಟಿಸಿ ಯಶಸ್ವಿಯಾಗಿದ್ದು, ಮುಂದಿನ ತಿಂಗಳಿನಿಂದ ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕಲ್ ಬಸ್ ಗಳು ಸಂಚಾರ ಆರಂಭಿಸಲಿವೆ.

ಮೊದಲ ಹಂತದಲ್ಲಿ ಬಿಎಂಟಿಸಿ ನಗರದ ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಎಲೆಕ್ಟ್ರಿಕಲ್ ಬಸ್ ಸಂಚಾರ ಆರಂಭಿಸಲಿದ್ದು, ನಗರ ಕೆ.ಆರ್.ಪುರಂ,ಕೆಂಗೇರಿ ಹಾಗೂ ಯಶ್ವಂತಪುರ ಡಿಪೋಗಳಿಂದ ಎಲೆಕ್ಟ್ರಿಕಲ್ ಬಸ್ ಗಳು ಓಡಲಿವೆ.

ಎನ್ಟಿಪಿಸಿ ಹಾಗೂ ಜೆಎಂಬಿ ಜಂಟಿಯಾಗಿ 9 ಮೀಟರ್ ಉದ್ದದ ಬಸ್ ಗಳನ್ನು ಪೊರೈಸಲಿದ್ದು, ಮೊದಲ ಹಂತದಲ್ಲಿ ನಾನ್ ಎಸಿ ಬಸ್ ಗಳು ರಸ್ತೆಗಿಳಿಯಲಿವೆ. ಒಟ್ಟು 90 ಬಸ್ ಗಳನ್ನು ಬಿಎಂಟಿಸಿ ಖರೀದಿಸಿದ್ದು, 2021 ರ ಡಿಸೆಂಬರ್ ಅಂತ್ಯಕ್ಕೆ ಎಲ್ಲ ಬಸ್ ಗಳು ಪೊರೈಕೆಯಾಗಲಿದೆ.

ಕೊರೋನಾ ಹಿನ್ನೆಲೆಯಲ್ಲಿ ಎಲೆಕ್ಟ್ರಿಕಲ್ ಬಸ್ ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ವಿಳಂಬಮಾಡುತ್ತಿದೆ. ಬಸ್ ಗಳನ್ನು ಪೊರೈಕೆ ಮಾಡುವ ಕಂಪನಿಯೇ ಚಾಲಕರನ್ನು ನೇಮಿಸಲಿದ್ದು, ಚಾಲಕರ ವೇತನ, ಬಸ್ ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಶುಲ್ಕವನ್ನು ಕಂಪನಿಯೇ ಭರಿಸಲಿದೆ. ಕೇವಲ ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೇಮಿಸುತ್ತದೆ.

ಈ ಪ್ರಾಯೋಗಿಕ ಎಲೆಕ್ಟ್ರಿಕಲ್ ಬಸ್ ಸಂಚಾರ ಯಶಸ್ವಿಯಾದಲ್ಲಿ ಡಿಸೇಲ್ ದರ ಏರಿಕೆಯಿಂದ ನಷ್ಟದಲ್ಲಿರುವ ಬಿಎಂಟಿಸಿ ಮತ್ತಷ್ಟು ಬಸ್ ಗಳನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ.

Comments are closed.