(Himanta Biswa )ಅರಣ್ಯ ಮಾರ್ಗದಲ್ಲಿನ ರಸ್ತೆಯಲ್ಲಿ ಸಾಗುವಾಗ ಕಾಡು ಪ್ರಾಣಿಗಳು ಕಾಣಸಿಗುವುದು ಸಾಮಾನ್ಯ. ಕೆಲವೊಮ್ಮೆ ಸವಾರರು ಪ್ರಾಣಿಗಳ ದೃಶ್ಯ ಹಾಗೂ ಪೋಟೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಾರೆ. ಇದೀಗ ಅಸ್ಸಾಂನ ಕಾಜಿರಂಗದ ಹೆದ್ದಾರಿಯಲ್ಲಿ ಘೇಂಡಾಮೃಗವೊಂದು ಟ್ರಕ್ ಗೆ ಡಿಕ್ಕಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
(Himanta Biswa)ಈ ವಿಡಿಯೋವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದ ಕೆಳಗೆ ಘೇಂಡಾಮೃಗಗಳು ನಮ್ಮ ವಿಶೇಷ ಸ್ನೇಹಿತರು, ಅವರ ಜಾಗದಲ್ಲಿ ಯಾವುದೇ ಉಲ್ಲಂಘನೆಯನ್ನು ಸಹಿಸುವುದಿಲ್ಲ.ಹಲ್ದಿಬರಿಯಲ್ಲಿ ನಡೆದ ಈ ದುರದೃಷ್ಟಕರ ಘಟನೆಯಲ್ಲಿ ಘೇಂಡಾಮೃಗ ಬದುಕುಳಿದಿದೆ. ಲಾರಿಯನ್ನು ಕೂಡ ತಡೆದು ದಂಡ ವಿಧಿಸಲಾಗಿದೆ .ಇಂತಹ ಅವಗಡವನ್ನು ತಡೆಯಲು 32 ಕಿಮೀ ಎಲಿವೇಟೆಡ್ ಕಾರಿಡಾರ್ ನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
Rhinos are our special friends; we’ll not allow any infringement on their space.
— Himanta Biswa Sarma (@himantabiswa) October 9, 2022
In this unfortunate incident at Haldibari the Rhino survived; vehicle intercepted & fined. Meanwhile in our resolve to save animals at Kaziranga we’re working on a special 32-km elevated corridor. pic.twitter.com/z2aOPKgHsx
Why can’t we fence off the roads and highways that are cutting through the forests????? Under/ over passes desperately needed!!! 🤦🏻♀️ when will we learn and act! https://t.co/YTZ4ST7Gu2
— Raveena Tandon (@TandonRaveena) October 9, 2022
ಪ್ರಾಣಿಗಳಿಗೆ ತೊಂದರೆಯಾಗುವ ರಸ್ತೆಮಾರ್ಗವನ್ನು ಬಂದ್ ಮಾಡಿಸಿ, ಅಂಡರ್ ಪಾಸ್ ನಲ್ಲಿ ಹೊಗುವಂತಹ ಮಾರ್ಗದ ವ್ಯವಸ್ಥೆ ಮಾಡಬೇಕು. ಇಂತಹ ದುರ್ಘಟನೆ ನಡೆದರು ಇನ್ನು ಎಚ್ಚೆತ್ತು ಕೊಂಡಿಲ್ಲ ಎಂದು ನಟಿ ರವಿನಾ ಟಂಡನ್ ಆಕ್ರೋಷವನ್ನು ಟ್ವಿಟರ್ ಮೂಲಕ ಹೊರ ಹಾಕಿ ಪ್ರಾಣಿಗಳಿಗೆ ದಯವನ್ನು ತೋರಿಸಿದ್ದಾರೆ.
ಇದನ್ನೂ ಓದಿ:Crazy Star Ravichandran : ಮನೆ ಖಾಲಿ ಮಾಡಿದ ಹಿಂದಿನ ಸತ್ಯ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
ಇದನ್ನೂ ಓದಿ:Karnataka Rains : ಕರ್ನಾಟಕದಲ್ಲಿ ಮುಂದುವರಿದ ಮಳೆಯ ಅಬ್ಬರ ; ಯೆಲ್ಲೋ ಅಲರ್ಟ್ ಘೋಷಣೆ
ಇದನ್ನೂ ಓದಿ:Uddhav Takre Ekant shinde : ಉದ್ಧವ್, ಶಿಂಧೆ ಬಣಕ್ಕೆ ಹೊಸ ಹೆಸರು, ಹೊಸ ಚಿಹ್ನೆ
ಆಗಾಗ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ ಎಂದು ಪ್ರಾಣಿಗಳನ್ನು ದೂರುವುದು ಉಂಟು. ಆದರೆ ಮನುಷ್ಯ ತನ್ನ ದುರಾಸೆಯಿಂದಾಗಿ ಮತ್ತು ಅಭಿವೃದ್ದಿಯ ಹೆಸರಲ್ಲಿ ಕಾಡನ್ನು ನಾಶ ಮಾಡುತ್ತಿದ್ದಾನೆ. ಈ ವಿಡಿಯೋದಲ್ಲಿ ಲಾರಿಯು ವೇಗದಲ್ಲಿ ಬರುತ್ತಿರುವಾಗ ಘೇಂಡಾಮೃಗವು ಓಡಿ ರಸ್ತೆಯನ್ನು ದಾಟಲು ಬರುತ್ತದೆ ಆಗ ಲಾರಿಯ ಚಕ್ರಕ್ಕೆ ಘೇಂಡಾಮೃಗ ಡಿಕ್ಕಿ ಹೊಡೆದಿದೆ ಗಾಬರಿಯಿಂದ ಮತ್ತೆ ಕಾಡಿನ ಕಡೆ ಓಡುವಾಗ ಜಾರಿ ಬಿದ್ದು ಅಂತು ಇಂತು ಕಾಡನ್ನು ಸೇರಿದೆ.
Truck hits a rhinoceros: Video goes viral