Syed Mushtaq Ali T20 : ಇಂದಿನಿಂದ ಸೈಯದ್ ಮುಷ್ತಾಕ್ ಟಿ20 ಟೂರ್ನಿ: ಮಯಾಂಕ್ ನಾಯಕತ್ವದ ಕರ್ನಾಟಕಕ್ಕೆ ಮಹಾರಾಷ್ಟ್ರ ಎದುರಾಳಿ

ಮೊಹಾಲಿ: ಎರಡು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸೈಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali T20) ಟೂರ್ನಿಯಲ್ಲಿ ಮಂಗಳವಾರ ತನ್ನ ಅಭಿಯಾನ ಆರಂಭಿಸಿದ್ದು, ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. 2013-14ನೇ ಸಾಲಿನ ರಣಜಿ ಟ್ರೋಫಿ ಫೈನಲಿಸ್ಟ್’ಗಳಾದ ಕರ್ನಾಟಕ Vs ಮಹಾರಾಷ್ಟ್ರ ಮಂಗಳವಾರ ಮೊಹಾಲಿಯ ಪಂಜಾಪ್ ಕ್ರಿಕೆಟ್ ಸಂಸ್ಥೆ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ಸಂಜೆ 4.30ಕ್ಕೆ ಆರಂಭವಾಗಲಿದೆ. ಕರ್ನಾಟಕ ತಂಡ ಈ ಬಾರಿ ಹೊಸ ನಾಯಕನ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ರಾಜ್ಯ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸುತ್ತಿದ್ದಾರೆ.

(Syed Mushtaq Ali T20)ಇದುವರೆಗೆ ಕರ್ನಾಟಕ ತಂಡದ ನಾಯಕರಾಗಿದ್ದ ಮನೀಶ್ ಪಾಂಡೆ ಈ ಸಾಲಿನಿಂದ ಆಟಗಾರನಾಗಿ ಅಷ್ಟೇ ತಂಡದಲ್ಲಿ ಮುಂದುವರಿಯಲಿದ್ದಾರೆ. ಕಳೆದ 5 ವರ್ಷಗಳಿಂದ ಕರ್ನಾಟಕ ತಂಡವನ್ನು ಮುನ್ನಡೆಸಿಸಿದ್ದ ಮನೀಶ್ ಪಾಂಡೆ ಒಟ್ಟು 34 ಟಿ20 ಪಂದ್ಯಗಳಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿದ್ದು, 29 ಗೆಲುವು ಕಂಡಿದ್ದಾರೆ. ಪಾಂಡೆ ನಾಯಕತ್ವದಲ್ಲಿ ಕರ್ನಾಟಕ ಸೋತಿರುವುದು ಕೇವಲ 5 ಪಂದ್ಯಗಳಲ್ಲಿ ಮಾತ್ರ. ಆದರೆ 2016ರಿಂದ ಸತತವಾಗಿ ರಣಜಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ತಂಡದ ನಾಯಕತ್ವವನ್ನು ಬದಲಿಸಿ ಮಯಾಂಕ್ ಅಗರ್ವಾಲ್’ಗೆ ಪಟ್ಟ ಕಟ್ಟಲಾಗಿದೆ.

ಸೈಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali T20) ಟೂರ್ನಿಗೆ ಕರ್ನಾಟಕ ತಂಡ:

ಮಯಾಂಕ್ ಅಗರ್ವಾಲ್ (ನಾಯಕ), ಮನೀಶ್ ಪಾಂಡೆ, ಎಲ್.ಆರ್ ಚೇತನ್, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮನೋಜ್ ಭಾಂಡಗೆ, ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್), ಬಿ.ಆರ್ ಶರತ್ (ವಿಕೆಟ್ ಕೀಪರ್), ಜೆ.ಸುಚಿತ್, ಎಂ.ವೆಂಕಟೇಶ್, ವೈಶಾಖ್ ವಿಜಯ್ ಕುಮಾರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿ.ಕೌಶಿಕ್, ವಿದ್ವತ್ ಕಾವೇರಪ್ಪ. ಕೋಚ್: ಪಿ.ವಿ ಶಶಿಕಾಂತ್, ಫೀಲ್ಡಿಂಗ್ ಕೋಚ್: ದೀಪಕ್ ಚೌಗುಲೆ.

ಇದನ್ನೂ ಓದಿ : Virat Kohli : ಆಸ್ಟ್ರೇಲಿಯಾದ ಬೀದಿಗಳಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಕಟೌಟ್.. ಕ್ಯಾಪ್ಟನ್ ರೋಹಿತ್‌ಗಿಲ್ಲ ಕಟೌಟ್ ಭಾಗ್ಯ

ಇದನ್ನೂ ಓದಿ : Rishabh Pant Urvashi Rautela: “ಹೃದಯವನ್ನು ಹಿಂಬಾಲಿಸಿ ಬಂದಿದ್ದೇನೆ..” ರಿಷಭ್ ಪಂತ್‌ಗಾಗಿ ಆಸೀಸ್‌ಗೆ ಹಾರಿದ್ರಾ ನಟಿ ಊರ್ವಶಿ ರೌಟೇಲಾ..?

ಇದನ್ನೂ ಓದಿ : Dinesh Karthik retirement : ಕ್ರಿಕೆಟ್‌ ವೃತ್ತಿ ಬದುಕಿಗೆ ದಿನೇಶ್‌ ಕಾರ್ತಿಕ್‌ ನಿವೃತ್ತಿ ?

ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ: ಕರ್ನಾಟಕ ತಂಡದ ಸಂಪೂರ್ಣ ವೇಳಾಪಟ್ಟಿ:

  • ಅಕ್ಟೋಬರ್ 11: ಕರ್ನಾಟಕ Vs ಮಹಾರಾಷ್ಟ್ರ (ಸ್ಥಳ: ಮೊಹಾಲಿ, ಸಂಜೆ 4.30ಕ್ಕೆ)
  • ಅಕ್ಟೋಬರ್ 12: ಕರ್ನಾಟಕ Vs ಕೇರಳ (ಸ್ಥಳ: ಮೊಹಾಲಿ, ಸಂಜೆ 4.30ಕ್ಕೆ)
  • ಅಕ್ಟೋಬರ್ 14: ಕರ್ನಾಟಕ Vs ಮೇಘಾಲಯ (ಸ್ಥಳ: ಮೊಹಾಲಿ, ಬೆಳಗ್ಗೆ 9ಕ್ಕೆ)
  • ಅಕ್ಟೋಬರ್ 16: ಕರ್ನಾಟಕ Vs ಜಮ್ಮು-ಕಾಶ್ಮೀರ (ಸ್ಥಳ: ಮೊಹಾಲಿ, ಮಧ್ಯಾಹ್ನ 1.30ಕ್ಕೆ)
  • ಅಕ್ಟೋಬರ್ 18: ಕರ್ನಾಟಕ Vs ಅರುಣಾಚಲ ಪ್ರದೇಶ (ಸ್ಥಳ: ಮೊಹಾಲಿ, ಬೆಳಗ್ಗೆ 11ಕ್ಕೆ)
  • ಅಕ್ಟೋಬರ್ 20: ಕರ್ನಾಟಕ Vs ಸರ್ವಿಸಸ್ (ಸ್ಥಳ: ಮೊಹಾಲಿ, ಬೆಳಗ್ಗೆ 9ಕ್ಕೆ)
  • ಅಕ್ಟೋಬರ್ 22: ಕರ್ನಾಟಕ Vs ಹರ್ಯಾಣ (ಸ್ಥಳ: ಮೊಹಾಲಿ, ಬೆಳಗ್ಗೆ 11ಕ್ಕೆ)

Syed Mushtaq T20 tournament from today: Maharashtra to face Mayank-led Karnataka

Comments are closed.