Pawan Sehrawat : ಗಾಯಾಳು ತಮಿಳು ತಲೈವಾಸ್ ನಾಯಕ ಪವನ್ ಸೆಹ್ರಾವತ್‌ರನ್ನು ಭೇಟಿ ಮಾಡಿದ ಸಚಿವ ಅಶ್ವತ್ಥನಾರಾಯಣ್

ಬೆಂಗಳೂರು: ಬೆಂಗಳೂರು ಬುಲ್ಸ್ ತಂಡದ ಮಾಜಿ ನಾಯಕ ಪವನ್ ಸೆಹ್ರಾವತ್(Pawan Sehrawat) (Pro Kabaddi League 9)ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ತಮಿಳು ತಲೈವಾಸ್ ತಂಡದ ಪರ ಆಡುತ್ತಿದ್ದಾರೆ. ತಮಿಳುನಾಡು ಫ್ರಾಂಚೈಸಿಯ ನಾಯಕತ್ವವನ್ನೂ ವಹಿಸಿಕೊಂಡಿರುವ ಪವನ್, ದುರದೃಷ್ಟವಶಾತ್ ಲೀಗ್’ನ ಮೊದಲ ಪಂದ್ಯದಲ್ಲೇ ಬಲಪಾದದ ಗಾಯಕ್ಕೊಳಗಾಗಿದ್ದಾರೆ.


ಗಾಯದಿಂದ ಬಳುತ್ತಿರುವ ಮಾಜಿ ಗೂಳಿಯನ್ನು ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ್ (Higher education minister Dr.C.N Ashwathnarayana) ಭೇಟಿ ಮಾಡಿದ್ದಾರೆ. ಗಾಯಕ್ಕೆ ಚಿಕಿತ್ಸೆ ಪಡೆದು ಬೆಂಗಳೂರು ಖಾಸಗಿ ಹೋಟೆಲ್’ನಲ್ಲಿ ಚೇತರಿಸಿಕೊಳ್ಳುತ್ತಿರುವ ಪವನ್ ಅವರನ್ನು ಭೇಟಿ ಮಾಡಿರುವ ಸಚಿವ ಅಶ್ವತ್ಥ್ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ಪವನ್ ಸೆಹ್ರಾವತ್(Pawan Sehrawat)ಭೇಟಿಯ ಫೋಟೋವನ್ನು ಅಶ್ವತ್ಥನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

https://twitter.com/drashwathcn/status/1579405062690205696?s=20&t=Wys7KpPlI1YSEM66-2mShA

“ಬೆಂಗಳೂರು ಬುಲ್ಸ್’ನ ಮಾಜಿ ಆಟಗಾರ, ಬುಲ್ಸ್ ಸೇನೆಯ ಫೇವರಿಟ್ ಹೀರೊ ಪವನ್ ಸೆಹ್ರಾವತ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಆದಷ್ಟು ಬೇಗ ಗಾಯದಿಂದ ಚೇತರಿಸಿಕೊಂಡು ಅಂಗಣಕ್ಕೆ ಮರಳಲಿ ಎಂಬುದಾಗಿ ಹಾರೈಸುತ್ತೇನೆ” ಎಂದು ಸಚಿವ ಅಶ್ವತ್ಥನಾರಾಯಣ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ(Pro Kabaddi League 9) ಪವನ್ ಸೆಹ್ರಾವತ್ ಬಲ ಪಾದದ ಗಾಯಕ್ಕೊಳಗಾಗಿದ್ದರು. ಗುಜರಾತ್ ಜೈಂಟ್ಸ್ ತಂಡದ ಚಂದ್ರನ್ ರಂಜಿತ್ ಅವರನ್ನು ಟ್ಯಾಕಲ್ ಮಾಡುವ ಪ್ರಯತ್ನದಲ್ಲಿದ್ದಾಗ ಪವನ್ ಸೆಹ್ರಾವತ್ ಅವರ ಬಲ ಪಾದ ಟ್ವಿಸ್ಟ್ ಆಗಿದ್ದರಿಂದ ನಡೆದಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಪವನ್ ಅವರನ್ನು ಸ್ಟ್ರೆಚರ್ ಮೂಲಕ ಅಂಗಣದಿಂದ ಹೊರಕ್ಕೆ ಕರೆದೊಯ್ಯಲಾಗಿತು.

ಇದನ್ನೂ ಓದಿ : Bulls Beat Paltan : ಪುಣೇರಿ ಪಲ್ಟನ್ ವಿರುದ್ಧ ಸೋಲಿನಿಂದ ಬೆಂಗಳೂರು ಬುಲ್ಸ್ ಗ್ರೇಟ್ ಎಸ್ಕೇಪ್

ಇದನ್ನೂ ಓದಿ : Pawan Sehrawat Injured : ಪ್ರೊ ಕಬಡ್ಡಿ ಲೀಗ್: ಮಾಜಿ “ಗೂಳಿ” ಪವನ್ ಸೆಹ್ರಾವತ್‌ಗೆ “ಪ್ರಥಮ ಚುಂಬನಂ ದಂತಭಗ್ನಂ

ಇದನ್ನೂ ಓದಿ : Pro Kabaddi League 2022 : ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ತವರು ನೆಲದಲ್ಲಿ ಎಷ್ಟು ಪಂದ್ಯಗಳು?.. ಇಲ್ಲಿದೆ “ಕೆಂಪು ಗೂಳಿ”ಗಳ ಕಂಪ್ಲೀಟ್ ಮ್ಯಾಚ್ ಶೆಡ್ಯೂಲ್

ಪವನ್ ಅವರ ಗಾಯ ಗಂಭೀರ ಸ್ವರೂಪದ್ದಾಗಿದ್ದು, ಮುಂದಿನ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ. ಇತ್ತೀಚೆಗೆ ನಡೆದ ಪಿಕೆಎಲ್ ಹರಾಜಿನಲ್ಲಿ ತಮಿಳು ತಲೈವಾಸ್ ತಂಡ ಪವನ್ ಸೆಹ್ರಾವತ್ ಅವರನ್ನು ದಾಖಲೆಯ 2.26 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಈ ಹಿಂದೆ ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ಪವನ್ ಸೆಹ್ರಾವತ್ ಪ್ರೊ ಕಬಡ್ಡಿ ಲೀಗ್ 6ನೇ ಆವೃತ್ತಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಪ್ರೊ ಕಬಡ್ಡಿ ಲೀಗ್ (Pro Kabaddi League 9)ಇತಿಹಾಸದಲ್ಲಿ ಒಟ್ಟು ಒಟ್ಟು 105 ಪಂದ್ಯಗಳನ್ನಾಡಿರುವ ಪವನ್ ಸೆಹ್ರಾವತ್ 987 ರೇಡ್ ಪಾಯಿಂಟ್ಸ್ ಗಳಿಸಿದ್ದು ಸಾವಿರದ ಗಡಿ ಮುಟ್ಟಲು ಇನ್ನು ಬೇಕಿರುವುದು ಕೇವಲ 13 ಅಂಕಗಳು ಮಾತ್ರ.

Minister Ashwatthanarayan meets injured Tamil Thalaivas leader Pawan Sehrawat

Comments are closed.