ಭಾರತದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾದರೆ ಸದ್ಯದಲ್ಲೇ ಮೂರನೇ ಅಲೆಯೂ (Covid 19 3rd Wave) ಪ್ರಾರಂಭವಾಗಬಹುದು ಎಂದಿದ್ದಾರೆ ತಜ್ಞರು. ಕೊರೊನ ಹೊಸ ರೂಪಾಂತರಿ ತಳಿ ಓಮಿಕ್ರಾನ್ (Covid 19 Omicron) ಭಾರತಕ್ಕೂ ಕಾಲಿಟ್ಟಿದ್ದು, ಮಕ್ಕಳು ಹೆಚ್ಚು ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಹೊಸ ನಿಯಮ ತಂದಿದ್ದು, 15 ರಿಂದ 18 ವರ್ಷ ವಯಸ್ಸಿನ ಮಕ್ಕಳು (Book Covid 19 slots for Children) ಕೋವಿಡ್ 19 ಲಸಿಕೆಗೆ (Covid 19 Vaccine) ಅರ್ಹರಾಗಿದ್ದಾರೆ. ಭಾರತ್ ಬಯೋಟೆಕ್ನ ಕೋವಾಕ್ಸಿನ್ (Bharat Biotech Vaccine) ಮತ್ತು ಝೈಡಸ್ ಕ್ಯಾಡಿಲಾ (Zydus Cadila) ಲಸಿಕೆಗಳ ನಡುವೆ ಮಕ್ಕಳು ಆಯ್ಕೆ ಮಾಡಬಹುದು.
ಇದರ ನೋಂದಣಿ ಪ್ರಕ್ರಿಯೆಯು, ಜನವರಿ 1 ರಂದು ಪ್ರಾರಂಭವಾಗಿದೆ ಮತ್ತು ಇನಾಕ್ಯುಲೇಷನ್ ಡ್ರೈವ್ ಜನವರಿ 3 ರಂದು ಪ್ರಾರಂಭವಾಗುತ್ತದೆ. ವಯಸ್ಕರ ವ್ಯಾಕ್ಸಿನೇಷನ್ ಡ್ರೈವ್ನಂತೆಯೇ, ಅರ್ಹ ನಾಗರಿಕರು ಆರೋಗ್ಯ ಸೇತು ಅಪ್ಲಿಕೇಶನ್ ಮತ್ತು ಉಮಂಗ್ ಅಪ್ಲಿಕೇಶನ್ಗೆ ಲಿಂಕ್ ಆಗಿರುವ ಕೋ-ವಿನ್ ಪೋರ್ಟಲ್ ಮೂಲಕ ಬುಕ್ ಮಾಡಬಹುದು.
ಈ ಹಿಂದೆ, ಪೇಟಿಎಂ, ಹೆಳ್ತಿಫೈಮಿ, ಫೋನ್ ಪೇ ಮತ್ತು ಇತರ ಥರ್ಡ್-ಪಾರ್ಟಿ ಅಪ್ಲಿಕೇಶನ್ಗಳ ಮೂಲಕ ನೋಂದಣಿ ಮಾಡಬಹುದಾಗಿತ್ತು. ಆದರೆ ಈ ಬಾರಿ ಇನ್ನೂ ಮಕ್ಕಳಿಗೆ ಕೋವಿಡ್19 ಲಸಿಕೆಯನ್ನು ಬುಕ್ ಮಾಡಲು ಆಯ್ಕೆಯನ್ನು ಸೇರಿಸಬೇಕಾಗಿದೆ.
ಮಕ್ಕಳು ಆನ್ಲೈನ್ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ವಯಸ್ಕರು ಈಗಾಗಲೇ ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸಿರುವುದರಿಂದ ಅವರನ್ನು ಫಲಾನುಭವಿಯಾಗಿ ಸೇರಿಸಬಹುದು. ಆಧಾರ್ ಕಾರ್ಡ್ನ ಹೊರತಾಗಿ ನೋಂದಣಿಗಾಗಿ ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಯನ್ನು ಸಹ ಬಳಸಬಹುದು. ಆರೋಗ್ಯ ಸೇತು ಅಪ್ಲಿಕೇಶನ್ ಮೂಲಕ ನೀವು ಕೋವಿಡ್ 19 ಲಸಿಕೆಗಾಗಿ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬುದು ಇಲ್ಲಿ ನೀಡಲಾಗಿದೆ.
ಹಂತ 1: ಆರೋಗ್ಯ ಸೇತು ಆ್ಯಪ್ ತೆರೆಯಿರಿ ಮತ್ತು ಮೇಲಿನ ಬಲಭಾಗದಲ್ಲಿರುವ ಕೋವಿನ್ ಆಯ್ಕೆಯನ್ನು ಆಯ್ಕೆಮಾಡಿ.
ಹಂತ2: ವಾಕ್ಷಿನೇಶನ್ ಕ್ಲಿಕ್ ಮಾಡಿ ಮೊಬೈಲ್ ನಂಬರ್ ಮೂಲಕ ಲಾಗಿನ್ ಆಗಿ.
ಹಂತ 3: ನೀವು ಹೊಸ ಬಳಕೆದಾರರಾಗಿದ್ದರೆ, ನೀವು ‘ಬುಕ್ ಸ್ಲಾಟ್’ ಅನ್ನು ಆಯ್ಕೆ ಮಾಡಬಹುದು.
ಹಂತ 4: ಫೋಟೋ ಐಡಿ ಪ ಒಳಗೊಂಡಿರುವ ವಿವರಗಳನ್ನು ಒದಗಿಸಿ (ನೀವು ವಿದ್ಯಾರ್ಥಿಯ ಫೋಟೋ ಐಡಿ ಕಾರ್ಡ್ ಅನ್ನು ಆಯ್ಕೆ ಮಾಡಬಹುದು), .
ಹಂತ 5: ಲಿಂಗ ಮತ್ತು ಹುಟ್ಟಿದ ವರ್ಷವನ್ನು ಆಯ್ಕೆಮಾಡಿ. ಹಂತ 6: ಒಮ್ಮೆ ನೀವು ಸಬ್ಮಿಟ್ ಒತ್ತಿದರೆ, ಅದು ನಿಮ್ಮನ್ನು ಬೆನಿಫಿಶಿಯರಿ ಪುಟಕ್ಕೆ ಹಿಂತಿರುಗಿಸುತ್ತದೆ ಮತ್ತು ಹೊಸದಾಗಿ ಸೇರಿಸಲಾದ ಹೆಸರಿನ ಮುಂದೆ ಕ್ಯಾಲೆಂಡರ್ ಐಕಾನ್ ಅನ್ನು ಆಯ್ಕೆ ಮಾಡುತ್ತದೆ.
ಹಂತ 7: ಪಿನ್ಕೋಡ್ ಮತ್ತು ದಿನಾಂಕವನ್ನು ನಮೂದಿಸಿ. ಹೆಚ್ಚಿನ ಕೇಂದ್ರಗಳನ್ನು ಹುಡುಕಲು ಬಳಕೆದಾರರು ಉಚಿತ ಮತ್ತು ಪಾವತಿಸಿದ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು.
ಹಂತ 8: ನೀವು ಕೇಂದ್ರವನ್ನು ಆಯ್ಕೆ ಮಾಡಿದ ನಂತರ, ಅಪ್ಲಿಕೇಶನ್ ಲಭ್ಯತೆ ಮತ್ತು ದಿನಾಂಕದ ಆಧಾರದ ಮೇಲೆ ಫಲಿತಾಂಶಗಳನ್ನು ತೋರಿಸುತ್ತದೆ.
ಕೇಂದ್ರ ಆರೋಗ್ಯ ಸಚಿವಾಲಯವು ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ “ಅವರ ಹುಟ್ಟಿದ ವರ್ಷ 2007” ಅಥವಾ ಅದಕ್ಕಿಂತ ಮೊದಲು ಇರುವವರು ಅರ್ಹರಾಗಿರುತ್ತಾರೆ ಎಂದು ನಿರ್ದಿಷ್ಟಪಡಿಸಿದೆ. ಭಾರತೀಯ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ಗೆ ಅನ್ನು ಮಂಜೂರು ಮಾಡಿದೆ.
ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು
ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ
(How to book Covid 19 slots for Children 15 to 18 years)