Daughters Break Barriers :ತಾಯಿಯ ಅಂತ್ಯಕ್ರಿಯೆಗೂ ಬಾರದ ಪಾಪಿ ಪುತ್ರರು: ಪುತ್ರಿಯರಿಂದಲೇ ಅಂತಿಮ ವಿಧಿವಿಧಾನ

Daughters Break Barriers : ಗಂಡು ಮಕ್ಕಳು ಪೋಷಕರ ಅಂತ್ಯಕ್ರಿಯೆಯನ್ನು ನೆರವೇರಿಸೋದು ಹಿಂದೂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದು. ಸಾಕಿ ಸಲುಹಿದ ತಂದೆ ತಾಯಿಯ ಶವಕ್ಕೆ ಹೆಗಲು ನೀಡಿ ಅವರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸುವ ಮೂಲಕ ಆಚರಣೆಯನ್ನು ಮಾಡಲಾಗುತ್ತೆ. ಈ ರೀತಿ ಮಾಡೋದ್ರಿಂದ ತಂದೆ ತಾಯಿಯ ಋಣವನ್ನು ತೀರಿಸಿಕೊಳ್ಳಬಹುದು ಅಂತಾ ಕೂಡ ಹೇಳಲಾಗುತ್ತೆ. ಆದರೆ ಇಲ್ಲೊಂದು ಕುಟುಂಬದಲ್ಲಿ ತಾಯಿಗೆ ಇಬ್ಬರು ಗಂಡುಮಕ್ಕಳಿದ್ದರೂ ಸಹ ಪುತ್ರಿಯರೇ ತಾಯಿಯ ಶವಕ್ಕೆ ಹೆಗಲು ನೀಡಿದ್ದಾರೆ.

ಓಡಿಶಾದ ಪುರಿಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇಬ್ಬರು ಗಂಡು ಮಕ್ಕಳು ಮೃತ ತಾಯಿಯ ಶವವನ್ನು ನೋಡಲೂ ಆಗಮಿಸಿರಲಿಲ್ಲ. ಇದರಿಂದ ತಾಯಿಯ ಅಂತಿಮ ವಿಧಿವಿಧಾನಕ್ಕೆ ಯಾವುದೇ ತೊಂದರೆ ಆಗಬಾರದೆಂದು ನಿರ್ಧರಿಸಿದ ನಾಲ್ವರು ಪುತ್ರಿಯರು ತಾವೇ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪುರಿಯ ಜಾತಿ ನಾಯಕ್​ ಎಂಬವರು ನಿಧನರಾಗಿದ್ದರು. ಮೃತ ಜಾತಿ ನಾಯಕ್​​ಗೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರು. ತಾಯಿ ಸತ್ತು ಹೊತ್ತು ಕಳೆದರೂ ಗಂಡು ಮಕ್ಕಳಿಬ್ಬರ ಸುಳಿವೇ ಇರಲಿಲ್ಲ. ಸಹೋದರರಿಗೆ ಕಾದು ಸುಸ್ತಾದ ನಾಲ್ವರು ಮಹಿಳೆಯರು ಊರಿನ ನೆರೆ ಹೊರೆಯವರ ಸಹಾಯದಿಂದ ತಾಯಿಯ ಶವಕ್ಕೆ ಹೆಗಲು ನೀಡಿದ್ದಾರೆ. ಬರೋಬ್ಬರಿ ನಾಲ್ಕು ಕಿಲೋಮೀಟರ್​ ದೂರದವರೆಗೆ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.ಸಹೋದರಿಯರ ಈ ಪ್ರಯತ್ನಕ್ಕೆ ನೆರೆಹೊರೆಯವರು ಸಂಪೂರ್ಣ ಸಹಾಯ ಮಾಡಿದ್ದು ಜಾತಿ ನಾಯಕ್​ ಅಂತ್ಯಕ್ರಿಯೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿ ಕೊಟ್ಟಿದ್ದಾರೆ.

ಮೃತ ಜಾತಿ ನಾಯಕ್​ ಅಳಿಯ ಈ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ನಮ್ಮ ಅತ್ತೆ ಆಗಾಗ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಅವರಿಗೆ ಅವರ ಗಂಡು ಮಕ್ಕಳ ಬಗ್ಗೆ ಅತೀವವಾದ ಬೇಸರವಿತ್ತು. ಎಷ್ಟು ವರ್ಷಗಳೇ ಕಳೆದರು ಪುತ್ರರು ನನ್ನ ಆರೋಗ್ಯ ವಿಚಾರಿಸಲೆಂದೂ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಅಲ್ಲದೇ ನೀವೆ ನನ್ನ ಹಿರಿಯ ಪುತ್ರ ಎಂದು ಹಿಂದೊಮ್ಮೆ ನನಗೆ ಹೇಳಿದ್ದರು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಇದನ್ನು ಓದಿ : Chinese city of Xian : ಚೀನಾದ ಕ್ಸಿಯಾನ್​ ನಗರದಲ್ಲಿ ಕೊರೊನಾ ರಣಕೇಕೆ: ಮುಂದುವರಿದ ಲಾಕ್​ಡೌನ್​

ಇದನ್ನೂ ಓದಿ : Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್

Daughters Break Barriers, Perform Last Rites of Mother After Her Sons ‘Forget’ Duty

Comments are closed.