87 doctors test positive : ಮೆಡಿಕಲ್​ ಕಾಲೇಜಿನ 87 ವೈದ್ಯರಿಗೆ ಕೊರೊನಾ ಪಾಸಿಟಿವ್​​

87 doctors test positive :ದೇಶದಲ್ಲಿ ಕೊರೊನಾ ಆತಂಕ ಹೆಚ್ಚಾಗಿರುವ ಬೆನ್ನಲ್ಲೇ ಬಿಹಾರದಲ್ಲಿ ಬರೋಬ್ಬರಿ 87 ಮಂದಿ ವೈದ್ಯರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದರಿಂದಾಗಿ ಕೊರೊನಾ ಮೂರನೇ ಅಲೆಯ ಭಯ ಇನ್ನಷ್ಟು ಹೆಚ್ಚಾಗಿದೆ. ಪಾಟ್ನಾದ ನಳಂದಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ 87 ಮಂದಿ ವೈದ್ಯರು ಕೊರೊನಾ ವರದಿ ಪಾಸಿಟಿವ್​ ಬಂದಿದೆ ಎಂದು ಪಾಟ್ನಾ ಡಿಎಂ ಚಂದ್ರಶೇಖರ್​ ಸಿಂಗ್​​ ಅಧಿಕೃತ ಮಾಹಿತಿ ನೀಡಿದ್ದಾರೆ.


ಸೋಂಕಿಗೆ ಒಳಗಾದ ವೈದ್ಯರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ. ಕೆಲವರು ಲಕ್ಷಣ ರಹಿತ ಸೋಂಕನ್ನು ಹೊಂದಿದ್ದಾರೆ. ಉಳಿದವರಿಗೆ ಸೌಮ್ಯ ಪ್ರಮಾಣದಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದೆ. ಕೊರೊನಾ ಸೋಂಕಿಗೆ ಒಳಗಾದ ವೈದ್ಯರನ್ನು ಆಸ್ಪತ್ರೆಯಲ್ಲಿ ಕ್ಯಾಂಪಸ್​ನಲ್ಲಿ ಪ್ರತ್ಯೇಕವಾಗಿ ಇರಿಸಿದ್ದೇವೆ ಎಂದು ಡಾ. ಚಂದ್ರಶೇಖರ್​ ಸಿಂಗ್​ ಹೇಳಿದರು.


ಕಳೆದ ವಾರ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​​ನಿಂದ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೈದ್ಯರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಈ ಬಗ್ಗೆ ವೈದ್ಯರು ಮಾಹಿತಿ ನೀಡುತ್ತಿದ್ದಂತೆಯೆ ಅವರಿಗೆ ಆರ್​ಟಿ ಪಿಸಿಆರ್​ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಎನ್​​ಎಂಸಿಹೆಚ್​​ ಸೂಪರಿಟೆಂಡೆಂಟ್​​ ವಿನೋದ್​ ಕುಮಾರ್​ ಹೇಳಿದರು.


ಬಿಹಾರದಲ್ಲಿ ಭಾನುವಾರದ ಒಂದೇ ದಿನ 352 ಕೋವಿಡ್​ ಹೊಸ ಪ್ರಕರಣಗಳು ವರದಿಯಾಗಿವೆ. ಈ 352 ಮಂದಿಯಲ್ಲಿ 17 ಮಂದಿ ನಳಂದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ 17 ಮಂದಿ ಕಿರಿಯ ವೈದ್ಯರು ಸೇರಿದ್ದಾರೆ. ಬಿಹಾರದಲ್ಲಿ ಪ್ರಸ್ತುತ 1074 ಸಕ್ರಿಯ ಕೋವಿಡ್​ ಪ್ರಕರಣಗಳಿವೆ.


ಬಿಹಾರದಲ್ಲಿ ಶುಕ್ರವಾರ 281, ಶನಿವಾರ 158 ಹಾಗೂ ಭಾನುವಾರದಂದು 352 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಆದರೆ ಕಳೆದ ನಾಲ್ಕು ದಿನಗಳಲ್ಲಿ ಬಿಹಾರದಲ್ಲಿ ಕೋವಿಡ್​ ಸಾವಿನ ಪ್ರಮಾಣ ಶೂನ್ಯವಾಗಿದೆ. ಆದ್ದರಿಂದ ಸಾವಿನ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ 12,096 ಆಗಿದೆ.

Bihar COVID: 87 doctors of Nalanda Medical College test positive; state reports 352 fresh cases

ಇದನ್ನು ಓದಿ : Opinion : ಧಾರ್ಮಿಕ ಪ್ರಾರ್ಥನಾಲಯಗಳ ಹುಂಡಿಗೂ ಬರಲಿ ಕ್ಯೂಆರ್ ಕೋಡ್

ಇದನ್ನೂ ಓದಿ : lockdown Decision : ರಾಜ್ಯದಲ್ಲಿ ಮತ್ತೆ 10 ಜನರಿಗೆ ಓಮೈಕ್ರಾನ್‌ : ಗುರುವಾರ ನಿರ್ಧಾರವಾಗಲಿದೆ ಲಾಕ್ ಡೌನ್ ಭವಿಷ್ಯ

Comments are closed.