ಸಿಕಂದರಾಬಾದ್ : ಟಿಂಬರ್ ಗೋಡೌನ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 11 ( Hyderabad Fire Accident ) ಮಂದಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 12 ಜನರಲ್ಲಿ ಒಬ್ಬರು ಬದುಕುಳಿದಿದ್ದಾರೆ. ಬೆಂಕಿ ನಂದಿಸಲು ಡಿಆರ್‌ಎಫ್ ಸ್ಥಳಕ್ಕೆ ಆಗಮಿಸಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಟಿಂಬರ್ ಡಿಪೋಗೆ ಬೆಂಕಿ ತಗುಲಿ ಬೆಂಕಿ ತಗುಲಿದೆ ಎಂದು ಅಂದಾಜಿಸಲಾಗುತ್ತಿದೆ. 8 ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಬೆಂಕಿಯನ್ನು ಹತೋಟಿಗೆ ತರಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಬೆಂಕಿಯ ರಭಸಕ್ಕೆ ಗೋಡೌನ್ ಛಾವಣಿ ಕುಸಿದಿದೆ. ಅಪಘಾತದ ವೇಳೆ ಗೋಡೌನ್‌ನಲ್ಲಿ 12 ಕಾರ್ಮಿಕರು ಇದ್ದರು. ಭೀಕರ ಅಪಘಾತದಲ್ಲಿ 11 ಕಾರ್ಮಿಕರು ಸಜೀವ ದಹನವಾಗಿದ್ದಾರೆ.
ಘಟನೆಯಲ್ಲಿ ಓರ್ವನನ್ನು ಸ್ಥಳೀಯರು ರಕ್ಷಿಸಿದ್ದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಅಲ್ಲದೇ ರಕ್ಷಣಾ ತಂಡ ಮೃತದೇಹಗಳನ್ನು ಹೊರತೆಗೆದಿವೆ. ಅಪಾಯ ತೀವ್ರವಾಗಿರುವ ಕಾರಣ ಆಸ್ತಿಪಾಸ್ತಿ ಹಾನಿಯೂ ಭಾರೀ ಪ್ರಮಾಣದಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಮೃತರನ್ನು ಬಿಹಾರದ ವಲಸೆ ಕಾರ್ಮಿಕರು ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಮೃತರಲ್ಲಿ 11 ಮಂದಿಯನ್ನು ಗಾಂಧಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
Telangana | 11 people died after a fire broke out in a scrap shop in Bhoiguda, Hyderabad
— ANI (@ANI) March 23, 2022
Out of 12 people, one person survived. DRF reached the spot to douse the fire. A shock circuit could be the reason for the fire. We are investigating the matter: Mohan Rao, Gandhi Nagar SHO pic.twitter.com/PMTIDa5ilg
ಇದನ್ನೂ ಓದಿ : ಕೆಎಸ್‌ಆರ್‌ಟಿಸಿ ಬಸ್ – ಕಾರು ನಡುವೆ ಭೀಕರ ಅಪಘಾತ : ಬೇಲೂರು ಕಾಲೇಜಿನ 5 ವಿದ್ಯಾರ್ಥಿಗಳು ಸಾವು
ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಮೀ ವ್ಯಾಪ್ತಿಯೊಳಗೆ ಟೋಲ್ ತೆರಿಗೆ ಇಲ್ಲ : ಸಚಿವ ನಿತಿನ್ ಗಡ್ಕರಿ
Hyderabad Fire Accident 11 migrant workers died