WhatsApp Web ನಿಮ್ಮ ಮೆಸ್ಸೇಜ್‌ ಡಿಲೀಟ್‌ ಆಗಿದೆಯೇ? ಅದನ್ನು ಪುನಃ ಪಡೆಯಬಹುದು! ಹೇಗೆ ಅಂತೀರಾ?

ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಬಲ ಸಂಪರ್ಕ ಮಾಧ್ಯಮವೆಂದರೆ ವ್ಯಾಟ್ಸ್‌ಅಪ್‌ (WhatsApp Web). ಇದು ಗೆಳೆಯರ ಜೊತೆಗೆ, ಸಹೋದ್ಯೋಗಿಗಳೊಂದಿಗೆ, ಮತ್ಯಾವುದೋ ಕೆಲಸಗಳಿಗೆ ಹೀಗೆ ಎಲ್ಲಾದಕ್ಕೂ ಅವಲಂಬಿಸುವಂತೆ ಮಾಡಿದೆ. ಅತ್ಯಾಕರ್ಷಕ ಫೀಚರ್‌ಗಳನ್ನೊಳಗೊಂಡ ವ್ಯಾಟ್ಸ್‌ಅಪ್‌ ವೆಬ್‌ ಆವೃತ್ತಿ ಸಹ ಸಂಪುರ್ಣವಾಗಿ ಬೇರೆಯ ರೀತಿಯ ಅನುಭವ ನೀಡುತ್ತಿದೆ. ಅದಕ್ಕಾಗಿಯೇ ವ್ಯಾಟ್ಸ್‌ಅಪ್‌ ವೆಬ್‌ ಆವೃತ್ತಿ ಬಳಕೆದಾರರನ್ನು ತನ್ನತ್ತ ಸೆಳೆದಿದೆ. ಈ ವ್ಯಾಟ್ಸ್‌ಅಪ್‌ ವೆಬ್‌ನಲ್ಲಿ ಆಕಸ್ಮಿಕವಾಗಿ ಮುಖ್ಯವಾದ ಚಾಟ್‌ ಡಿಲೀಟ್‌ ಆಗಿದೆಯೇ? ಈಗೇನು ಮಾಡುವುದು ಅನ್ನುವ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಅದಕ್ಕೂ ಒಂದು ಅವಕಾಶವಿದೆ ಇದೆ.

ಗೂಗಲ್‌ ಕ್ರೋಮ್‌ ವ್ಯಾಟ್ಸ್‌ಅಪ್‌ನಲ್ಲಿ ಆಕಸ್ಮಿಕವಾಗಿ ಡಿಲೀಟ್‌ ಆದ ಚಾಟ್‌ ಮರಳಿ ಪಡೆಯಲು ಅವಕಾಶ ನೀಡಿದೆ. ಗೂಗಲ್‌ ಕ್ರೋಮ್‌ನಲ್ಲಿ ಲಭ್ಯವಿರುವ ‘WA Web Plus for WhatsApp’ ವಿಸ್ತರಣೆಯು ನಿಮಗೆ ಆ ಸೌಲಭ್ಯ ನೀಡಿದೆ. ಇದು ಥರ್ಡ್‌ ಪಾರ್ಟಿ ಟೂಲ್‌ ಆಗಿದ್ದು, ವ್ಯಾಟ್ಸಅಪ್‌ ಜೊತೆಗೆ ಸಂಯೋಜಿತಗೊಂಡಿಲ್ಲ.

WA Web Plus for WhatsApp(ವಾ ವೆಬ್‌ ಪ್ಲಸ್‌ ಫಾರ್ ವ್ಯಾಟ್ಸ್‌ಅಪ್‌) ಇನ್ಸ್ಟಾಲ್‌ ಮಾಡುವುದು ಹೇಗೆ?

  • ಮೊದಲು ಗೂಗಲ್‌ ಕ್ರೋಮ್‌ ತೆರೆಯಿರಿ.
  • ಸರ್ಚ್‌ ಬಾರ್‌ನಲ್ಲಿ webstore ಎಂದು ಟೈಪಿಸಿ ಮತ್ತು ಅದೇ ವಿಸ್ತರಣೆಯನ್ನು ಆಯ್ದುಕೊಳ್ಳಿ.
  • ವೆಬ್‌ಸ್ಟೋರ್‌ನ ಸರ್ಚ್‌ ಬಾರ್‌ನಲ್ಲಿ WA Web Plus for WhatsApp ಎಂದು ಬರೆದು ಸರ್ಚ್‌ ಮಾಡಿ. ನಂತರ ಅದನ್ನೇ ಆಯ್ದುಕೊಳ್ಳಿ.
  • Add to Chrome ಬಟನ್‌ ಒತ್ತಿ. ತಕ್ಷಣ ನಿಮ್ಮ ಬ್ರಾಸರ್‌ನಲ್ಲಿ ಸ್ಟೋರ್‌ ಆಗುವುದು.

ಇದನ್ನೂ ಓದಿ : WhatsApp Font Size ನಿಮಗಿದು ಗೊತ್ತೇ! ವ್ಯಾಟ್ಸ್‌ಅಪ್‌ನ ಫಾಂಟ್‌ ಸೈಜ್‌ ಬದಲಾಯಿಸಬಹುದು ಎಂದು?

ವಾ ವೆಬ್‌ ಪ್ಲಸ್‌(WA Web Plus for WhatsApp ) ಬಳಸುವುದು ಹೇಗೆ?

  • ಇನಸ್ಟಾಲ್‌ ಆದ ವಾ ವೆಬ್‌ ಪ್ಲಸ್‌ನ ಸೆಟ್ಟಿಂಗ್‌ ಪೇಜ್‌ ನೀವು ಬಳಸಲಿಚ್ಛಿಸುವ ಫೀಚರ್‌ಗಳನ್ನು ‘ಒನ್‌’ ಮಾಡಲು ಟಾಗಲ್‌ ಮಾಡಬೇಕು.
    ಕ್ರೋಮ್‌ನಲ್ಲಿ ಇದನ್ನು ’ವಿಸ್ತರಣೆಗಳು’ ಬಟನ್‌ ಟಾಗಲ್‌ ಮಾಡುವುದರಿಂದ ಪಡೆಯಬಹುದು.
    ಇದು URL ಬಾರ್‌ನ ಬಲಮೂಲೆಯಲ್ಲಿ ಝಿಗ್‌ಸಾ ಪಝಲ್‌ ಪೀಸ್‌ ನ ಆಕಾರದಲ್ಲಿರುವುದು.
  • ವಾ ವೆಬ್‌ ಪ್ಲಸ್‌ ಫಾರ್‌ ವ್ಯಟ್ಸ್‌ಅಪ್‌ ತೆರೆಯಿರಿ. ಸೆಟ್ಟಿಂಗ್ಸ್‌ ಪೇಜ್‌ಗೆ ಹೋದರೆ ಅಲ್ಲಿ ಗೌಪ್ಯತೆ ಮತ್ತು ಕಸ್ಟಮೈಸೇಷನ್‌ ವಿಭಾಗಗಳಲ್ಲಿ
    ಹಲವಾರು ಆಪ್ಷನ್‌ಗಳನ್ನು ಕಾಣಬಹುದು. ಅಲ್ಲಿ ರಿಸ್ಟೋರ್‌ ಡಿಲೀಟೆಡ್‌ ಮೆಸ್ಸೇಜಸ್‌ ಟಿಕ್‌ ಮಾರ್ಕ್‌ ಮಾಡುವುದರ ಮೂಲಕ ಆನ್‌ ಮಾಡಿ.
  • ಈಗ ವ್ಯಾಟ್ಸ್‌ಅಪ್‌ ವೆಬ್‌ ಬ್ರೌಸರ್‌ ತೆರೆದರೆ ಡಿಲೀಟ್‌ ಆದ ಮೆಸ್ಸೇಜ್‌ಗಳನ್ನು ಮರಳಿ ಪಡೆಯಬಹುದಾಗಿದೆ.
  • ಇದರಲ್ಲಿ ಟಿಕ್ ಮತ್ತು ಅನ್‌–ಟಿಕ್‌ ಮಾಡುವುದರಿಂದಲೂ ಕೆಲವೊಂದು ಫೀಚರ್‌ಗಳನ್ನು ಆಕ್ಟೀವ್ ಮತ್ತು ಡೀಆಕ್ಟೀವ್‌ ಮಾಡಬಹುದಾಗಿದೆ.
    ನಿಮ್ಮ ಪ್ರೊಫೈಲ್‌ ಹೈಡ್‌ ಮಾಡುವ ಆಯ್ಕೆ ಆನ್‌ ಮಾಡಿದರೆ ಫ್ರೊಫೈಲ್‌ ಹೈಡ್‌ ಆದರೆ, ಸ್ಟೇಟಸ್‌ ಹೈಡ್‌ ಮಾಡಿದರೆ ಬೇರೆಯವರು ಸ್ಟೇಟಸ್‌ ನೋಡದಂತೆಯೇ ತಡೆಯಬಹುದಾಗಿದೆ.

ಇದನ್ನೂ ಓದಿ: WhatsApp ನಲ್ಲಿ ಈಗ ನೀವೇ ಸ್ಟಿಕ್ಕರ್‌ ಕ್ರಿಯೇಟ್‌ ಮಾಡಬಹುದು! ಹೇಗೆ ಅನ್ನುತ್ತೀರಾ

(WhatsApp Web How to restore deleted messages using WA Web Plus for WhatsApp)

Comments are closed.