ಹೈದರಾಬಾದ್ : harassment by loan app : ಲೋನ್ ಆ್ಯಪ್ಗಳು ಆ ಕ್ಷಣಕ್ಕೆ ಜನರ ಆರ್ಥಿಕ ಸಂಕಷ್ಟವನ್ನು ಪರಿಹಾರ ಮಾಡಿದಂತೆ ಮಾಡಿದರೂ ಸಹ ಕೊನೆಗೆ ಇವು ಜೀವಕ್ಕೆ ಸಂಚಕಾರವಾಗಿಬಿಡುತ್ತದೆ . ಆರ್ಬಿಐನಿಂದ ಮಾನ್ಯತೆಯನ್ನು ಪಡೆಯದ ಅನೇಕ ಆ್ಯಪ್ಗಳು ಅತೀ ಹೆಚ್ಚಿನ ಬಡ್ಡಿದರಕ್ಕೆ ಜನರಿಗೆ ಸಾಲವನ್ನು ನೀಡಿ ಬಳಿಕ ಸಾಲ ಮರುಪಾವತಿ ಮಾಡುವಂತೆ ಇನ್ನಿಲ್ಲದಂತೆ ಪೀಡಿಸುತ್ತದೆ. ಇದೇ ರೀತಿ ಲೋನ್ ಆ್ಯಪ್ನ ಎಕ್ಸಿಕ್ಯೂಟಿವ್ಗಳ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆಯು ಹೈದರಾಬಾದ್ನ ರಾಮಕೋಟಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸಿ. ರವಿಂದರ್ ಯಾದವ್ ಎಂದು ಗುರುತಿಸಲಾಗಿದೆ. ಇವರು ಆನ್ಲೈನ್ ಆ್ಯಪ್ಗಳ ಮೂಲಕ ಸಾಲವನ್ನು ಪಡೆದಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ರವೀಂದ್ರ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ರವೀಂದ್ರ ನೇಣು ಬಿಗಿದುಕೊಂಡಿದ್ದರು. ಕುಟುಂಬಸ್ಥರು ಮನೆಗೆ ಬಂದು ನೋಡಿದ ವೇಳೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಕೂಡಲೇ ರವೀಂದ್ರನ ಮೃತದೇಹವನ್ನು ಕೆಳಗಿಳಿಸಿ ಹತ್ತಿರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ಆಗಮಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರವೀಂದ್ರ ಆನ್ಲೈನ್ ಆ್ಯಪ್ಗಳಲ್ಲಿ ಸಾಲ ಮಾಡಿಕೊಂಡಿದ್ದರು. ಆದರೆ ಇದನ್ನು ಮರುಪಾವತಿಸಲು ಸಾಧ್ಯವಾಗದೇ ಈ ರೀತಿ ಮಾಡಿಕೊಂಡಿದ್ದರು. ಸಾಲ ಮರು ಪಾವತಿಸಿ ಎಂದು ಲೋನ್ ಆ್ಯಪ್ ಎಕ್ಸಿಕ್ಯೂಟಿವ್ಗಳು ಪದೇ ಪದೇ ಕರೆ ಮಾಡಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗದೇ ರವೀಂದ್ರ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಈ ಸಂಬಂಧ ಮೃತನ ಸಂಬಂಧಿಗಳು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ಲೋನ್ ಆ್ಯಪ್ಗಳು ರವೀಂದ್ರರಿಗೆ ಬೆದರಿಕೆ ಹಾಕಲು ಆರಂಭಿಸಿದ್ದವು. ಹೀಗಾಗಿ ರವೀಂದ್ರ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಲೋನ್ ಆ್ಯಪ್ಗಳ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ : Minister CC Patil : ಕಾಂಗ್ರೆಸ್ಸಿಗರಿಗೆ ಮೊಟ್ಟೆಯಲ್ಲಿ ರಾಜಕೀಯ ಮಾಡುವ ದುಸ್ಥಿತಿ ಬಂದಿದೆ : ಸಚಿವ ಸಿ.ಸಿ ಪಾಟೀಲ್ ವ್ಯಂಗ್ಯ
ಇದನ್ನೂ ಓದಿ : Domino’s Job : ಸಂದರ್ಶನದ ವೇಳೆ ಮಹಿಳೆಯ ವಯಸ್ಸು ಕೇಳಿ 3 ಲಕ್ಷ ದಂಡ ಪಾವತಿಸಿದ ಡಾಮಿನಾಸ್ ಕಂಪನಿ