Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ ನಾರಾಯಣ ವ್ಯಂಗ್ಯ

ರಾಮನಗರ : Minister Ashwattha Narayan : ರಾಜ್ಯದಲ್ಲಿ ಸದ್ಯ ಮೊಟ್ಟೆಯ ವಿಚಾರ ಭಾರೀ ಚರ್ಚೆಯಲ್ಲಿದೆ. ಸಿದ್ದರಾಮಯ್ಯ ವಾಹನಕ್ಕೆ ಕೊಡಗಿನಲ್ಲಿ ಮೊಟ್ಟೆಯನ್ನು ಎಸೆದ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಮೊಟ್ಟೆ ರಾಜಕೀಯ ಆರಂಭಗೊಂಡಿದೆ. ಮೊಟ್ಟೆ ಎಸೆತ ಪ್ರಕರಣದ ಬಳಿಕ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ನಮಗೇನು ಮೊಟ್ಟೆ ಎಸೆಯೋಕೆ ಬರಲ್ವಾ ಎಂದು ಸವಾಲೆಸೆದಿದ್ದರು. ಈ ವಿಚಾರವಾಗಿ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥ ನಾರಾಯಣ ಇದು ಅವರ ಸಂಸ್ಕೃತಿ ಏನು ಎಂಬುವುದನ್ನು ತೋರಿಸುತ್ತೆ ಎಂದು ವ್ಯಂಗ್ಯವಾಡಿದ್ದಾರೆ.


ತಮ್ಮ ಪಕ್ಷದ ಕಾರ್ಯಕರ್ತರಿಗೆ ಇವರೇ ಪ್ರಚೋದನೆ ನೀಡುತ್ತಿದ್ದಾರೆ. ನಾವು ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿದ್ದೇವೆ. ಆದರೆ ಈ ಡಿ.ಕೆ ಶಿವಕುಮಾರ್​ ಮೊಟ್ಟೆ ಎಸೆತವನ್ನು ಪ್ರಚೋದಿಸುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇದೇ ನಮಗೂ ಕಾಂಗ್ರೆಸ್​​ಗೂ ಇರುವ ವ್ಯತ್ಯಾಸ . ಯಾರು ಮೊಟ್ಟೆ ಎಸೆದಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಹೇಳಿದ್ದೇವೆ . ಎಂದು ಹೇಳಿದರು.


ರಂಭಾಪುರಿ ಶ್ರೀಗಳ ವಿಚಾರವಾಗಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅಶ್ವತ್ಥ ನಾರಾಯಣ, ಶ್ರೀಗಳ ಮಾತನ್ನು ನಂಬಬೇಕಾ ಅಥವಾ ರಾಜಕೀಯವಾಗಿ ಸಿದ್ದರಾಮಯ್ಯರ ಮಾತನ್ನು ನಂಬಬೇಕಾ..? ಶ್ರೀಗಳು ಮಾಧ್ಯಮಗಳ ಮುಂದೆ ನೀಡಿರುವ ಹೇಳಿಕೆಯ ವಿಡಿಯೋ ನಿಮ್ಮ ಬಳಿಯೇ ಇದೆ. ಸ್ವಾರ್ಥಕ್ಕಾಗಿ ಯಾರೂ ರಾಜಕೀಯವನ್ನು ಮಾಡಬಾರದು.


ರಾಜಕೀಯಕ್ಕಾಗಿ ಹೇಳಿಕೆಗಳನ್ನು ಬದಲಿಸಿಕೊಂಡರೆ ಅದು ಅವರ ವ್ಯಕ್ತಿತ್ವಕ್ಕೆ ಧಕ್ಕೆ ನೀಡಲಿದೆ. ಸಮಾಜ ಇವೆಲ್ಲವನ್ನೂ ನೋಡುತ್ತಿದೆ. ಹೇಳಿಕೆ ಬದಲಿಸಿದಾಗ ಈ ನಾಯಕನ ಮಾತನ್ನು ನಂಬಬಾರದು ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಸಮಾಜದಲ್ಲಿ ತಪ್ಪು ಮಾಡುವುದು ಸಹಜ.ಮಾಡಿದ ತಪ್ಪನ್ನ ಸರಿಪಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆ .ಈಗ ಸಿದ್ದರಾಮಯ್ಯ ಪಶ್ವತಾಪ ಪಟ್ಟಿಲ್ಲ ಎನ್ನಬಹುದು ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಇದನ್ನು ಓದಿ : Domino’s Job : ಸಂದರ್ಶನದ ವೇಳೆ ಮಹಿಳೆಯ ವಯಸ್ಸು ಕೇಳಿ 3 ಲಕ್ಷ ದಂಡ ಪಾವತಿಸಿದ ಡಾಮಿನಾಸ್​ ಕಂಪನಿ

ಇದನ್ನೂ ಓದಿ : former minister MB Patil : ಸಿದ್ದರಾಮಯ್ಯ ಬಳಿಕ ಎಂ.ಬಿ ಪಾಟೀಲ್​​ಗೆ ಘೇರಾವ್​ : ಗೋ ಬ್ಯಾಕ್​​​ ಎಂ.ಬಿ ಪಾಟೀಲ್​ ಘೋಷಣೆ

Minister Ashwattha Narayan’s outrage against DK Shivakumar

Comments are closed.