former minister MB Patil : ಸಿದ್ದರಾಮಯ್ಯ ಬಳಿಕ ಎಂ.ಬಿ ಪಾಟೀಲ್​​ಗೆ ಘೇರಾವ್​ : ಗೋ ಬ್ಯಾಕ್​​​ ಎಂ.ಬಿ ಪಾಟೀಲ್​ ಘೋಷಣೆ

ಧಾರವಾಡ :former minister MB Patil : ಧರ್ಮದ ವಿಚಾರವಾಗಿ ಹಾಗೂ ವೀರ ಸಾವರ್ಕರ್​ ವಿಚಾರವಾಗಿ ಕಾಂಗ್ರೆಸ್​ ನಾಯಕರು ನೀಡುತ್ತಿರುವ ಹೇಳಿಕೆಗಳು ರಾಜ್ಯದಲ್ಲಿ ಬಿಜೆಪಿಗರ ಕಣ್ಣನ್ನು ಕೆಂಪಗಾಗಿಸುತ್ತಿದೆ. ಹೀಗಾಗಿ ಕಾಂಗ್ರೆಸ್​ ಮುಖಂಡರು ಹೋದಲ್ಲಿ ಬಂದಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ಎದುರಿಸುವಂತಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಭಾರೀ ವಿರೋಧವನ್ನು ಎದುರಿಸಿದ್ದರು. ಸಿದ್ದರಾಮಯ್ಯ ಬೆನ್ನಲ್ಲೇ ಇದೀಗ ಮಾಜಿ ಸಚಿವ ಎಂ.ಬಿ ಪಾಟೀಲ್​​ ಕೂಡ ಬಿಜೆಪಿ ಕಾರ್ಯಕರ್ತರ ಆಕ್ರೋಶವನ್ನು ಎದುರಿಸಿದ್ದಾರೆ.


ಧಾರವಾಡದ ಮುರುಘಾ ಮಠದಲ್ಲಿ ಸಚಿವ ಎಂ.ಬಿ ಪಾಟೀಲ್​ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಠದ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಎಂ.ಬಿ ಪಾಟೀಲ್​​ ಮಠಕ್ಕೆ ಆಗಮಿಸುತ್ತಿದ್ದಂತೆಯೇ ಬಿಜೆಪಿ ನಾಯಕರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಗೋ ಬ್ಯಾಕ್​.. ಗೋ ಬ್ಯಾಕ್​​ ಎಂಬಿ ಪಾಟೀಲ್​ ಗೋ ಬ್ಯಾಕ್​ ಎಂದು ಘೋಷಣೆ ಕೂಗಿದ್ದಾರೆ. ಮಠದ ಗೇಟ್​ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ.


ಎಂ.ಬಿ ಪಾಟೀಲ್​ ಆಗಮನಕ್ಕೆ ವಿರೋಧ ವ್ಯಕ್ತಪಡಿಸಿದ ಕಾರ್ಯಕರ್ತರನ್ನು ಮಠದ ಗೇಟ್​​ ಹಾಕಿ ತಡೆದ ಪೊಲೀಸರು ಬಳಿಕ 20ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ್ದಾರೆ.


ಇನ್ನು ಈ ಸಂದರ್ಭದಲ್ಲಿ ಮಠದ ಆವರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​​ ಕಾರ್ಯಕರ್ತರು ಮುಖಾಮುಖಿಯಾಗಿದ್ದಾರೆ. ಮಠದ ಹೊರಗಡೆಗೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರೆ ಮಠದ ಒಳಗಡೆ ಕಾಂಗ್ರೆಸ್​​ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.


ಇನ್ನು ಇದೇ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಕಾಂಗ್ರೆಸ್​ ನಾಯಕ ಮಾಜಿ ಸಚಿವ ಎಂ.ಬಿ ಪಾಟೀಲ್​ ಪುನರುಚ್ಛರಿಸಿದ್ದಾರೆ .ಈ ಬಾರಿ ವೀರಶೈವ ಲಿಂಗಾಯತಕ್ಕೆ ಒಳಪಡುವ ಎಲ್ಲಾ ಪಂಗಡಗಳನ್ನು ಒಟ್ಟುಗೂಡಿಸಿ ಹೋರಾಟ ಮಾಡಲು ಚಿಂತನೆ ನಡೆದಿದೆ . ಚುನಾವಣೆ ಬಳಿಕ ಎಲ್ಲಾ ಮಠಾಧೀಶರನ್ನು, ವಿರಕ್ತ ಮಠ ಹಾಗೂ ಪಂಚ ಪೀಠಾಧಿಪತಿಗಳ ಜೊತೆಗೆ ಮಾತುಕತೆ ನಡೆಸುತ್ತೇವೆ. ನಮ್ಮ ಸಮಾಜಕ್ಕೆ ಅಲ್ಪ ಸಂಖ್ಯಾತ ಮನ್ನಣೆ ಸಿಗಬೇಕು. ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಾಗಬೇಕು ಎಂಬುವುದೇ ನಮ್ಮ ಉದ್ದೇಶವಾಗಿದೆ. ಹೋರಾಟದ ರೂಪು ರೇಷೆಗಳನ್ನು ಮಾಡಲು ಸಾಕಷ್ಟು ಸಮಯ ಬೇಕು ಎಂದು ಹೇಳಿದರು.

ಇದನ್ನು ಓದಿ : aniruddha banned : ನಟ ಅನಿರುದ್ಧಗೆ ಕಿರುತೆರೆಯಿಂದ 2 ವರ್ಷ ನಿಷೇಧ : ನಿರ್ಮಾಪಕರ ಸಂಘದಿಂದ ತೀರ್ಮಾನ

ಇದನ್ನೂ ಓದಿ : Minister CC Patil : ಕಾಂಗ್ರೆಸ್ಸಿಗರಿಗೆ ಮೊಟ್ಟೆಯಲ್ಲಿ ರಾಜಕೀಯ ಮಾಡುವ ದುಸ್ಥಿತಿ ಬಂದಿದೆ : ಸಚಿವ ಸಿ.ಸಿ ಪಾಟೀಲ್​ ವ್ಯಂಗ್ಯ

BJP workers oppose former minister MB Patil

Comments are closed.