ಕೊಚ್ಚಿ: ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ (Aircraft Carrier) ಐಎಸಿ ವಿಕ್ರಾಂತ್ ಕಾರ್ಯಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಎಸಿ ವಿಕ್ರಾಂತ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸೆಪ್ಟೆಂಬರ್ 2 ರಂದು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದು ದೇಶಕ್ಕೆ ಮಹತ್ವದ ದಿನವಾಗಲಿದೆ ಎಂದು ಭಾರತೀಯ ನೌಕಾಪಡೆ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿದೆ. ಈ ಬೃಹತ್ ಹಡಗನ್ನು ನಾಳೆ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಾರಂಭ ಮಾಡಲಿದ್ದಾರೆ. ಐಎಸಿ ವಿಕ್ರಾಂತ್ ಕಾರ್ಯಾರಂಭವು ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯನ್ನು ಸಾಧಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿಕ್ರಾಂತ್ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಮೊದಲ ವಿಮಾನವಾಹಕ ನೌಕೆಯಾಗಿದೆ. ಇದರ ವಿನ್ಯಾಸವನ್ನು ನೌಕಾಪಡೆಯ ಆಂತರಿಕ ಯುದ್ಧನೌಕೆ ವಿನ್ಯಾಸ ಬ್ಯೂರೋ (WDB) ಸಿದ್ಧಪಡಿಸಿದ್ದು, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಿಂದ ನಿರ್ಮಾಣವನ್ನು ಕೈಗೊಳ್ಳಲಾಗಿದೆ.
‘ಕೌಂಟ್‌ಡೌನ್ ಪ್ರಾರಂಭವಾಗಿದೆ… 02 ಸೆಪ್ಟೆಂಬರ್ 22 – ಸ್ವದೇಶಿ ವಿಮಾನವಾಹಕ ನೌಕೆ ವಿಕ್ರಾಂತ್ ಕಾರ್ಯಾರಂಭ – ರಾಷ್ಟ್ರ ಮತ್ತು ಭಾರತೀಯ ನೌಕಾಪಡೆಗೆ ಮಹತ್ವದ ದಿನ – ನಮ್ಮ ರಾಷ್ಟ್ರದ ಹೆಮ್ಮೆ’ ಎಂದು ಭಾರತೀಯ ನೌಕಾಪಡೆಯು ಟ್ವೀಟ್ ಮಾಡಿದೆ. ಭಾರತೀಯ ಸಶಸ್ತ್ರ ಪಡೆಗಳ ನೌಕಾಪಡೆಯು ಐಎಸಿ ವಿಕ್ರಾಂತ್‌ನಲ್ಲಿನ ಜೀವನದ ಇಣುಕು ನೋಟದ ವೀಡಿಯೊವನ್ನು ಟ್ವೀಟ್ ಮಾಡಿದೆ.
Countdown begins…#02Sep 22
— SpokespersonNavy (@indiannavy) September 1, 2022
Commissioning of Indigenous Aircraft Carrier #Vikrant
A momentous day for the Nation 🇮🇳 & #IndianNavy
'Pride of our Nation'#AatmaNirbharBharat@PMOIndia @DefenceMinIndia @makeinindia @IndiannavyMedia @cslcochin pic.twitter.com/U10ycJk3ej
#LegendisBack #IACVikrant – equipped with State-of-the-Art facilities is a 'City on the Move' @indiannavy @IN_WNC @INEasternNaval1 @IN_HQSNC pic.twitter.com/3IWKJPGiEJ
— IN (@IndiannavyMedia) August 30, 2022
ಭಾರತ ನಿರ್ಮಿಸಿದ ಅತಿ ದೊಡ್ಡ ಹಡಗು ‘ಐಎಸಿ ವಿಕ್ರಾಂತ್’ :
ಭಾರತದ ಮೊದಲ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ ನಿಂದ ಐಎಸಿ ವಿಕ್ರಾಂತ್ ಎಂದು ಇದನ್ನು ಹೆಸರಿಸಲಾಗಿದೆ. ಮೊದಲ ವಿಮಾನವಾಹಕ ನೌಕೆಯಾದ ಐಎನ್‌ಎಸ್ ವಿಕ್ರಾಂತ್ 1971 ರ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ನಾಳೆ ಐಎನ್‌ಎಸ್ ವಿಕ್ರಾಂತ್ ಆಗಲಿರುವ ಐಎಸಿ ವಿಕ್ರಾಂತ್ ಸುಮಾರು 1,600 ಸಿಬ್ಬಂದಿಗಳನ್ನು ಒಳಗೊಂಡಿದೆ. ಇದು 30 ಫೈಟರ್ ಜೆಟ್ ಮತ್ತು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಐಎಸಿ ವಿಕ್ರಾಂತ್‌ನ ಕಾರ್ಯಾರಂಭವು ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿ ವಿಮಾನವಾಹಕ ನೌಕೆಯನ್ನು ನಿಯೋಜಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ. ಇದು ಆ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ ಕಡಲ ಉಪಸ್ಥಿತಿ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ನಾಳೆ ಪ್ರಧಾನಿಯವರು ಭಾರತೀಯ ನೌಕಾಪಡೆಯ ಹೊಸ ನಿಶಾನೆಯನ್ನು ಅನಾವರಣಗೊಳಿಸಲಿದ್ದಾರೆ. ನಾಳೆ ಐಎಸಿ ವಿಕ್ರಾಂತ್ ಕಾರ್ಯಾರಂಭ ಮಾಡುವುದರೊಂದಿಗೆ, ಭಾರತವು ಎರಡು ಕ್ರಿಯಾತ್ಮಕ ವಿಮಾನವಾಹಕ ನೌಕೆಗಳನ್ನು ಹೊಂದಿದಂತಾಗುತ್ತದೆ.
ಇದನ್ನೂ ಓದಿ : Agnipath Yojana ಅಗ್ನಿಪಥ ಯೋಜನೆ ಯುವಕರಿಗೆ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಲು ಅವಕಾಶ
(IAC Vikrant to be launched tomorrow countdown begins)