IAF chopper – Madhulika Rawat : ಸೇನಾ ಹೆಲಿಕಾಫ್ಟರ್‌ ದುರಂತದಲ್ಲಿ ಮೃತರ ಸಂಖ್ಯೆ 13 ಕ್ಕೆ ಏರಿಕೆ : ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ

ಚೆನ್ನೈ : ತಮಿಳುನಾಡಿನ ಕೂನೂರು ಬಳಿಯಲ್ಲಿ ಸೇನಾ ಹೆಲಿಕಾಫ್ಟರ್‌ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಇದೀಗ 13ಕ್ಕೆ ಏರಿಕೆಯಾಗಿದೆ. ಹೆಲಿಕಾಫ್ಟರ್‌ನಲ್ಲಿ (IAF Chopper Crash ) ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಯ ಮುಖ್ಯಸ್ಥರಾದ ಬಿಪಿನ್‌ ರಾವತ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಪತ್ನಿ ಮಧುಲಿಕಾ ರಾವತ್‌ (Madhulika Rawat) ಅವರು ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿರುವ ಸಿಡಿಎಸ್‌ ಬಿಪಿನ್‌ ರಾವತ್‌ ಹಾಗೂ ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು ೧೪ ಮಂದಿ ಸೇನಾ ಹೆಲಿಕಾಫ್ಟರ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಸಿಡಿಎಸ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌, ಬ್ರಿಗೇಡಿಯರ್‌ ಎಲ್.ಎಸ್.ಲಿಡ್ಡರ್‌, ಲೆಫ್ಟಿನೆಂಟ್‌ ಕರ್ನಲ್‌ ಹರ್ಜಿಂದರ್‌ ಸಿಂಗ್‌, ನಾಯಕ್‌ ಗುರು ಸೇವಕ್‌ ಸಿಂಗ್‌, ನಾಯಕ್‌ ಜಿತೇಂದರ್‌ ಕುಮಾರ್‌, ಲ್ಯಾನ್ಸ್‌ ನಾಯಕ್‌ ವಿವೇಕ್‌ ಕುಮಾರ್‌, ಲ್ಯಾನ್ಸ್‌ ನಾಯಕ ಬಿ ಸಾಯ್‌ ತೇಜ್‌, ಹವಾಲ್ದಾರ್‌ ಸತ್ಪಾಲ್‌ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ದೆಹಲಿಯಿಂದ ಹೊರಟಿದ್ದ ಸೇನಾ ಹೆಲಿಕಾಫ್ಟರ್‌ ತಮಿಳುನಾಡಿನ ಕನೂರಿನಲ್ಲಿ ಪತನಗೊಂಡಿದೆ. ಹೆಲಿಕಾಫ್ಟರ್‌ನಲ್ಲಿದ್ದ ಸುಮಾರು ೧೪ ಜನರ ಪೈಕಿ ೧೩ ಜನರು ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ. ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಿಪಿನ್‌ ರಾವತ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಬಿಪಿನ್‌ ರಾವತ್‌ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಆದರೆ ಬಿಪಿನ್‌ ರಾವತ್‌ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕೇಂದ್ರ ರಕ್ಷಣಾ ಸಚಿವರು ನಾಳೆ ಲೋಕಸಭೆಯಲ್ಲಿ ಈ ಕುರಿತು ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಹೆಲಿಕಾಫ್ಟರ್‌ ದುರಂತಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈಗಾಗಲೇ ಭಾರತೀಯ ವಾಯುಸೇನೆ ದುರಂತಕ್ಕೆ ಹವಾಮಾನ ವೈಪರುತ್ಯವೇ ಕಾರಣ ಎಂದು ಟ್ವೀಟ್‌ ಮಾಡಿದೆ. ತನಿಖೆಯ ನಂತರಷ್ಟೇ ದುರಂತಕ್ಕೆ ನಿಖರವಾದ ಕಾರಣ ತಿಳಿದುಬರಬೇಕಾಗಿದೆ.

ಇದನ್ನೂ ಓದಿ : Madhulika Rawat : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಮಧುಲಿಕಾ ರಾವತ್​​ ನಡೆದುಬಂದ ಹಾದಿಯ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ: Army chopper crashes : ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್‌ ಪತನ : ಬಿಪಿಎನ್‌ ರಾವತ್‌ ಪ್ರಯಾಣಿಸುತ್ತಿದ್ದ ವಿಮಾನ !

ಇದನ್ನೂ ಓದಿ : Bipin Rawat : Army Helicopter Crash: ತುರ್ತು ಸಚಿವ ಸಂಪುಟ ಸಭೆ ಕರೆದ ಮೋದಿ, ದುರಂತ ಸ್ಥಳಕ್ಕೆ ಹೊರಟ ರಾಜನಾಥ್‌ ಸಿಂಗ್‌

( IAF Chopper Crash Death Toll Rises to to 13 DNA test and Madhulika Rawat Body Found)

Comments are closed.