Bipin Rawat : ಸೇನಾ ಹೆಲಿಕಾಫ್ಟರ್‌ ದುರಂತ : ಬಿಪಿನ್‌ ರಾವತ್‌, ಮಧುಲಿಕಾ ರಾವತ್‌ ಸೇರಿ 13 ಮಂದಿ ದುರ್ಮರಣ

ಚೆನ್ನೈ: ಭಾರತ ಸೇನೆಯ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ (Bipin Rawat No More) ದುರ್ಮರಣ ಹೊಂದಿದ್ದಾರೆ. ಸೇನಾ ಹೆಲಿಕಾಫ್ಟರ್‌ನಲ್ಲಿ ( IAF Helicopter Crash ) ಪ್ರಯಾಣಿಸುತ್ತಿದ್ದ ಬಿಪಿಎನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್‌ ಏರ್‌ ಪೋರ್ಸ್‌ ಖಚಿತ ಪಡಿಸಿದೆ.

ಸಿಡಿಎಸ್‌ ಬಿಪಿನ್‌ ರಾವತ್‌ ಸೇರಿದಂತೆ ಒಟ್ಟು 14 ಮಂದಿ ಸೇನಾ ಹೆಲಿಕಾಫ್ಟರ್‌ನಲ್ಲಿ ಸೇನಾ ಕಾಲೇಜಿನಲ್ಲಿ ನಡೆಯುತ್ತಿದ್ದ ಸೆಮಿನಾರ್‌ನಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಈ ವೇಳೆಯಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಸೇನಾ ಹೆಲಿಕಾಪ್ಟರ್ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ ಸೇನಾ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ರು.

ಹೆಲಿಕಾಫ್ಟರ್‌ ದುರಂತರ ಬೆನ್ನಲ್ಲೇ ಬಿಪಿನ್‌ ರಾವತ್‌ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.ಬಿಪಿನ್‌ ರಾವತ್‌ ಅವರ ಚೇತರಿಕೆಗಾಗಿ ಇಡೀ ದೇಶವೇ ಪ್ರಾರ್ಥಿಸಿತ್ತು. ಆದರೆ ರಾವತ್‌ ಬದುಕಿ ಬಾರಲೇ ಇಲ್ಲ. ಇನ್ನು ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದ ವೇಳೆಯಲ್ಲಿ 2015ರಲ್ಲಿ ಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಆದರೆ ಇಂದು ನಡೆದ ದುರಂತದಲ್ಲಿ ಬಿಪಿನ್‌ ರಾವತ್‌ ದುರ್ಮರಣ ಹೊಂದಿದ್ದಾರೆ.

ಇನ್ನು ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ಐವರು ಸೂಳೂರಿನವರು ಹುತಾತ್ಮರಾಗಿದ್ದಾರೆ.

ದೆಹಲಿಯಿಂದ ಸೇನಾ ವಿಮಾನದಲ್ಲಿ ತಮಿಳುನಾಡಿಗೆ ಬಿಪಿನ್ ರಾವತ್ ವೆಲ್ಲಿಂಗ್ಟನ್‍ನ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಹೊರಟಿದ್ದರು. ಸೂಳೂರಿನಿಂದ ಊಟಿಯ ವೆಲ್ಲಿಂಗ್ಟನ್‍ಗೆ ಸೇನಾ ಹೆಲಿಕಾಪ್ಟರ್‍ನಲ್ಲಿ 14 ಮಂದಿ ಪಯಣ ಆರಂಭಿಸಿದ್ದರು. ಮಧ್ಯಾಹ್ನ 12.22ಕ್ಕೆ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ. ವೆಲ್ಲಿಂಗ್ಟನ್‍ಗೆ ಏಳು ಕಿ.ಮೀ ದೂರದ ಕಟ್ಟೇರಿ ಪರ್ವತ ಪ್ರದೇಶದ ಟೀ ಎಸ್ಟೇಟ್‍ನಲ್ಲಿ ದೊಡ್ಡ ಶಬ್ಧದೊಂದಿಗೆ ಸೇನಾ ಹೆಲಿಕಾಪ್ಟರ್ ಪತನವಾಗಿದೆ.

ಇದನ್ನೂಓದಿ : IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Madhulika Rawat : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಮಧುಲಿಕಾ ರಾವತ್​​ ನಡೆದುಬಂದ ಹಾದಿಯ ಬಗ್ಗೆ ಇಲ್ಲಿದೆ ಮಾಹಿತಿ

ಇದನ್ನೂ ಓದಿ : Army chopper crashes : ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್‌ ಪತನ : ಬಿಪಿಎನ್‌ ರಾವತ್‌ ಪ್ರಯಾಣಿಸುತ್ತಿದ್ದ ವಿಮಾನ !

( IAF Helicopter Crash Live Updates : CDS Gen Bipin Rawat killed in chopper crash in Tamil Nadu’s Coonoor, confirms IAF)

Comments are closed.