Madhulika Rawat : ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಮೃತಪಟ್ಟ ಮಧುಲಿಕಾ ರಾವತ್​​ ನಡೆದುಬಂದ ಹಾದಿಯ ಬಗ್ಗೆ ಇಲ್ಲಿದೆ ಮಾಹಿತಿ

ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ ಅವರ ಸೇನಾ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ Mi-17V5 ಸೇನಾ ಹೆಲಿಕಾಪ್ಟರ್​ (helicopter crash) ತಮಿಳುನಾಡಿನ ಕುನೂರ್​ ಎಂಬಲ್ಲಿ ಭೀಕರ ಅಪಘಾತಕ್ಕೀಡಾಗಿದ್ದು ಪರಿಣಾಮ ರಾವತ್ (Bipin Rawat)​ ಪತ್ನಿ ಮಧುಲಿಕಾ ರಾವತ್​ (Madhulika Rawat) ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ದುರಂತದಲ್ಲಿ ಬಿಪಿನ್​ ರಾವತ್​ ಸ್ಥಿತಿ ಕೂಡ ಗಂಭೀರವಾಗಿದೆ ಎನ್ನಲಾಗಿದೆ.

ಸೇನಾ ವಿಮಾನದ ದುರಂತದಲ್ಲಿ ದುರ್ಮರಣಕ್ಕೀಡಾದ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್​ ಆರ್ಮಿ ವೈವ್ಸ್​​ ವೆಲ್​ಫೇರ್​ ಅಸೋಸಿಯೇಷನ್​​ನ ಅಧ್ಯಕ್ಷೆಯಾಗಿದ್ದರು. ಈ ಅಸೋಸಿಯೇಷನ್​ ಮೂಲಕ ಮಧುಲಿಕಾ ಸೇನಾ ಸಿಬ್ಬಂದಿಯ ಪತ್ನಿಯರು ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದರು. ಎಡಬ್ಲುಡಬ್ಲುಎ ಭಾರತದ ಅತೀದೊಡ್ಡ ಎನ್​ಜಿಓಗಳಲ್ಲಿ ಒಂದಾಗಿದೆ. ಮಧುಲಿಕಾ ವೀರ ನಾರಿಯರು(ಹುತಾತ್ಮ ಯೋಧರ ಪತ್ನಿಯಂದಿರು) ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯ ಮಾಡುವ ಕಾರ್ಯ ಸೇರಿದಂತೆ ಅನೇಕ ಸಮಾಜ ಕಲ್ಯಾಣ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಮಧುಲಿಕಾ ರಾವತ್​​ ಸೇನಾ ಸಿಬ್ಬಂದಿಯ ಪತ್ನಿಯರ ಸಬಲೀಕರಣಕ್ಕಾಗಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದಾರೆ. ಸೇನಾ ಸಿಬ್ಬಂದಿಯ ಪತ್ನಿಯಂದಿರಿಗೆ ಬ್ಯೂಟಿಷಿಯನ್​ ಕೋರ್ಸ್​, ಟೈಲರಿಂಗ್​, ನೇಯ್ಗೆ ಕೆಲಸ ಹಾಗೂ ಬ್ಯಾಗ್​ ತಯಾರು ಮಾಡುವ ಕೋರ್ಸ್​ ಸೇರಿದಂತೆ ಸಾಕಷ್ಟು ವೃತ್ತಿಪರ ಕೋರ್ಸ್​ಗಳಲ್ಲಿ ಸೇರ್ಪಡೆಯಾಗುವಂತೆ ಪ್ರೋತ್ಸಾಹಿಸುತ್ತಿದ್ದರು. ಈ ಮೂಲಕ ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡುವುದು ಮಧುಲಿಕಾ ರಾವತ್​ ಉದ್ದೇಶವಾಗಿತ್ತು. ಇದು ಮಾತ್ರವಲ್ಲದೇ ತಮ್ಮ ಸದಸ್ಯೆಯರಿಗೆ ಆರೋಗ್ಯದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದರು.

ದೆಹಲಿಯಲ್ಲಿ ಶಿಕ್ಷಣವನ್ನು ಪೂರೈಸಿದ್ದ ಮಧುಲಿಕಾ ರಾವತ್​​ ದೆಹಲಿ ವಿಶ್ವವಿದ್ಯಾಲಯದಲ್ಲಿ ಮನಶಾಸ್ತ್ರಜ್ಞ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದರು. ಎಡಬ್ಲುಡಬ್ಲುಎಯನ್ನು ಹೊರತುಪಡಿಸಿ ಅವರು ಸಾಕಷ್ಟು ಸಮಾಜ ಮುಖಿ ಕಾರ್ಯ ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್​ ರೋಗಿಗಳ ಕ್ಷೇಮಕ್ಕಾಗಿ ಸಾಕಷ್ಟು ದುಡಿದಿದ್ದಾರೆ.

ಸಿಡಿಎಸ್​ ಬಿಪಿನ್​ ರಾವತ್​​​ ಹಾಗೂ ಸೇನಾ ಸಿಬ್ಬಂದಿಯ ಜೊತೆಯಲ್ಲಿ ಮಧುಲಿಕಾ ರಾವತ್​ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮಿಳುನಾಡಿನ ಕೂನೂರ್​ನಲ್ಲಿ ಈ ದುರಂತ ಸಂಭವಿಸಿದೆ. ರಾವತ್​ ದಂಪತಿ ವೆಲ್ಲಿಂಗ್ಟನ್​ನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನತ್ತ ತೆರಳುತ್ತಿದ್ದರು ಎನ್ನಲಾಗಿದೆ. ಮಾರ್ಗಮಧ್ಯದಲ್ಲಿ ಈ ದುರಂತ ಸಂಭವಿಸಿದೆ.

ಇದನ್ನು ಓದಿ : Army chopper crashes : ತಮಿಳುನಾಡಿನಲ್ಲಿ ಸೇನಾ ಹೆಲಿಕಾಪ್ಟರ್‌ ಪತನ : ಬಿಪಿಎನ್‌ ರಾವತ್‌ ಪ್ರಯಾಣಿಸುತ್ತಿದ್ದ ವಿಮಾನ !

ಇದನ್ನೂ ಓದಿ : IAF’s Mi-17V-5 helicopter crash : ರಷ್ಯಾ ನಿರ್ಮಿತ Mi-17V-5 ಚಾಪರ್​ನ ಇತಿಹಾಸ ಹಾಗೂ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ

helicopter crash : Who is Madhulika Rawat, wife of CDS General Bipin Rawat – Know all about her

Comments are closed.