ಚೆನ್ನೈ : ತಮಿಳುನಾಡಿನ ಕುನೂರ್ನಲ್ಲಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್ನಲ್ಲಿ ಬದುಕುಳಿದ ಏಕೈಕ ಸೇನಾನಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ರನ್ನು( Varun Singh ) ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಸ್ವತಃ ವರುಣ್ ಸಿಂಗ್ (Varun Singh) ತಂದೆ ನಿವೃತ್ತ ಕರ್ನಲ್ ಕೆ.ಪಿ ಸಿಂಗ್ ಮಾಹಿತಿ ನೀಡಿದ್ದಾರೆ.
ಮಗನ ಸ್ಥಿತಿ ಹೇಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆ,ಪಿ ಸಿಂಗ್ ನಾನು ವೆಲ್ಲಿಂಗ್ಟನ್ನಲ್ಲಿದ್ದೇನೆ. ಪುತ್ರನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿದೆ. ಆತನ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ದುಃಖದಲ್ಲಿ ನುಡಿದರು. ನಿನ್ನೆ ಈ ದುರಂತ ಸಂಭವಿಸುವ ಸಂದರ್ಭದಲ್ಲಿ ನಿವೃತ್ತ ಕರ್ನಲ್ ಕೆ.ಪಿ ಸಿಂಗ್ ಹಾಗೂ ಅವರ ಪತ್ನಿ ಮುಂಬೈ ನಲ್ಲಿರುವ ತಮ್ಮ ಕಿರಿಯ ಪುತ್ರ ತನುಜ್ ಜೊತೆ ಇದ್ದರು ಎನ್ನಲಾಗಿದೆ. ಈ ವಿಚಾರ ಕೇಳುತ್ತಿದ್ದಂತೆಯೇ ಕೆ.ಪಿ ಸಿಂಗ್ ದಂಪತಿ ಆಘಾತಕ್ಕೊಳಗಾಗಿದ್ದಾರೆ ತಮ್ಮ ಪುತ್ರನ ಆಯುಷ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ತಮಿಳುನಾಡಿನಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಸಿಡಿಎಸ್ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡೆರ್, ಲೆ.ಕ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚವ್ಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೆಡಬ್ಲು ಓ ಪ್ರದೀಪ್, ಜೆಡಬ್ಲುಓ ದಾಸ್, ನಾಯಕ್ ಬಿ ಸಾಯಿ ತೇಜ, ಸತ್ಪಾಲ್, ನಾಯಕ್ ವಿವೇಕ ಕುಮಾರ್, ನಾಯಕ್ ಗುರುಸೇವಕ್ ಸಿಂಗ್ ಹುತಾತ್ಮರಾಗಿದ್ದಾರೆ. ಐಎಎಫ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಮಾತ್ರ ಬದುಕುಳಿದಿದ್ದು ಅವರ ಶೀಘ್ರ ಚೇತರಿಕೆಗೆ ಇಡೀ ದೇಶವೇ ಪ್ರಾರ್ಥಿಸುತ್ತಿದೆ.
ಸೇನಾ ಹೆಲಿಕಾಫ್ಟರ್ ದುರಂತದಲ್ಲಿ ಬಿಪಿನ್ ರಾವತ್, ಮಧುಲಿಕಾ ರಾವತ್ ಸೇರಿ 13 ಮಂದಿ ದುರ್ಮರಣ
ಚೆನ್ನೈ: ಭಾರತ ಸೇನೆಯ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ದುರ್ಮರಣ ಹೊಂದಿದ್ದಾರೆ. ಸೇನಾ ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಪಿಎನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಏರ್ ಪೋರ್ಸ್ ಖಚಿತ ಪಡಿಸಿದೆ.
ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ ಒಟ್ಟು 14 ಮಂದಿ ಸೇನಾ ಹೆಲಿಕಾಫ್ಟರ್‌ನಲ್ಲಿ ಸೇನಾ ಕಾಲೇಜಿನಲ್ಲಿ ನಡೆಯುತ್ತಿದ್ದ ಸೆಮಿನಾರ್‌ನಲ್ಲಿ ಭಾಗಿಯಾಗಲು ತೆರಳುತ್ತಿದ್ದರು. ಈ ವೇಳೆಯಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಈ ಸೇನಾ ಹೆಲಿಕಾಪ್ಟರ್ ಸೇನೆಯ ಐವರು ಹಿರಿಯ ಅಧಿಕಾರಿಗಳ ಸಹಿತ ಸೇನಾ ರಕ್ಷಣಾ ಪಡೆ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವ್ರ ಪತ್ನಿ ಸೇರಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ರು.
ಹೆಲಿಕಾಫ್ಟರ್ ದುರಂತರ ಬೆನ್ನಲ್ಲೇ ಬಿಪಿನ್ ರಾವತ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿತ್ತು.ಬಿಪಿನ್ ರಾವತ್ ಅವರ ಚೇತರಿಕೆಗಾಗಿ ಇಡೀ ದೇಶವೇ ಪ್ರಾರ್ಥಿಸಿತ್ತು. ಆದರೆ ರಾವತ್ ಬದುಕಿ ಬಾರಲೇ ಇಲ್ಲ. ಇನ್ನು ಬಿಪಿನ್ ರಾವತ್ ಲೆಫ್ಟಿನೆಂಟ್ ಜನರಲ್ ಆಗಿದ್ದ ವೇಳೆಯಲ್ಲಿ 2015ರಲ್ಲಿ ಗಾಲ್ಯಾಂಡ್‍ನ ದೀಮಾಪುರ್ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಆದರೆ ಇಂದು ನಡೆದ ದುರಂತದಲ್ಲಿ ಬಿಪಿನ್ ರಾವತ್ ದುರ್ಮರಣ ಹೊಂದಿದ್ದಾರೆ.
ಇನ್ನು ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬಿಪಿನ್ ರಾವತ್ ಪತ್ನಿ, ಬ್ರಿಗೇಡಿಯರ್ ಎಲ್‍ಎಸ್ ಲಿದ್ದರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯಿತೇಜಾ, ಹವಾಲ್ದಾರ್ ಸತ್ಪಾಲ್ ಸಿಂಗ್, ಐವರು ಸೂಳೂರಿನವರು ಹುತಾತ್ಮರಾಗಿದ್ದಾರೆ.
ಇದನ್ನು ಓದಿ : Black box : ತಮಿಳುನಾಡಿನಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಪತ್ತೆ ಇದನ್ನೂ ಓದಿ : Lt col Harjinder Singh: ಸೇನಾ ಹೆಲಿಕಾಪ್ಟರ್ ಪತನ: ಕನ್ನಡತಿಯನ್ನೇ ವರಿಸಿದ್ದರು ಹುತಾತ್ಮ ಲೆ.ಕ.ಹರ್ಜಿಂದರ್ ಸಿಂಗ್
IAF Gp Captain Varun Singh shifts to Bangalore Hospital