Bipin Rawat Biography: ಭಾರತದ ಹೆಮ್ಮೆಯ ಬಿಪಿನ್ ರಾವತ್ ವ್ಯಕ್ತಿಚಿತ್ರ: ಬಿಪಿನ್ ರಾವತ್ ಕಾಂಗೋ ಗಣರಾಜ್ಯ ಸೈನ್ಯದ ನಾಯಕತ್ವವನ್ನೂ ವಹಿಸಿದ್ದರು!

ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸರ್ವಿಸ್) ಬಿಪಿನ್ ರಾವತ್ ಹೆಸರು ಕೇಳದವರು ಬಹಳ ವಿರಳ. ಯಾಕೆಂದರೆ ಜಮ್ಮು ಕಾಶ್ಮೀರದ ಉರಿಯಲ್ಲಿ ನಡೆದ ಸೇನಾ ದಾಳಿಯಲ್ಲಿ ಮುಖ್ಯ ಕಮಾಂಡರ್ ಆಗಿ ನೇತೃತ್ವ ವಹಿಸಿದ್ದಷ್ಟೇ ಅಲ್ಲದೇ, ಯಶಸ್ವಿಯಾಗಿದ ಸೇನಾಧಿಕಾರಿಯವರು. ಜನರಲ್ ಬಿಪಿನ್ ಲಕ್ಷ್ಮಣ್ ಸಿಂಗ್ ರಾವತ್ ಅವರು 1958 ರ ಮಾರ್ಚ್ 16 ರಂದು ಉತ್ತರಾಖಂಡದ ಪೌರಿಯಲ್ಲಿ ಹಿಂದೂ ಗರ್ವಾಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಲೆಫ್ಟಿನೆಂಟ್ ಲಕ್ಷ್ಮಣ್ ಸಿಂಗ್ ರಾವತ್. ಇವರೂ ಲೆಫ್ಟಿನೆಂಟ್ ಜನರಲ್ ಆಗಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. (Bipin Rawat Biography) ಅವರ ತಾಯಿ ಉತ್ತರ ಕಾಶಿ ಜಿಲ್ಲೆಯವರಾಗಿದ್ದು ಉತ್ತರಕಾಶಿ ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಕಿಶನ್‌ಸಿಂಗ್ ಪರಮಾರ್‌ರ ಪುತ್ರಿಯಾಗಿದ್ದರು. ಹೀಗೆ ಬಿಪಿನ್ ರಾವತ್‌ರ ತಂದೆ ಹಾಗೂ ತಾಯಿಯರ ಎರಡೂ ಕುಟುಂಬಗಳು ದೇಶ ಸೇವೆಗೆ ಹೆಸರಾದ ಕುಟುಂಬಗಳು.

ಬಿಪಿನ್ ಲಕ್ಷ್ಮಣ್‌ಸಿಂಗ್ ರಾವತ್ ಸದ್ಯ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದು ಸಶಸ್ತ್ರಪಡೆಗಳ ಅತ್ಯುನ್ನತ ಹುದ್ದೆಯಾಗಿದ್ದು ಭಾರತೀಯ ಸೈನ್ಯದ ಮೂರೂ ವಿಭಾಗಗಳ ಮುಖ್ಯಸ್ಥರೂ ಇವರಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಭಾರತ ಸೇನೆಯಲ್ಲಿ ಇವರು ಸಲ್ಲಿಸಿರುವ ವಿಶಿಷ್ಟ ಸೇವೆಗಾಗಿ ಇವರಿಗೆ ಅನೇಕ ಪ್ರಶಸ್ತಿ ಹಾಗೂ ಪದಕಗಳು ಸಂದಿವೆ.

ಶಿಕ್ಷಣ
ರಾವತ್.ಅವರು ಡೆಹ್ರಾಡೂನ್‌ನ ಕ್ಯಾಂಬ್ರಿಯನ್ ಹಾಲ್ ಸ್ಕೂಲ್ ಮತ್ತು ಶಿಮ್ಲಾದ ಸೇಂಟ್ ಎಡ್ವರ್ಡ್ಸ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುತ್ತಾರೆ. ಶಾಲಾ ಶಿಕ್ಷಣದ ನಂತರ, ಅವರು ವೆಲ್ಲಿಂಗ್ಟನ್‌ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜ್ (ಡಿಎಸ್‌ಎಸ್‌ಸಿ) ಮತ್ತು ಯುನೈಟೆಡ್ ಸ್ಟೇಟ್ಸ್ ಆರ್ಮಿ ಕಮಾಂಡ್ ಮತ್ತು ಕಾನ್ಸಾಸ್‌ನ ಫೋರ್ಟ್ ಲೀವೆನ್‌ವರ್ತ್‌ನಲ್ಲಿರುವ ಜನರಲ್ ಸ್ಟಾಫ್ ಕಾಲೇಜ್‌ನಲ್ಲಿ ಹೈಯರ್ ಕಮಾಂಡ್ ಕೋರ್ಸ್‌ನ ಪದವೀಧರರಾಗಿದ್ದಾರೆ.

ಡಿಎಸ್‌ಎಸ್‌ಸಿಯಲ್ಲಿ ಅವರ ಅಧಿಕಾರಾವಧಿಯಿಂದ, ಅವರು ಡಿಫೆನ್ಸ್ ಸ್ಟಡೀಸ್‌ನಲ್ಲಿ ಎಂಫಿಲ್ ಪದವಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್‌ಮೆಂಟ್ ಮತ್ತು ಕಂಪ್ಯೂಟರ್ ಅಧ್ಯಯನದಲ್ಲಿ ಡಿಪ್ಲೊಮಾಗಳನ್ನು ಹೊಂದಿದ್ದಾರೆ. 2011 ರಲ್ಲಿ, ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯವು ಮಿಲಿಟರಿ-ಮೀಡಿಯಾ ಕಾರ್ಯತಂತ್ರದ ಅಧ್ಯಯನಗಳ ಕುರಿತು ಅವರ ಸಂಶೋಧನೆಗಾಗಿ ಡಾಕ್ಟರೇಟ್ ಆಫ್ ಫಿಲಾಸಫಿಯನ್ನು ನೀಡಿತು.

ರಾವತ್‌ರವರು ವೆಲ್ಲಿಂಗ್‌ಟನ್‌ನ ಡಿಫೆನ್ಸ್‌ ಸರ್ವಿಸಸ್ ಸ್ಟಾಫ್‌ ಕಾಲೇಜ್ (ಡಿಎಸ್‌ಎಸ್‌ಸಿ) ನಿಂದಲೂ ಶಿಕ್ಷಣ ಪಡೆದರು ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನದ ಆರ್ಮಿ ಕಮಾಂಡ್‌ ಹಾಗೂ ಕಾನ್ಸಾಸ್‌ನ ಫೋರ್ಟ್‌ ಲೀವನ್‌ವರ್ತ್ ನಿಂದ ಹೈಯರ್ ಕಮಾಂಡ್‌ ಕೋರ್ಸನ್ನು ಪಡೆದರು. ತಮ್ಮ ಡಿಎಸ್‌ಎಸ್‌ಸಿಯ ವಿದ್ಯಾಭ್ಯಾಸದ ಅವಧಿಯಲ್ಲಿ ಎಮ್‌ಫಿಲ್‌ ಪದವಿಯನ್ನೂ ಪಡೆದರು. ಮುಂದೆ, 2011ರಲ್ಲಿ ಇವರಿಗೆ ಸೈನ್ಯ ಹಾಗೂ ಮಾಧ್ಯಮಗಳ ವ್ಯೂಹಾತ್ಮಕ ಅಧ್ಯಯನಗಳ ಸಂಶೋಧನೆಗಾಗಿ ಮೀರತ್‌ನ ಚೌಧುರಿ ಚರಣ್‌ಸಿಂಗ್ ವಿಶ್ವವಿದ್ಯಾಲಯದಿಂದ ಪಿ.ಎಚ್‌ಡಿ ಪದವಿಯೂ ದೊರೆಯಿತು.

ಸೈನ್ಯ ವೃತ್ತಿ
ದಿನಾಂಕ 16 ಡಿಸೆಂಬರ್‌ 1978ರಂದು ರಾವತ್ ಗೂರ್ಖಾ ರೈಫಲ್‌ನ 5ನೇ ಬಟಾಲಿಯನ್ ಸೇರಿದರು. ಅವರ ತಂದೆಯೂ ಇಲ್ಲೇ ತಮ್ಮ ಪ್ರಥಮ ಉದ್ಯೂಗಕ್ಕೆ ಸೇರಿದ್ದರು. ಅವರಿಗೆ ಎತ್ತರದ ಪರ್ವತ ಪ್ರದೇಶಗಳ ಯುದ್ಧಗಳಲ್ಲಿ ಹೆಚ್ಚಿನ ಅನುಭವ ಹಾಗೂ ನಿಪುಣತೆಯಿದ್ದು 10 ವರ್ಷಗಳ ಕಾಲ ಒಳನುಸುಳುವಿಕೆಯ ವಿರುದ್ಧದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಸೈನ್ಯದ ವಿವಿಧ ಹಂತಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ರಾವತ್ ಅನೇಕ ರಾಷ್ಟ್ರಗಳ ಸೈನ್ಯಗಳಿಂದ ಕೂಡಿದ ಪಡೆಗೆ ಕಾಂಗೋ ಗಣರಾಜ್ಯ ಸೈನ್ಯದ ನಾಯಕತ್ವವನ್ನೂ ವಹಿಸಿದ್ದರು.

ರಕ್ಷಣಾ ಇಲಾಖೆಯ ಭಾಗವಾಗಿ ಅಸ್ತಿತ್ವಕ್ಕೆ ಬಂದ ಮಿಲಿಟರಿ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ರಾವತ್ ಸೇವೆ ಸಲ್ಲಿಸುತ್ತಿದ್ದರು. ಏಕೀಕೃತ ಕಮಾಂಡ್​ಗಳ ರಚನೆ ಮತ್ತು ಸೇನೆಯ ಪುನರ್​ ಸಂಘಟನೆಯ ಮಹತ್ವದ ಹೊಣೆಗಾರಿಕೆಯನ್ನು ಅವರು ನಿರ್ವಹಿಸುತ್ತಿದ್ದರು. ನೌಕಾಪಡೆ, ವಾಯುಪಡೆ ಮತ್ತು ಭೂಸೇನೆಗಳನ್ನು ಒಳಗೊಳ್ಳುವ ಭಾರತದ ಸಶಸ್ತ್ರಪಡೆಗಳ ಸಿಬ್ಬಂದಿ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರನ್ನು ಕೇಂದ್ರ ಸರ್ಕಾರವು ಜನವರಿ 1, 2020ರಂದು ನೇಮಿಸಿತ್ತು.


ಇದನ್ನೂ ಓದಿ: Bipin Rawat : ಸೇನಾ ಹೆಲಿಕಾಫ್ಟರ್‌ ದುರಂತ : ಬಿಪಿನ್‌ ರಾವತ್‌, ಮಧುಲಿಕಾ ರಾವತ್‌ ಸೇರಿ 13 ಮಂದಿ ದುರ್ಮರಣ

ಇದನ್ನೂ ಓದಿ : ನೋಡನೋಡುತ್ತಿದ್ದಂತೆಯೇ ಹೆಲಿಕಾಪ್ಟರ್​ ಮರಕ್ಕೆ ಡಿಕ್ಕಿ ಹೊಡೆದಿತ್ತು’: ಸೇನಾ ಹೆಲಿಕಾಪ್ಟರ್​ ದುರಂತದ ಕ್ಷಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿ

(Bipin Rawat biography knows everything about CDS Bipin Rawat in Kannada)

Comments are closed.