ಕೇರಳ : Kerala Airport : ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಅಕ್ರಮ ಚಿನ್ನ ಸಾಗಾಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಕೇರಳ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರತಿದಿನ ಎಂಬಂತೆ ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದೀಗ ಕೋಝಿಕ್ಕೋಡ್ ನ ಕರಿಪ್ಪುರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಎರಡು ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡು ಮಹಿಳೆ ಸಹಿತ ನಾಲ್ವರನ್ನು ಬಂಧಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಕಳ್ಳ ಸಾಗಾಟಕ್ಕೆ ಪ್ರಯತ್ನಿಸುವಾಗ ಖದೀಮರು ಸಿಕ್ಕಿ ಬಿದ್ದಿದ್ದಾರೆ. ಈ ನಾಲ್ವರು ಪ್ರಯಾಣಿಕರಿಂದ ಕಸ್ಟಮ್ಸ್ ಅಧಿಕಾರಿಗಳು ಚಿನ್ನ ಹಾಗೂ ಉಪೇಕ್ಷಿಸಿದ ಸ್ಥಿತಿಯಲ್ಲಿದ್ದ ಚಿನ್ನ್ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನದ ಬಿಸ್ಕೆಟ್ ಗಳನ್ನು ವಿಮಾನದ ಸೀಟ್ ನ ಕೆಳಗಿಟ್ಟು ಸಾಗಿಸುತ್ತಿದ್ದರು ಎಂಬುದು ಸಹ ಗೊತ್ತಾಗಿದೆ.
ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಹೋಗಿ ತಗಲಾಕಿಕೊಂಡಿರುವ ಜಿದ್ದಾದಿಂದ ಬಂದ ಮಲಪ್ಪುರಂ ನಿವಾಸಿ ಜಮ್ಶೀದ್, ವಯನಾಡು ನಿವಾಸಿ ಬುಶ್ರಾ, ಶಾರ್ಜಾದಿಂದ ಬಂದಿದ್ದ ಅಬ್ದುಲ್ ಸಾಮೀಲ್ ಹಾಗೂ ಮಲ್ಲಪ್ಪುರಂ ವಾರಿಯಂಕೋಡ್ ನಿವಾಸಿ ನೌಫಲ್ ಪಿ ಎಂದು ಗುರುತಿಸಲಾಗಿದೆ. ಇವರು ದೇಹದಲ್ಲಿ ಹಾಗೂ ಒಳವಸ್ತ್ರದಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟಕ್ಕೆ ಯತ್ನಿಸಿರೋದು ಗೊತ್ತಾಗಿದೆ.
ಜಿದ್ದಾದ್ದಿಂದ ಬಂದಿದ್ದ ವಿಮಾನದ ಸೀಟ್ ನ ಕೆಳಗೆ ಪತ್ತೆಯಾದ ಚಿನ್ನದ ಬಿಸ್ಕೇಟ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನು ದುಬೈನಿಂದ ಬಂದಿದ್ದ ಆರೋಪಿ ನೌಫಲ್ ಕಸ್ಟಮ್ಸ್ ತಪಾಸಣೆ ಮುಗಿಸಿ ವಿಮಾನ ನಿಲ್ದಾಣದಿಂದ ಹೊರಗೆ ಬಂದಾಗ ಅನುಮಾನಾಸ್ಪದವಾಗಿ ವರ್ತಿಸಿದ್ದಾನೆ. ಹೀಗಾಗಿ ಸಂಶಯಗೊಂಡ ಕರಿಪ್ಪುರ್ ವಿಮಾನ ನಿಲ್ದಾಣ ಪೊಲೀಸರು ತಡೆದು ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ಆದ್ರೆ ಪ್ರಾರಂಭದಲ್ಲಿ ಆತ ಚಿನ್ನ ಸಾಗಾಟ ಮಾಡುತ್ತಿದ್ದ ವಿಚಾರ ಒಪ್ಪಿಕೊಂಡಿಲ್ಲ. ಆತನ ಸೂಟ್ ಕೇಸ್, ಲಗೇಜ್ ಪರಿಶೀಲನೆ ನಡೆಸಿದರು ಚಿನ್ನ ಪತ್ತೆಯಾಗಿಲ್ಲ. ಹೀಗಾಗಿ ಕೊನೆಗೆ ಕೊಂಡೋಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಎಕ್ಸ್ ರೇಯಲ್ಲಿ ಗುದ ದ್ವಾರದಲ್ಲಿ ನಾಲ್ಕು ಕ್ಯಾಪ್ಶೂಲ್ ಗಳು ಇರೋದು ಗೊತ್ತಾಗಿದೆ. ಇದರಲ್ಲಿ 54 ಲಕ್ಷ ರೂ ಮೌಲ್ಯದ 1.065 ಕೆ.ಜಿ ಚಿನ್ನದ ಮಿಶ್ರಣ ಇರೋದು ಬೆಳಕಿಗೆ ಬಂದಿದೆ. ಹೀಗಾಗಿ ಆ ಚಿನ್ನ ಮತ್ತು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಪಕ್ಕದ ಕೊಚ್ಚಿಯ ನೆಡುಂಬಾಶ್ಶೇರಿ ಏರ್ ಪೋರ್ಟ್ ನಲ್ಲಿ 1.02 ಕೋಟಿ ರೂ ಮೌಲ್ಯದ 2 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ಆರೋಪಿಗಳ ಬಂಧನವು ಆಗಿದೆ. ಒಂದು ಪ್ರಕರಣದಲ್ಲಿ ಅಬುಧಾಬಿಯಿಂದ ಬಂದಿಳಿದ ಕೋಝಿಕ್ಕೋಡ್ ನಿವಾಸಿಯಿಂದ 60 ಲಕ್ಷ ರೂ ಮೌಲ್ಯದ 1.123 ಕೆ.ಜಿ ಚಿನ್ನವನ್ನು, ಇನ್ನೊಂದು ಪ್ರಕರಣದಲ್ಲಿ ದುಬೈನಿಂದ ಬಂದಿಳಿದ ಮನ್ನಾರ್ಕಾಡ್ ನಿವಾಸಿಯಿಂದ 42 ಲಕ್ಷ ಮೌಲ್ಯದ 919 ಗ್ರಾಂ ಚಿನ್ನವನ್ನು, ಮೂರನೇ ಪ್ರಕರಣದಲ್ಲಿ ಕಣ್ಣೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪ್ರಯಾಣಿಕನಿಂದ 21 ಲಕ್ಷ ರೂ ಮೌಲ್ಯದ ಅರ್ಧ ಕೆ.ಜಿ ಚಿನ್ನವನ್ನು ಸಿ.ಆರ್.ಪಿ.ಎಫ್ ವಶಪಡಿಸಿಕೊಂಡಿದೆ. ಒಟ್ಟಿನಲ್ಲಿ ಕೇರಳ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಅಕ್ರಮ ಚಿನ್ನ ಸಾಗಾಟ ಜಾಲ ಹೆಚ್ಚಾಗಿದ್ದು ಈ ಬಗ್ಗೆ ಸರ್ಕಾರ ಸೂಕ್ತ ನಿಗಾ ಇರಿಸಬೇಕಾಗಿದೆ.
ಇದನ್ನು ಓದಿ : covid care center :ಕೋವಿಡ್ ಕೇರ್ ಸೆಂಟರ್ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
ಇದನ್ನೂ ಓದಿ : India Vs Pak Jersey Fight : ಟಿ20 ವಿಶ್ವಕಪ್: “ಕಲ್ಲಂಗಡಿ Vs ಹಾರ್ಪಿಕ್” ; ಭಾರತ Vs ಪಾಕ್ ಜರ್ಸಿ ಜಟಾಪಟಿ ; ಏನಿದು ಹೊಸ ರಗಳೆ ?
Illegal gold traffickers in excess at Kerala Airport