PAYCM ಅಭಿಯಾನ ; ಕಾಂಗ್ರೆಸ್ ನಿಂದ PAYTM ಅಧಿಕೃತ ಟ್ರೇಡ್ ಮಾರ್ಕ್ ಉಲ್ಲಂಘನೆ ?

ಬೆಂಗಳೂರು :ವಿಧಾನಸಭಾ ಚುನಾವಣೆ ಸಮೀಪಿಸುತ್ತಲೇ ರಾಜ್ಯದಲ್ಲಿ ಕಾಂಗ್ರೆಸ್‌ ಅಲರ್ಟ್‌ ಆಗಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರ ವಿರುದ್ದ ಕಾಂಗ್ರೆಸ್‌ ಪೇ ಸಿಎಂ ಅಸ್ತ್ರ ಪ್ರಯೋಗ ಮಾಡಿದೆ. ಕಾಂಗ್ರೆಸ್‌ ಅಸ್ತ್ರಕ್ಕೆ ಬಿಜೆಪಿ ಪ್ರತ್ಯಾಸ್ತ್ರವನ್ನು ಕೊಟ್ಟಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೋಸ್ಟರ್‌ ಸಮರ ಮುಂದುವರಿದಿದೆ. ಈ ನಡುವಲ್ಲೇ ಕಾಂಗ್ರೆಸ್‌ ವಿರುದ್ದ ಟ್ರೇಡ್‌ ಮಾರ್ಕ್‌ ಉಲ್ಲಂಘಟನೆ (PAYCM PAYTM Trademark Violation) ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಬೆಂಗಳೂರಿನಲ್ಲಿ ಟ್ರೆಂಡ್‌ ಆಗಿದ್ದ PAYCM ಅಭಿಯಾನ ದೇಶದಾದ್ಯಂತ ಸಖತ್‌ ಸುದ್ದಿ ಮಾಡಿತ್ತು. ಇದನ್ನೇ ಕಾಂಗ್ರೆಸ್‌ ಸಾಕಷ್ಟು ಲಾಭ ಮಾಡಿಕೊಳ್ಳಲು ಮುಂದಾಗಿದೆ. ಈ ನಡುವಲ್ಲೇ ಬಿಜೆಪಿ ಕಾಂಗ್ರೆಸ್‌ ನಾಯಕರ ಭ್ರಷ್ಟಾಚಾರದ ಬಗ್ಗೆಯೂ ಸಾಕಷ್ಟು ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಆದ್ರೀಗ ಪೇಟಿಎಂ ಅಧಿಕೃತ ಲೋಗೋವನ್ನು ಕಾಂಗ್ರೆಸ್‌ ತನ್ನ ಹೋರಾಟಕ್ಕೆ ಬಳಸಿಕೊಂಡಿರುವುದು ಕಾನೂನು ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ.

ಭಾರತದಲ್ಲಿ ಹಣಕಾಸು ಮತ್ತು ಪೇಮೆಂಟ್ಸ್‌ ಸೇವೆಗಳನ್ನು ಒದಗಿಸುತ್ತಿರುವ ಪೇಟಿಎಂ ದೇಶದ ಪ್ರಮುಖ ಡಿಜಿಟಲ್‌ ಬ್ಯಾಂಕ್‌ ಆಗಿ ಹೊರಹೊಮ್ಮಿದೆ. ಕೋಟ್ಯಾಂತರ ಗ್ರಾಹಕರು ಪೇಟಿಯಂ ಬಳಕೆ ಮಾಡುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಿಂದ ಹಿಡಿದು ಬೃಹತ್‌ ಉದ್ಯಮಿಗಳು ಕೂಡ ಪೇಟಿಯಂ ಬಳಕೆ ಮಾಡುತ್ತಿದ್ದಾರೆ. ಪೇಟಿಯಂ ಭಾರತ ಸರಕಾರದಿಂದ ಅಧಿಕೃತವಾಗಿ ಟ್ರೇಡ್‌ ಮಾರ್ಕ್‌ ಹೊಂದಿದೆ. ಭಾರತದ ಟ್ರೇಡ್ ಮಾರ್ಕ್ ಆಕ್ಟ್ 1999 ಪ್ರಕಾರ ರಿಜಿಸ್ಟರ್ ಹೊಂದಿದ ಲೋಗೋವನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವುದು ಕಾನೂನುಬಾಹಿರ.

ಈ ನೆಲೆಯಲ್ಲಿ ದೇಶದ ಖ್ಯಾತ ಬ್ರ್ಯಾಂಡ್ PAYTM ಯ ಲೋಗೋವನ್ನು ದುರ್ಬಳಕೆ ಮಾಡಲಾಗಿದೆಯೇ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಮುಖ ಬ್ರ್ಯಾಂಡ್ ಗಳ ಲೋಗೋವನ್ನು ದುರ್ಬಳಕೆ ಮಾಡುವುದು ತಪ್ಪು ಎಂದು ಕಾನೂನು ತಜ್ಞರ ಸಹ ಅಭಿಪ್ರಾಯ ಪಡುತ್ತಾರೆ. ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪೇ ಸಿಎಂ ಅಭಿಯಾನ ಇದೀಗ ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯಿದೆ. ಟ್ರೇಡ್‌ ಮಾರ್ಕ್‌ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪೇಟಿಯಂ ಕಾಂಗ್ರೆಸ್‌ ವಿರುದ್ದ ಕಾನೂನು ಸಮರ ಸಾರಲಿದೆಯಾ ಅನ್ನೋ ಪ್ರಶ್ನೆ ಎದ್ದಿದೆ. ಒಂದೊಮ್ಮೆ ಪೇಟಿಯಂ ಕೋರ್ಟ್‌ ಮೆಟ್ಟಿಲೇರಿದ್ರೆ ಕಾಂಗ್ರೆಸ್‌ಗೆ ದೊಡ್ಡ ತಲೆನೋವು ಎದುರಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : NIA Raid across India: ಮಂಗಳೂರು ಸೇರಿದಂತೆ ದೇಶಾದ್ಯಂತ NIA ಮೆಗಾ ರೇಡ್

ಇದನ್ನೂ ಓದಿ : CM Basavaraj Bommai :ಮಾಜಿ ಪ್ರಧಾನಿ ದೇವೇಗೌಡ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

PAYCM campaign PAYTM Official Trademark Violation by Congress

Comments are closed.