ಸಾರ್ವಜನಿಕ ಸ್ಥಳಗಳಲ್ಲಿ ಬರ್ತ್ ಡೇ ಆಚರಿಸಿದರೆ ನಿಮ್ಮ‌ ಮೇಲೆ ಬೀಳುತ್ತೆ ಕೇಸ್

ರಾಮನಗರ :birthday in public places : ಹುಟ್ಟುಹಬ್ಬ ಅಂದ್ರೆ ಸಂಭ್ರಮ ಸಡಗರ.‌ ಅದರಲ್ಲೂ ಹಿಂದಿನ ಕಾಲಕ್ಕೆ ಹೋಲಿಕೆ‌ ಮಾಡಿದರೆ ಪ್ರಸ್ತುತ ದಿನಗಳಲ್ಲಿ ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲೆಬ್ರೇಶನ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರ ಜೀವನದಲ್ಲಿ ಹುಟ್ಟುಹಬ್ಬದ ದಿನ ಕಟ್ ಆಗುವ ಕೇಕ್ ಗಳ ಸಂಖ್ಯೆಗೆ ಲೆಕ್ಕವೇ ಇರೋದಿಲ್ಲ.‌ ಮನೆಯಲ್ಲಿ, ಆಫೀಸ್ ನಲ್ಲಿ, ಸ್ನೇಹಿತರ ಜೊತೆ ಹೀಗೆ ಹಲವು ಕಡೆ ಸರಣಿ ಕೇಕ್ ಕಟ್ ಮಾಡುವ ಕಾರ್ಯಕ್ರಮ ಇರುತ್ತದೆ. ಅದರಲ್ಲೂ ಕಿಲಾಡಿ ಹುಡುಗರು ತಮ್ಮ ಸ್ನೇಹಿತರ ಹುಟ್ಟುಹಬ್ಬವನ್ನು ಸಿಕ್ಕ ಸಿಕ್ಕ ಜಾಗದಲ್ಲಿ ಆಚರಿಸುತ್ತಾರೆ, ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಾರೆ. ಆದ್ರೆ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಬರ್ತ್ ಡೇ ಆಚರಣೆ ಮಾಡೋರು ಈ ಸ್ಟೋರಿಯನ್ನು ಒದಲೆಬೇಕು. ಯಾಕಂದ್ರೆ ಇನ್ಮುಂದೆ ಸಿಕ್ಕ ಸಿಕ್ಕ ಜಾಗದಲ್ಲಿ ಬರ್ತ್ ಡೇ ಆಚರಿಸಿದ್ರೆ ಪೊಲೀಸ್ ಠಾಣೆ ಮೆಟ್ಟಲು ಏರಬೇಕಾಗುತ್ತದೆ.‌

ಹೌದು..ನಡು ರಸ್ತೆಯಲ್ಲಿ‌ ನಿಂತು ಕೇಕ್ ಕತ್ತರಿಸಿದ್ರೆ ಇನ್ಮುಂದೆ ಬೀಳುತ್ತೆ ಕೇಸ್.. ಹುಟ್ಟುಹಬ್ಬವನ್ನ ಸಾರ್ವಜನಿಕ ಸ್ಥಳದಲ್ಲಿ ಆಚರಿಸಿ ಸಂಭ್ರಮಿಸಿದ್ರೆ ಆಗುತ್ತೆ ನಿಮ್ಮ‌ ಮೇಲೆ ಎಫ್.ಐ.ಆರ್. ರಾಮನಗರ ಪೊಲೀಸರು ಈ ವಿನೂತನ ಕಾರ್ಯಾಚರಣೆ ನಡೆಸಿ ಈ ರೀತಿ ಬರ್ತ್ ಡೇ ಆಚರಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರೆ ಎಫ್ಐಆರ್ ದಾಖಲು ಮಾಡುತ್ತೇವೆ‌‌ ಎಂದು ರಾಮನಗರ ಎಸ್.ಪಿ ಸಂತೋಷ್ ಬಾಬು ಎಚ್ಚರಿಕೆ ನೀಡಿದ್ದರು. ಹೆದ್ದಾರಿ, ಸರ್ಕಲ್ ಗಳು ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ್ರೆ ಕ್ರಮ‌ ಎಂದು ಹೇಳಲಾಗಿತ್ತು. ಆದ್ರೆ ಈ ಎಚ್ಚರಿಕೆಯ ನಡುವೆಯೂ ಸಾರ್ವಜನಿಕ ಸ್ಥಳದಲ್ಲಿ‌ ಬರ್ತ್ ಡೇ ಆಚರಿಸಿ‌ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಲ್ಲಿ ಯುವಕರ ಮೇಲೆ ಎಫ್.ಐ.ಆರ್ ದಾಖಲು ಮಾಡಲಾಗಿದೆ.

ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಸರ್ಕಲ್ ನಲ್ಲಿ ಐವರು ಯುವಕರು ಹುಟ್ಟುಹಬ್ಬ ಆಚರಿಸಿದ್ದರು. ಸಂಭ್ರಮಾಚರಣೆ ನೆಪದಲ್ಲಿ ಕೇಕ್ ಕತ್ತರಿಸಿ ಕಿರುಚಾಡಿ ಯುವಕರ ಗುಂಪು ಸ್ಥಳೀಯರಿಗೆ ತೊಂದರೆ ನೀಡಿತ್ತು. ಹೀಗಾಗಿ ಕುದೂರು ಠಾಣೆ ಪೊಲೀಸರು ಯುವಕರ ವಿರುದ್ಧ ಎಫ್.ಐ.ಆರ್ ದಾಖಲಿಸಿದ್ದಾರೆ. ಈ ಮೂಲಕ ಲಕ್ಕೇನಹಳ್ಳಿ ಗ್ರಾಮದ ಸಂದೀಪ್ ಸೇರಿ ಐವರು ಸ್ನೇಹಿತರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.

ಮುಖ್ಯವಾಗಿ ಹೆದ್ದಾರಿಗಳಲ್ಲಿ ಬರ್ತ್ ಡೇ ಆಚರಿಸದರೆ ಹೆದ್ದಾರಿಗಳಲ್ಲಿ ತೆರಳುವ ವಾಹನ‌ ಸವಾರರಿಗೆ ತೊಂದರೆಯಾಗುತ್ತೆ.‌ ಬರ್ತ್ ಡೇ ನೆಪದಲ್ಲಿ ಒಂದು ಕಡೆ ಗುಂಪು ಸೇರಿದ್ರೆ ಪಾರ್ಟಿ ನೆಪದಲ್ಲಿ ಜಗಳಗಳು ನಡೆಯುವ ಸಾಧ್ಯತೆಯೂ ಇದೆ. ಹುಟ್ಟುಹಬ್ಬ ಎಂದು ಬೇಕಾಬಿಟ್ಟಿ ಕಿರುಚಾಡಿ, ಹೊತ್ತಲ್ಲದ ಹೊತ್ತಲ್ಲಿ ಪಟಾಕಿ‌ ಸಿಡಿಸಿ ಸಂಭ್ರಮಿಸದರೆ ಇತರ ನಾಗರಿಕರಿಗೆ ತೀವ್ರ ತೊಂದರೆ ಆಗುತ್ತೆ. ಈ ಎಲ್ಲಾ ಕಾರಣಗಳಿಂದ ಬರ್ತ್ ಡೇಯಿಂದಾಗಿ‌ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾಮನಗರ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಒಟ್ಟಿನಲ್ಲಿ‌‌‌ ಸಿಕ್ಕ ಸಿಕ್ಕ‌ ಸ್ಥಳಗಳಲ್ಲಿ ಬರ್ತ್ ಡೇ ಆಚರಿಸುವವರು ಇನ್ಮುಂದೆ ಅಲರ್ಟ್ ಆಗಿರೋದು ಒಳ್ಳೆದು.

ಇದನ್ನು ಓದಿ : BJP-Congress :ಬಿಜೆಪಿ – ಕಾಂಗ್ರೆಸ್​ ನಡುವೆ ಜೋರಾಯ್ತು QR ಕೋಡ್ ಯುದ್ಧ

ಇದನ್ನೂ ಓದಿ : covid care center :ಕೋವಿಡ್ ಕೇರ್ ಸೆಂಟರ್ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

If you celebrate your birthday in public places, you will face a case

Comments are closed.