NIA Mangalore : ಶ್ರೀಲಂಕಾ ಪ್ರಜೆಗಳ ಅಕ್ರಮ ಪ್ರವೇಶ : ತನಿಖೆ ಆರಂಭಿಸಿದ ಎನ್‌ಐಎ

ಮಂಗಳೂರು : ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಶ್ರೀಲಂಕಾ ಪ್ರಜೆಗಳು ಅಕ್ರಮ ಪ್ರವೇಶ ಮಾಡಿದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗಂಭೀರ ವಾಗಿ ಪರಿಗಣಿಸಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಆರಂಭಿಸಿದೆ.

ಮಂಗಳೂರು ಪೊಲೀಸರು ಅಕ್ರಮ ಪ್ರವೇಶ ಮಾಡಿದ ಹಿನ್ನೆಲೆಯಲ್ಲಿ ಜೂನ್‌ 10ರಂದು ಸುಮಾರು 38 ಮಂದಿ ಶ್ರೀಲಂಕಾ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣದ ತನಿಖೆಯಲ್ಲಿ ಎಲ್ಲರನ್ನೂ ಕೆನಡಾದಲ್ಲಿ ಉದ್ಯೋಗದ ಆಮಿಷವೊಡ್ಡಿ ಶ್ರೀಲಂಕಾಕ್ಕೆ ಕರೆತರಲಾಗಿತ್ತು. ನಂತರದಲ್ಲಿ ಎಲ್ಲರೂ ಕೂಡ ತಮಿಳುನಾಡಿನ ತೂತುಕುಡಿಗೆ ಬಂದಿದ್ದರು. ಆದರೆ ಚುನಾವಣೆ ಯ ಹಿನ್ನೆಲೆಯಲ್ಲಿ ಎಲ್ಲಾ38 ಮಂದಿ ಮಂಗಳೂರಿಗೆ ಬಂದು ಅಕ್ರಮವಾಗಿ ವಾಸವಾಗಿದ್ದರು ಎನ್ನಲಾಗುತ್ತಿದೆ.

ಬಂಧಿತರರು ಶ್ರೀಲಂಕಾದ ತಮಿಳರಾಗಿದ್ದು ಇವರಲ್ಲಿ ಯಾರೂ ಕೂಡ ಸಿಂಹಳಿಯರು ಇಲ್ಲ. ಎಲ್ಲರೂ ಕೂಡ ಎಲ್‌ಟಿಟಿಇಯ ಪ್ರಭಾವವಿದ್ದ ಉತ್ತರ ಶ್ರೀಲಂಕಾ ಪ್ರದೇಶದಲ್ಲಿದ್ದರು. ಹೀಗಾಗಿಯೇ ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗುತ್ತಿದೆ. ಅಕ್ರಮ ಪ್ರವೇಶದ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕೂಡ ಪ್ರಕರಣ ದಾಖಲಾಗಿದ್ದು, ಎನ್‌ಐಎ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ತನಿಖೆಯನ್ನು ಚುರುಕುಗೊಳಿಸಿದೆ.

Comments are closed.