V N SUDHAKARAN : ತಲೈವಿ ದತ್ತು ಪುತ್ರ : ವಿ.ಕೆ.ಶಶಿಕಲಾ ಸೋದರಳಿಯ ಸುಧಾಕರನ್ ಗೆ ಬಿಡುಗಡೆ ಭಾಗ್ಯ

ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಅವರ ದತ್ತು ಪುತ್ರ ಹಾಗೂ ಎಐಎಡಿಎಂಕೆ ಮಾಜಿ ನಾಯಕಿ ವಿಕೆ.ಶಶಿಕಲಾ ಸೋದರಳಿಯ ಸುಧಾಕರನ್ ಅವರಿಗೆ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ 10 ರೂ ಕೋಟಿ ದಂಡ ಕಟ್ಟದೆ 1 ವರ್ಷ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಸುಧಾಕರನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಅ.16 ರಂದು (ಇಂದು) ತಲೈವಿಯ ದತ್ತು ಪುತ್ರ ಸುಧಕಾರನ್ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಸುಧಕಾರನ್ ಬಿಡುಗಡೆ ಬಗ್ಗೆ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ದಿನಾಂಕ ನಿಗದಿ ಮಾಡಿದ್ದಾರೆ. ಶಶಿಕಲಾ ಬಿಡುಗಡೆ ಬಳಿಕ ಸುಧಾಕರನ್ ಭೇಟಿಗೆ ಯಾರು ಬಂದಿರಲಿಲ್ಲ ಎಂದು ತಿಳಿದು ಬಂದಿದ್ದು. 10 ಕೋಟಿ ದಂಡ ಕಟ್ಟದೆ ಮತ್ತೊಂದು ವರ್ಷ ಹೆಚ್ಚುವರಿ ಜೈಲುವಾಸ ಇಂದಿಗೆ ಮುಕ್ತಾಯವಾಗಲಿದೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಸುಧಾಕರನ್‌ಗೆ ನಾಲ್ಕು ವರ್ಷ ಜೈಲು ಶಿಕ್ಷೆ ನೀಡಲಾಗಿತ್ತು.

ಇದನ್ನೂ ಓದಿ: Gandak River 5 Dead : ದೋಣಿ ದುರಂತ 5 ಭಕ್ತರು ಸಾವು, ಐವರು ನಾಪತ್ತೆ

2017 ರಲ್ಲಿ ಶಶಿಕಲಾ, ಇಳವರಸಿ, ಸುಧಾಕರನ್‌ಗೆ 10 ಕೋಟಿ ದಂಡ ವಿಧಿಸಲಾಗಿತ್ತು. ಶಶಿಕಲಾ ಮತ್ತು ಇಳವರಸಿ ಇಬ್ಬರಿಗೂ 10 ಕೋಟಿಯಂತೆ ದಂಡ ಕಟ್ಟಿ ಬಿಡುಗಡೆ ಹೊಂದಿದ್ದರು. ಸುಧಾಕರನ್ ದಂಡ ಕಟ್ಟದ ಹಿನ್ನೆಲೆ 1 ವರ್ಷ ಹೆಚ್ಚು ಜೈಲುವಾಸ ಮುಂದುವರಿಸಲಾಗಿತ್ತು. ಇದೀಗ ಹೆಚ್ಚುವರಿ ಜೈಲು ಶಿಕ್ಷೆ ಮುಕ್ತಾಯಗೊಂಡಿದ್ದು, ಇಂದು ಸೆರೆವಾಸದಿಂದ ಮುಕ್ತಗೊಳ್ಳಲಿದ್ದಾರೆ.

ಅಪರಾಧಿಗಳನ್ನು ಬಿಡುಗಡೆ ಮಾಡುವಾಗ ಅವರು ತೆಗೆದುಕೊಂಡ ರಜೆಗಳ ಸಂಖ್ಯೆಯನ್ನು (ಪೆರೋಲ್) ನಾವು ಪರಿಗಣಿಸುತ್ತೇವೆ. ಸುಧಾಕರನ್ 89 ದಿನಗಳ ಪೆರೋಲ್‌ಗೆ ಅರ್ಹರಾಗಿದ್ದರು ಆದರೆ, ಅವರು ಒಂದು ಸಲವೂ ಪೆರೋಲ್ ಮೇಲೆ ಹೊರ ಹೋಗಿಲ್ಲ. ಹೀಗಾಗಿ ಅವರ ಶಿಕ್ಷೆಯನ್ನು 89 ದಿನಗಳವರೆಗೆ ಕಡಿಮೆ ಮಾಡಲಾಗಿದೆ. ಈ ಕಾರಣದಿಂದಾಗಿ, ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಸುಧಾಕರನ್ ಅವರನ್ನು ಶನಿವಾರ ಬಿಡುಗಡೆ ಮಾಡಲಾಗುತ್ತಿದೆ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ :Dasara March 4 dead : ದಸರಾ ಮೆರವಣಿಗೆ ವೇಳೆ ಘೋರ ದುರಂತ : 4 ಮಂದಿ ಸಾವು, 20 ಮಂದಿ ಗಂಭೀರ

(Thalaivi adopted son : V.K. Sudhakaran released)

Comments are closed.