independence Freedom Struggle : ಭಾರತದ ಸ್ವಾತಂತ್ರ್ಯ ಹೋರಾಟದ 10 ಪ್ರಮುಖ ವಿಚಾರಗಳು ಇಲ್ಲಿದೆ ನೋಡಿ

independence Freedom Struggle : ಭಾರತವು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ಆಗಸ್ಟ್​ 15ರಂದು ಆಜಾದಿ ಕಾ ಅಮೃತ್​ ಮಹೋತ್ಸವ ಆಚರಿಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲಿ ಸಿದ್ಧತೆಯನ್ನು ಮಾಡುತ್ತಿದೆ. ಈ ಬಾರಿ ದೇಶವು ಮೊದಲು, ಎಂದಿಗೂ ಮೊದಲು ಎಂಬ ಘೋಷ ವಾಕ್ಯದ ಅಡಿಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ದೇಶವು ಸಜ್ಜಾಗಿದೆ.

ಭಾರತವು 1858ರಿಂದ 1947ರವರೆಗೆ ಬ್ರಿಟೀಷ್​ ಆಳ್ವಿಕೆಯಲ್ಲಿತ್ತು. ಬ್ರಿಟೀಷ್​ ಈಸ್ಟ್​ ಇಂಡಿಯಾ ಕಂಪನಿಯು 1757ರಿಂದ 1857ರವರೆಗೆ ಭಾರತವನ್ನು ನಿಯಂತ್ರಣ ಮಾಡಿತ್ತು. ಆಗಸ್ಟ್ 15, 1947 ರಂದು ಭಾರತವು 200 ವರ್ಷಗಳ ಬ್ರಿಟಿಷ್ ವಸಾಹತುಶಾಹಿ ನಿಯಂತ್ರಣದಿಂದ ಸ್ವಾತಂತ್ರ್ಯವನ್ನು ಗಳಿಸಿತು. ಸ್ವಾತಂತ್ರ್ಯ ಹೋರಾಟಗಾರರ ಅಗಾಧ ಧೈರ್ಯ ಮತ್ತು ತ್ಯಾಗವು ಆಗಸ್ಟ್ 15, 1947 ರಂದು ರಾಷ್ಟ್ರವನ್ನು ಸ್ವತಂತ್ರಗೊಳಿಸುವ ಮೂಲಕ ಬ್ರಿಟಿಷರನ್ನು ದೇಶದಿಂದ ಹೊರಹಾಕಿತು. ದೇಶವು 75ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ನಾವು ಇತಿಹಾಸದ ಪುಟಗಳನ್ನು ಮತ್ತೊಮ್ಮೆ ತಿರುವಿ ನೋಡಬೇಕಿದೆ. ಭಾರತದ ಸ್ವಾತಂತ್ರ್ಯದೊಂದಿಗೆ ಹೊಂದಿಕೊಂಡ ಹಲವಾರು ಆಸಕ್ತಿದಾಯಕ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ :

ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲ ಹೋರಾಟವು 1857ರಲ್ಲಿ ಆರಂಭಗೊಂಡಿತು. ಇದನ್ನು ಸಿಪಾಯಿ ದಂಗೆ ಅಥವಾ 1857ರ ಭಾರತೀಯ ದಂಗೆ ಎಂದು ಕರೆಯಲಾಗುತ್ತದೆ. ಇದರ ನೇತೃತ್ವವನ್ನು ಮಂಗಲ್​ಪಾಂಡೆ ವಹಿಸಿದ್ದರು. . ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಬಹದ್ದೂರ್​ ಶಾ ಜಾಫರ್​, ತಾತ್ಯಾ ಟೋಪೆ ಹಾಗೂ ನಾನಾ ಸಾಹಿಬ್​​ 1857ರಲ್ಲಿ ಬ್ರಿಟಿಷ್​ ಸೈನಿಕರ ವಿರೋಧವನ್ನು ಕಟ್ಟಿಕೊಂಡರು. ಇದಾದ ಬಳಿಕ 1900ರಲ್ಲಿ ಸ್ವದೇಶಿ ಚಳವಳಿ ಆರಂಭಗೊಂಡಿತ್ತು. ಬಾಲಗಂಗಾಧರ್​ ತಿಲಕ್​ ಹಾಗೂ ಜೆಆರ್​ಡಿ ಟಾಟಾ ಸ್ವದೇಶಿ ಸರಕುಗಳನ್ನು ಉತ್ತೇಜಿಸಲು ಬಾಂಬೆ ಸ್ವದೇಶಿ ಕೋ ಅಪ್​ ಸ್ಟೋರ್ಸ್​ ಕಂ ಲಿಮಿಟೆಡ್​​ನ್ನು ಸ್ಥಾಪನೆ ಮಾಡಿದ್ದಾರೆ. ಈ ಮೂಲಕ ವಿದೇಶಿ ಸರಕುಗಳನ್ನು ಬಹಿಷ್ಕರಿಸಿದರು. ಮಹಾತ್ಮ ಗಾಂಧಿ ಇದನ್ನು ಸ್ವರಾಜ್​ ಆತ್ಮ ಎಂದು ಬಣ್ಣಿಸಿದ್ದಾರೆ.


ಕೆಂಪು, ಹಳದಿ ಹಾಗೂ ಹಸಿರು ಬಣ್ಣದ ಮೂರು ಅಡ್ಡ ಪಟ್ಟೆಗಳನ್ನು ಹೊಂದಿರುವ ಭಾರತೀಯ ರಾಷ್ಟ್ರ ಧ್ವಜವನ್ನು 1906ರ ಆಗಸ್ಟ್​ 7ರಂದು ಕೋಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಲಾಯಿತು. ಪ್ರಸ್ತುತ ಇರುವ ನಮ್ಮರಾಷ್ಟ್ರಧ್ವಜದ ಮೊದಲ ರೂಪಾಂತರವನ್ನು 1921ರಲ್ಲಿ ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ್ದರು. ಪ್ರಸ್ತುತ ಇರುವ ಕೇಸರಿ, ಬಿಳಿ ಹಸಿರು ಹಾಗೂ 24 ಗೆರೆಗಳ್ಳುಳ್ಳ ಅಶೋಕ ಚಕ್ರವನ್ನು ಹೊಂದಿರುವ ಭಾರತದ ಧ್ವಜವನ್ನು ಮೊದಲ ಬಾರಿಗೆ 1947ರ ಜುಲೈ 22ರಂದು ಅಧಿಕೃತವಾಗಿ ಅಳವಡಿಸಲಾಯಿತು. ಈ ಧ್ವಜವನ್ನು 1947ರ ಆಗಸ್ಟ್​ 15ರಂದು ಹಾರಿಸಲಾಯಿತು.


ಕ್ವಿಟ್​ ಇಂಡಿಯಾ ಚಳವಳಿಯನ್ನು ಆಗಸ್ಟ್​ ಚಳವಳಿ ಎಂದೂ ಕರೆಯುತ್ತಾರೆ. ಇದು ಅಖಿಲ ಭಾರತ ಕಾಂಗ್ರೆಸ್​ ಸಮಿತಿಯ ಬಾಂಬೆ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರು ಆಗಸ್ಟ್ 8 1942 ರಂದು ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಪ್ರಾರಂಭಿಸಿದರು. ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ಅಧಿಕೃತ ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ. 1911 ರಲ್ಲಿ ರವೀಂದ್ರನಾಥ ಠಾಗೋರ್​ ರಚಿಸಿದ ‘ಭರೋತೋ ಭಾಗ್ಯೋ ಬಿಧಾತ’ ಗೀತೆಯನ್ನು ‘ಜನ ಗಣ ಮನ’ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ಭಾರತದ ಸಂವಿಧಾನ ಸಭೆಯು ಜನವರಿ 24, 1950 ರಂದು ರಾಷ್ಟ್ರಗೀತೆಯಾಗಿ ಅಂಗೀಕರಿಸಿತು.


ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ರೇಖೆಯನ್ನು ರಾಡ್‌ಕ್ಲಿಫ್ ಲೈನ್ ಎಂದೂ ಕರೆಯುತ್ತಾರೆ, ಇದನ್ನು ಬ್ರಿಟಿಷ್ ಬ್ಯಾರಿಸ್ಟರ್ ಸರ್ ಸಿರಿಲ್ ರಾಡ್‌ಕ್ಲಿಫ್ ಅವರು ಆಗಸ್ಟ್ 3, 1947 ರಂದು ಗುರುತಿಸಿದರು. ಇದನ್ನು ಅಧಿಕೃತವಾಗಿ ಆಗಸ್ಟ್ 17, 1947 ರಂದು ಭಾರತವು ಸ್ವಾತಂತ್ರ್ಯ ಪಡೆದ ಎರಡು ದಿನಗಳ ನಂತರ ಪ್ರಕಟಿಸಲಾಯಿತು. ಭಾರತ ಎಂಬ ಹೆಸರು ಸಿಂಧೂ ನದಿಯಿಂದ ಬಂದಿದೆ. ಇದು ನದಿಯ ಉಪನದಿಗಳ ನಡುವೆ ಪ್ರವರ್ಧಮಾನಕ್ಕೆ ಬಂದ ಮಹಾನ್ ಸಿಂಧೂ ಕಣಿವೆ ನಾಗರಿಕತೆಗೆ ಸಾಕ್ಷಿಯಾಗಿದೆ.

ಭಾರತವು ಆಗಸ್ಟ್ 15, 1947 ರ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಕೊರಿಯಾ, ಕಾಂಗೋ, ಬಹ್ರೇನ್ ಮತ್ತು ಲಿಚ್ಟೆನ್‌ಸ್ಟೈನ್ ಸಹ ಈ ದಿನದಂದು ತಮ್ಮ ಸ್ವಾತಂತ್ರ್ಯ ದಿನವನ್ನು ಭಾರತದಂತೆ ಆಚರಿಸುತ್ತದೆ. ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಆಗಸ್ಟ್ 15 ರ ಮಧ್ಯರಾತ್ರಿ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ನೆಹರೂರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅವರು, ಮಧ್ಯರಾತ್ರಿಯಲ್ಲಿ ಇಡೀ ಜಗತ್ತೇ ನಿದ್ರಿಸುತ್ತಿರುವಾಗ ಭಾರತವು ಮಾತ್ರ ಸ್ವಾತಂತ್ರ್ಯಕ್ಕಾಗಿ ಎಚ್ಚರವಾಗಿದೆ ಎಂದು ಹೇಳಿದ್ದರು.

ಇದನ್ನು ಓದಿ : Pro Kabaddi League Auction ಪ್ರೊ ಕಬಡ್ಡಿ ಲೀಗ್: 2.26 ಕೋಟಿಗೆ ಸೇಲ್ ಆಗಿ ದಾಖಲೆ ಬರೆದ ಬೆಂಗಳೂರಿನ “ಮಾಜಿ ಬುಲ್” ಪವನ್ ಸೆಹ್ರಾವತ್

ಇದನ್ನೂ ಓದಿ : Minister Kota Srinivasa Pujari : ಸಿದ್ದರಾಮೋತ್ಸವ ಬಿಜೆಪಿ ಭವಿಷ್ಯವನ್ನು ನಿರ್ಧರಿಸೋದಿಲ್ಲ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

independence Freedom Struggle : 10 important facts about India’s freedom struggle

Comments are closed.