woman commits suicide : ಅವಳಿ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಸೇಲಂ : ಮಹಿಳೆಯೋರ್ವರು ತನ್ನ ಅವಳಿ ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ (woman commits suicide) ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಸೇಲಂನ ಎಡಪ್ಪಾಡಿ ಎಂಬಲ್ಲಿ ನಡೆದಿದೆ. ಸೇಲಂ ಜಿಲ್ಲೆಯ ಎಡಪ್ಪಾಡಿ ಪನಂಗಡಿಯ ನಿವಾಸಿ ಶಬರೀಶ್‌ ಪತ್ನಿ ಸರಳಾ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಶಬರೀಶ್ ಹತ್ತಿ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದ ಈತ 8 ವರ್ಷಗಳ ಹಿಂದೆ ಬಳಪಟ್ಟಿಯ ಸರಳಾ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ ಸರ್ವೇಶ್ ಎಂಬ ಮಗನಿದ್ದಾನೆ. ಕಳೆದ ತಿಂಗಳು ಸರಳಾ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು.

ಶನಿವಾರ ಬೆಳಗ್ಗೆ ಬಳಪಟ್ಟಿಯಲ್ಲಿರುವ ಅತ್ತೆ ಮನೆಯಿಂದ ಸರಳಾ ನಾಪತ್ತೆಯಾಗಿದ್ದರು. ಎಲ್ಲಾ ಕಡೆ ಹುಡುಕಾಡಿದ್ದರೂ ಕೂಡ ಸರಳಾ ಪತ್ತೆಯಾಗಿರಲೇ ಇಲ್ಲ. ಆದರೆ ಸರಳಾ ಅವರ ಮೃತದೇಹ ವೆಂಟಕೇಶ್‌ ಎಂಬವರಿಗೆ ಸೇರಿದ ಬಾವಿಯಲ್ಲಿ ಪತ್ತೆಯಾಗಿತ್ತು. ನಂತರದಲ್ಲಿ ಸಂಬಂಧಿಕರು ಸ್ಥಳೀಯರ ಸಹಕಾರದಿಂದ ಮೃತ ದೇಹವನ್ನು ಬಾವಿಯಿಂದ ಹೊರಗೆ ತೆಗೆದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ವೈದ್ಯರು ಆಕೆ ಸಾವನ್ನಪ್ಪಿರುವ ಕುರಿತು ತಿಳಿಸಿದ್ದಾರೆ.

ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಬಾವಿಯಲ್ಲಿ ಅವಳಿ ಮಕ್ಕಳಿಗಾಗಿ ಹುಡುಕಾಟವನ್ನು ನಡೆಸಿದ್ದಾರೆ. ಕೊಂಕಣಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವಧಿಗೂ ಮುನ್ನವೇ ಮಕ್ಕಳು ಜನಿಸಿದ್ದರಿಂದ ಹತಾಶಳಾದ ಸರಳಾ ತನ್ನ ಅವಳಿ ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೊದಲ ಹಂತದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವಳಿ ಮಕ್ಕಳಿರುವ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ

ತಮಿಳುನಾಡಿನ ಮೆಟ್ಟುಪಾಳ್ಯಂ ಸಮೀಪದ ನೆಲ್ಲಿತುರೈ ಎಂಬಲ್ಲಿನ ಭವಾನಿ ನದಿಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಯುವಕ, ಯುವತಿಯನ್ನು ರಕ್ಷಣೆ ಮಾಡಲಾಘಿದೆ. ನದಿಯ ದಡದ ಮರವೊಂದರ ಬಳಿ ಕರಮಡೈ ಮೂಲದ 23 ವರ್ಷದ ಯುವಕ ಮತ್ತು 21 ವರ್ಷದ ಮಹಿಳೆ ಶನಿವಾರ ಆಟವಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಪ್ರವಾಹ ಉಂಟಾಯಿತು. ಇದರಿಂದ ದಡದಲ್ಲಿ ಆಟವಾಡುತ್ತಿದ್ದ ಯುವಕ ಹಾಗೂ ಯುವತಿ ಪಕ್ಕದ ಮರಕ್ಕೆ ಹತ್ತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.

ಈ ಬಗ್ಗೆ ಆ ಊರಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಅಲ್ಲಿಗೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಲೈಫ್ ಜಾಕೆಟ್ ಧರಿಸಿ ಹಗ್ಗದ ಮೂಲಕ ನದಿ ದಾಟಿದ್ದು, ನದಿ ದಂಡೆಯ ಮರದಲ್ಲಿ ಸಿಲುಕಿದ್ದ ಯುವಕ ಪರಿಸಲ್ ಸಹಾಯದಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ಅವಳನ್ನು ದಡಕ್ಕೆ ಕರೆತಂದರು.

ಕಳೆದ ಕೆಲವು ದಿನಗಳಿಂದ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ನದಿಗಳಲ್ಲಿ ಪ್ರವಾಹ ಉಂಟಾಗುತ್ತದೆ. ಹೀಗಾಗಿ ಯಾರೂ ಕೂಡ ನದಿ ದಡಕ್ಕೆ ಹೋಗಬಾರದು ಎಂದು ಸರ್ಕಾರ ಆದೇಶಿಸಿದೆ. ಈ ವೇಳೆ ಯುವಕ ಹಾಗೂ ಯುವತಿ ನದಿ ದಡಕ್ಕೆ ತೆರಳಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ನದಿ ದಡಕ್ಕೆ ಹೋಗುವುದನ್ನು ತಪ್ಪಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ : Praveen Nettaru murder case : ಪ್ರಕರಣದ ದಿಕ್ಕು ತಪ್ಪಿಸಲು ಕೇರಳದ ಬೈಕ್​ ಬಳಕೆ ಮಾಡಿದರಾ ಪ್ರವೀಣ್​ ಹಂತಕರು

ಇದನ್ನೂ ಓದಿ : man killed for bar bill : ಬಾರ್​ನಲ್ಲಿ ಬಿಲ್​ ಪಾವತಿ ಮಾಡುವ ವಿಚಾರಕ್ಕೆ ಜಗಳ : ಮಧ್ಯಸ್ಥಿಕೆ ವಹಿಸಿದವನ ಬರ್ಬರ ಕೊಲೆ

woman commits suicide by jumping into well with her twin children

Comments are closed.