ಸದಾ ವಿವಾದದಿಂದಲೇ ಗುರುತಿಸಿಕೊಳ್ಳುವ ಬಾಲಿವುಡ್ ನಟಿ ಕಂಗನಾ ರನಾವುತ್ (Kangana Ranaut) ಪದ್ಮಶ್ರೀಪ್ರಶಸ್ತಿ ಬಳಿಕವೂ ವಿವಾದಕ್ಕೆ ಸಿಲುಕಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾ ಟದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಂಗನಾ ವಿರುದ್ಧ ಮಹಿಳಾ ಆಯೋಗ ಕಿಡಿಕಾರಿದ್ದು ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ.
ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕಂಗನಾ ಅವರಿಗೆ ನೀಡಲಾಗಿರುವ ದೇಶದ ಅತ್ಯುನ್ನತ ನಾಗರೀಕ ಗೌರವ ಪದ್ಮಶ್ರೀ ಹಿಂಪಡೆಯಬೇಕೆಂಬ ಒತ್ತಡ ವ್ಯಕ್ತವಾಗಿದೆ. ಇದಕ್ಕೆ ದೆಹಲಿಯ ಮಹಿಳಾ ಆಯೋಗವೂ ಧ್ವನಿಗೂಡಿಸಿದ್ದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

1947 ರಲ್ಲಿ ಭಾರತಕ್ಕೆ ಸಿಕ್ಕಿದ್ದು ಬರಿ ಭೀಕ್ಷೆ. ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಸಿಕ್ಕಿತ್ತು ಎನ್ನುವ ಮೂಲಕ ಕಂಗನಾ ರನಾವುತ್ ಸ್ವಾತಂತ್ರ್ಯ ಹೋರಾಟವನ್ನು ಟೀಕಿಸಿದ್ದರು. ಮಾತ್ರವಲ್ಲದೇ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ಮೇಲೆಯೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದ ಕಂಗನಾ ಹೇಳಿಕೆ ಎಲ್ಲೆಡೆ ವೈರಲ್ ಆಗಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಮಾಲಿವಾಲ್ ತಮ್ಮ ಪತ್ರದಲ್ಲಿ ಕಂಗನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಕಂಗನಾ ಅತಿರೇಕದ ಹೇಳಿಕೆ ನೀಡಿದ್ದಾರೆ ಇದು ದೇಶದ್ರೋಹದ ಎಂದು ಆರೋಪಿಸಿದ್ದಾರೆ. ಮಹಾನ್ ಹೋರಾಟಗಾರರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕಂಗನಾ ಅವರ ಹೇಳಿಕೆಯಿಂದ ಲಕ್ಷಾಂತರ ಭಾರತೀಯರ ಮನಸ್ಸಿಗೆ ಘಾಸಿಯಾಗಿದೆ.

ಈ ಹೇಳಿಕೆಗಳು ಕಂಗನಾ ರನಾವುತ್ ಅವರ ದೇಶದ್ರೋಹಿ ಸ್ವಭಾವವನ್ನು ಎತ್ತಿ ತೋರಿಸುತ್ತಿದೆ ಎಂದು ಸ್ವಾತಿ ಮಲಿವಾಲ್ ತಮ್ಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಕಂಗನಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿರುವುದನ್ನು ಖಚಿತಪಡಿಸಿಕೊಂಡು ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಮತ್ತೊಮ್ಮೆ ಬಿಜೆಪಿ ಕುಟುಕಿದ ಪದ್ಮಾವತಿ : ಸೋಷಿಯಲ್ ಮೀಡಿಯಾದಲ್ಲಿ ಹಿಂದುತ್ವದ ಪಾಠ
ಇದನ್ನೂ ಓದಿ : ಕಂಗನಾ ಮೇಲೆ ಮುಂದುವರಿದ ಮುನಿಸು: ರಾಷ್ಟ್ರಪತಿಗೆ ಮಹಿಳಾ ಆಯೋಗದ ಪತ್ರ
( Continued outrage over Kangana Ranaut, Women’s Commission letter to President )