- Advertisement -
ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಎಲ್ಲಾ ದಾಖಲೆ ಗಳನ್ನು ಅಳಿಸಿ ಹಾಕಿದೆ. ಕಳೆದ 24 ತಾಸಿನಲ್ಲಿ 2.73 ಲಕ್ಷ ಕೋವಿಡ್ ಪ್ರಕರಣ ದಾಖಲಾಗಿದ್ದು, 1,619 ಮಂದಿಯನ್ನು ಹೆಮ್ಮಾರಿ ಕೊರೊನಾ ಬಲಿ ಪಡೆದಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಒಟ್ಟು 2,73,810 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಮೊದಲ ಅಲೆಗಿಂತ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸು ತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗು ತ್ತಿದ್ದು, 3 ಲಕ್ಷದ ಅಂಚಿಗೆ ಬಂದು ನಿಂತಿದೆ.