ಚೆಕ್ ಬೌನ್ಸ್ ಪ್ರಕರಣ: ಕಲಂ 138 ಕ್ಕೆ ತಿದ್ದುಪಡಿ ತರಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ :  ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ದಂತೆ, ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ನ ಕಲಂ 138 ಗೆ ತಿದ್ದುಪಡಿ ತರುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಈ ಮಹತ್ವದ ಸೂಚನೆ ನೀಡಿದ್ದು ಇದರ ಪ್ರಕಾರ ಬ್ಯಾಂಕ್ ಗಳಲ್ಲಿ ನಡೆಸಲಾದ ಬೇರೆಬೇರೆ ವ್ಯವಹಾರಗಳಿಗೆ ಸಂಬಂಧ ಪಟ್ಟಂತೆ ಒಂದೇ ವಿಚಾರಣೆಗೆ ನಿಗದಿಪಡಿ ಸುವುದು ಉತ್ತಮ ಎಂಬ ಸಲಹೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.

ಪ್ರಥಮ ಹಂತದಲ್ಲಿ ಚೆಕ್ ಬೌನ್ಸ್ ಪ್ರಕರಣಗಳನ್ನು ಮೀಡಿಯಂ ಸೆಂಟರ್ ಗಳಿಗೆ ವರ್ಗಾಯಿಸುವ ಕುರಿತಂತೆ ತಿದ್ದುಪಡಿ ತರುವಂತೆ ಸಲಹೆ ನೀಡಿದೆ. ಒಂದು ವ್ಯವಹಾರಕ್ಕೆ ಸಂಬಂಧಪಟ್ಟಂತೆ ಬೇರೆಬೇರೆ ಪ್ರಕರಣಗಳಿಂದಾಗಿ ಅದು ವಿಳಂಬವಾಗುತ್ತಿರುವ ಕಾರಣದಿಂದಾಗಿ ಒಂದೇ ಕಾರಣವಾಗಿ ಪರಿಗಣಿಸ ಬೇಕೆಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ಈ ಕುರಿತಂತೆ ಸೂಕ್ತ ತಿದ್ದುಪಡಿ ಅಗತ್ಯತೆಯನ್ನು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ.

ಸಂವಿಧಾನ ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ, ಜಸ್ಟಿಸ್ ನಾಗೇಶ್ವರರಾವ್, ಬಿಆರ್ ಗವಿ, ಎಎಸ್ ಬೋಪಣ್ಣ, ರವೀಂದ್ರ ಭಟ್ ಅವರ ಗಳನ್ನು ಒಳಗೊಂಡ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿ ಸಿದೆ.

ಒಂದು ವೇಳೆ ಕೇಂದ್ರ ಸರ್ಕಾರ ಈ ತಿದ್ದುಪಡಿಯನ್ನು ತಂದರೆ ಅದು ಚೆಕ್ ಬೌನ್ಸ್ ಪ್ರಕರಣದ ಇತ್ಯರ್ಥದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ. ದಿನದಿಂದ ದಿನಕ್ಕೆ ಚೆಕ್ ಬೌನ್ಸ್ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭ ದಲ್ಲಿ ನ್ಯಾಯಾಲಯಗಳು ಒತ್ತಡದಲ್ಲಿ ಸಿಲುಕಿವೆ. ಚೆಕ್ ಬೌನ್ಸ್  ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಈ ತಿದ್ದುಪಡಿ ಅಗತ್ಯ ಎಂದು ಮನಗಾಣಲಾಗಿದೆ.

ಈ ಮೊದಲ ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಪ್ರತ್ಯೇಕ ಕೋಟಿನ ಅಗತ್ಯತೆಯನ್ನು ಸ್ಥಾಪಿಸುವ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚನೆ ಯನ್ನೂ ನೀಡಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಕಾರ್ಯಾ ರಂಭ ಮಾಡಿದೆ.

Comments are closed.