ಕರಾವಳಿಯಲ್ಲಿ ಹಬ್ಬುತ್ತಿದೆ ಕೊರೊನಾ : ಇನ್ನೊಂದೆಡೆ ನಡೆಯುತ್ತಿವೆ ಕಾರ್ಯಕ್ರಮ : ಸೋಂಕು ನಿಯಂತ್ರಣ ಹೇಗೆ ಸಾಧ್ಯ?

ಮಂಗಳೂರು : ಕರಾವಳಿಯಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದೆ. ಈ ನಡುವೆ ರಾಜಕೀಯ, ಧಾರ್ಮಿಕ ಹಾಗೂ ಇತರ ಕಾರ್ಯಕ್ರಮಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಸಂದಿಗ್ಧತೆಯಲ್ಲಿ ಜನರು ಹಾಗೂ ಸರ್ಕಾರ ಸಿಕ್ಕಿಬಿದ್ದಿದೆ.

ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ, ಸಾವಿರಾರು ಜನರು ಸೇರುವ ಕಾರಣ ಅಲ್ಲಿ ಕೊರಿನಾ ಹಬ್ಬುವ ಸಾಧ್ಯತೆಯನ್ನು ಅಲ್ಲಗಳೆಯು ವಂತಿಲ್ಲ. ಒಂದು ವೇಳೆ ಅವಕಾಶ ನೀಡದಿದ್ದಲ್ಲಿ, ಧಾರ್ಮಿಕ ಆಚರಣೆಗೆ ತೊಂದರೆ ಉಂಟಾಗುತ್ತದೆ ಎಂಬ ಆರೋಪವನ್ನು ಸರಕಾರ ಮತ್ತು ಆಡಳಿತ ವರ್ಗ ಎದುರಿಸ ಬೇಕಾಗುತ್ತದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರ ಇದೆ.

ಜನರು ಸರಕಾರದ ಕ್ಲಿಷ್ಟ ಪರಿಸ್ಥಿತಿಯನ್ನು ಅರ್ಥ ಮಾಡಬೇಕಾದುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದೆ. ಬೆಂಗಳೂರಿನ ಆಸ್ಪತ್ರೆ ಗಳು ಕೊರೋನಾ ಕಾರಣದಿಂದಾಗಿ ಒತ್ತಡಕ್ಕೆ ಒಳಗಾಗಿವೆ. ದಿನನಿತ್ಯ ಬಹಳಷ್ಟು ಸಾವುಗಳು ವರದಿಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕರಾವಳಿಯಲ್ಲೂ ಮುನ್ನೆಚ್ಚರಿಕೆ ಅಗತ್ಯತೆ ಇದೆ. ಒಂದು ವೇಳೆ ನಾವು ಎಚ್ಚರಿಕೆ ತಪ್ಪಿ ಕಾರ್ಯಕ್ರಮಗಳ ಆಯೋಜನೆಗೆ ಮಾತ್ರ ನೀಡಿದರೆ ಕೋರೋಣ ವ್ಯಾಪಕವಾಗಿ ಹಬ್ಬುದರಲ್ಲಿ ಸಂಶಯವಿಲ್ಲ.

ಕಾರ್ಯಕ್ರಮ ಆಯೋಜನೆಯನ್ನು ಒಂದಿಷ್ಟು ದಿನಗಳ ಕಾಲ ಮುಂದೂಡಬಹುದು. ಆದರೆ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬಿದರೆ ಅದನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಈ ನೆಲೆಯಲ್ಲಿ ಕರಾವಳಿ ಜಿಲ್ಲೆಗಳು ಬಹಳಷ್ಟು ಬುದ್ಧಿವಂತಿಕೆಯಿಂದ ಹಾಗೂ ಪ್ರಬುದ್ಧತೆಯಲ್ಲಿ ಯೋಚಿಸಬೇಕಾಗಿದೆ. ಕಾರ್ಯಕ್ರಮಗಳು ಅಗತ್ಯ ಇದೆ. ಆದರೆ ಕೊರೋಣ ದಂತಹ ವಿಪತ್ತಿನ ಸಂದರ್ಭದಲ್ಲಿ ನಾವಿದ್ದೇವೆ.

ಈ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರೀಕರಾಗಿ ವರ್ತಿಸ ಬೇಕಾದ್ದು ಎಲ್ಲಾ ಜಾತಿ-ಧರ್ಮ ಪಕ್ಷದವರ ಜವಾಬ್ದಾರಿಯಾಗಿದೆ. ಈ ನೆಲೆಯಲ್ಲಿ ಸರಕಾರ ದೊಂದಿಗೆ ಸರ್ವರು ಕೈಜೋಡಿಸಬೇಕಾದ ಅನಿವಾರ್ಯ ಸಂದರ್ಭದಲ್ಲಿ ನಾವಿದ್ದೇವೆ. ಬೆಂಗಳೂರಿನ ಪರಿಸ್ಥಿತಿಗೆ ಕರಾವಳಿಯನ್ನು ದೂಡ್ಡ ರೀತಿಯಲ್ಲಿ ಜವಾಬ್ದಾರಿಯುತ ನಾಗರೀಕರಾಗಿ ವಹಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.

Comments are closed.