ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 50,407 ಹೊಸ ಕೊರೊನಾ ಪ್ರಕರಣಗಳು ((India Covid 19 Update)) ದೃಢಪಟ್ಟಿದ್ದು, ಒಟ್ಟಾರೆ ಕೇಸ್ ಸಂಖ್ಯೆ 4,25,86,544ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 1,36,962 ಮಂದಿ ಗುಣಮುಖರಾಗಿದ್ದು, ಒಟ್ಟಾರೆ ಚೇತರಿಸಿಕೊಂಡವರ ಸಂಖ್ಯೆ 4,14,68,120 ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. ಕೊವಿಡ್‌ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ. 97.37 ಇದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 6,10,443ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಕಳೆದ ಆರು ದಿನಗಳಿಂದ ದೇಶದಲ್ಲಿ ಪ್ರತಿ ದಿನ ಒಂದು ಲಕ್ಷಕ್ಕಿಂತಲೂ ಕಡಿಮೆ ಕೇಸ್‌ಗಳು ವರದಿಯಾಗುತ್ತಿವೆ. ಅಂದರೆ ಒಟ್ಟಾರೆ ಪ್ರಕರಣದಲ್ಲಿ ನಿತ್ಯ ದೃಢಪಡುತ್ತಿರುವ ಕೋವಿಡ್ ಸೋಂಕಿನ ಪ್ರಮಾಣ ಶೇ. 1.43 ಇದೆ. ದೈನಿಕ ಪಾಸಿಟಿವಿಟಿ ದರ ಶೇ. 3.48 ಇದ್ದು, ವಾರದ ಸರಾಸರಿ ಶೇ. 5.07 ಇದೆ.
ಈ ಮಧ್ಯೆ, ರೈಲ್ವೆಯ ಅಂಗ ಸಂಸ್ಥೆಯಾದ ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮವು (ಐಆರ್‌ಸಿಟಿಸಿ), ದೀರ್ಘ ಪ್ರಯಾಣದ ರೈಲುಗಳಲ್ಲೇ ಆಹಾರ ಸಿದ್ಧ ಪಡಿಸಿ ವಿತರಿಸುವ ಕಾರ್ಯವನ್ನು ಫೆಬ್ರವರಿ 14ರಿಂದ ಆರಂಭಿಸಲಿದೆ. ಕೊರೊನಾ ಕಾರಣ ಮೊದಲ ಸಾರಿಗೆ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದಾಗಿನಿಂದ ರೈಲುಗಳ ಪ್ಯಾಂಟ್ರಿಗಳ (ಅಡುಗೆ ಸಿದ್ಧ ಪಡಿಸುವ ಬೋಗಿ) ಕಾರ್ಯ ಸ್ಥಗಿತಮಾಡಲಾಗಿತ್ತು.
24 ಗಂಟೆಗಳಲ್ಲಿ 804 ಮಂದಿ ಸಾವನ್ನಪ್ಪಿದ್ದು, ಒಟ್ಟಾರೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 5,07,981 ಮುಟ್ಟಿದೆ ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳಲ್ಲಿ 46.82 ಲಕ್ಷ ಡೋಸ್ ಲಸಿಕೆ ವಿತರಣೆ ಆಗಿದ್ದು, ಒಟ್ಟಾರೆ ಕೋವಿಡ್ ತಡೆ ಚುಚ್ಚುಮದ್ದನ್ನು 172.29 ಕೋಟಿಗೂ ಹೆಚ್ಚು ಜನರು ಪಡೆದಿದ್ದಾರೆ.
ಇದನ್ನೂ ಓದಿ: How be sexy hot?: ಸರಳವಾಗಿ ಸುಂದರ ಮತ್ತು ಮಾದಕವಾಗಿ ಕಾಣುವುದು ಹೇಗೆ?
(India Covid 19 Update 50407 new corona cases in last 24 hours)