Sivakasi Kutty Japan: ಶಿವಕಾಶಿ: ಪಟಾಕಿ, ಬೆಂಕಿ ಪೆಟ್ಟಿಗೆ, ಪ್ರಿಂಟಿಂಗ್‌ಗೆ ಹೆಸರುವಾಸಿ ಕುಟ್ಟಿ ಜಪಾನ್ ಜನರ ದಾರುಣ ಕಥೆ ಇಲ್ಲಿದೆ ನೋಡಿ

ಹೌದು, ತಮಿಳ್ನಾಡಿನ ಶಿವಕಾಶಿಯಲ್ಲಿ ಪ್ರತಿನಿತ್ಯವೂ ದೀಪಾವಳಿ ಹಬ್ಬ. ಯಾಕೆಂದರೆ ಇಡೀ ದೇಶದಲ್ಲಿ ಅತಿ ಹೆಚ್ಚು ಪಟಾಕಿ ಉತ್ಪಾದಿಸುವುದು ಇಲ್ಲೇ. ಮನೆ ಮನೆಯಲ್ಲೂ ಪಟಾಕಿ ತಯಾರಿ ಜೋರಾಗೇ ನಡೀತಾ ಇರುತ್ತೆ. ಪಟಾಕಿ ಅಷ್ಟೇ ಅಲ್ಲ, ಸೇಫ್ಟಿ ಮ್ಯಾಚ್ ಬಾಕ್ಸ್, ಆಫ್ ಸೆಟ್ ಪ್ರಿಂಟಿಂಗ್ ಕೂಡ ಇಲ್ಲೇ ಉತ್ಪಾದಿಸೋದು. ಇಡೀ ಪ್ರಪಂಚದಲ್ಲಿ ಗುಟನ್ ಬರ್ಗ್ ಬಿಟ್ರೆ ಇಲ್ಲೇ ಜಾಸ್ತಿ ಆಫ್ ಸೆಟ್ ಪ್ರಿಂಟಿಂಗ್ ಆಗೋದು. ಶಿವಕಾಶಿಯನ್ನು “ಕುಟ್ಟಿ ಜಪಾನ್” ಅಂತಾನೂ (Sivakasi Kutty Japan) ಕರೀತಾರೆ. ಈ ಹೆಸರನ್ನ ಕೊಟ್ಟಿದ್ದು ಜವಹರಲಾಲ್ ನೆಹರು.( ತಮಿಳಿನಲ್ಲಿ ಕುಟ್ಟಿ ಅಂದರೆ ಸಣ್ಣ ಎಂಬರ್ಥ). ಜಪಾನ್ ನಂತರ ಅತಿ ಹೆಚ್ಚು ಪಟಾಕಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದನೆ ಮಾಡೋದು ಇಲ್ಲೇ. ಇದನ್ನು “3 ಕೈಗಾರಿಕೆಗಳ ನಗರ” (Industrial City) ಎಂದೂ ಹೇಳಬಹುದು.ಇಲ್ಲಿ ಮುಖ್ಯವಾಗಿ ಮೂರು ಕೈಗಾರಿಕೆಗಳನ್ನು ಕಾಣಬಹುದು. ಪ್ರಿಂಟಿಂಗ್, ಪೈರೋ ಟೆಕ್ನಿಕ್, ಬೆಂಕಿ ಪೆಟ್ಟಿಗೆ ಹಾಗೂ ಪಟಾಕಿ.

ಬ್ಯುಸಿನೆಸ್ ಶುರುವಾದ್ದು ಯಾವಾಗ?
1960 ರ ಸಮಯದಲ್ಲಿ ಭಾರತದೆಲ್ಲೆಡೆ, ಹಣದ ಕೊರತೆ ಉಂಟಾದಾಗ ಶಿವಕಾಶಿಯ ಜನರೆಲ್ಲ ಸೇರಿ ಹೊಸ ಉದ್ಯಮ ಪ್ರಾರಂಭಿಸುವ ಯೋಜನೆ ರೂಪಿಸುತ್ತಾರೆ. ಸರಕಾರದ ಯಾವುದೇ ನೆರವಿಲ್ಲದೆ ಯಶಸ್ಸೂ ಗಳಿಸುತ್ತಾರೆ. ಇಂದಿಗೂ ಇಲ್ಲಿ ನಿರೋದ್ಯೋಗಿಗಳು ಅಂತ ಯಾರಿಲ್ಲ. ಅದೆಷ್ಟೋ ಮಂದಿಗೆ ಅನ್ನದ ದಾರಿ ಮಾಡಿ ಕೊಟ್ಟಿದೆ ಶಿವಕಾಶಿ. ಆದರೆ ಇಲ್ಲಿನ ಜನರ ಬದುಕೂ ಅಷ್ಟೇ ಕಷ್ಟ. ಒಂದು ಸಣ್ಣ ಬೆಂಕಿ ಕಿಡಿ ಇಲ್ಲವೇ ಶಾರ್ಟ್ ಸರ್ಕ್ಯೂಟ್ ಆದ್ರು ಇಡೀ ಕಾರ್ಖಾನೆ ಭಸ್ಮ ಆಗುತ್ತದೆ. ಈಗಾಗಲೇ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ. ಇಷ್ಟೆಲ್ಲಾ ಆದರೂ ಇಲ್ಲಿನ ಜನರು ತಲೆಮಾರುಗಳಿಂದ ನಂಬಿ ಬಂದ ಕಸುಬನ್ನೇ ಮಾಡುತ್ತಿದ್ದಾರೆ. ಹಿರಿಯರಷ್ಟೇ ಮಕ್ಕಳೂ, ಶಾಲೆ ತೊರೆದು ಇಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಪಟಾಕಿ ಬ್ಯಾನ್ ಆದ್ಮೇಲೆ ಅವರ ಕಥೆಯೇನು?
ಕಲೆದ ಎರಡ್ಮುರು ವರ್ಷಗಳಿಂದ ಪಟಾಕಿ ಬ್ಯಾನ್ ಹಾಗೂ ಕೊರೊನ ಆದ್ಮೇಲೆ, ಇಲ್ಲಿನ ಜನರ ಬದುಕು ಅತಂತ್ರ ಆಗಿದೆ. ಸುಮಾರು ಆರೂವರೆ ಲಕ್ಷ ಜನರ ಮನೆಗಳಲ್ಲಿ ಕತ್ತಲಾವರಿಸಿದೆ. ಒಂದೆಡೆ ವಿದ್ಯಾಭ್ಯಾಸದ ಕೊರತೆಯಿಂದ ಇತರ ಕೆಲಸಗಳಿಗೂ ಹೋಗಲಾರದ ಪರಿಸ್ಥಿತಿ ಇಲ್ಲಿನ ಜನರದ್ದು. ಇಲೆಕ್ಶನ್ ಬಂದಾಗ ಒಂದಿಷ್ಟು ಪ್ರಿಂಟಿಂಗ್ ಕೆಲಸ ಬಿಟ್ಟರೆ, ಬಾಕಿ ಸಮಯದಲ್ಲಿ ಅದೂ ಇಲ್ಲ. ದೀಪಾವಳಿಗೆ ಇಡೀ ದೇಶಕ್ಕೆ ಖುಷಿಯ ಬೆಳಕನ್ನು ನೀಡುವ ಶಿವಕಾಶಿ, ಇದೀಗ ವರ್ಷಗಳಿಂದ ಕತ್ತಲಲ್ಲಿದೆ.

ಇದನ್ನೂ ಓದಿ: Perfume City : ಒಂದಾನೊಂದು ಕಾಲದಲ್ಲಿ ಭಾರತದ ಈ ನಗರದ ಚರಂಡಿಯಲ್ಲೂ ಸುಗಂಧ ದ್ರವ್ಯ ಹರಿಯುತ್ತಿತ್ತಂತೆ!

(Sivakasi Kutty Japan Crackers city of India history and significance)

Comments are closed.