Ek Love Ya Trailer: ಏಕ್ ಲವ್ ಯಾ ಟ್ರೇಲರ್ ಜೋಗಿ ಪ್ರೇಮ್ ದೃಶ್ಯ ಕಾವ್ಯ; ಸಿನಿಮಾ ಬಿಡುಗಡೆ ಯಾವಾಗ?

ಕನ್ನಡದ ಬಹು ನಿರೀಕ್ಷಿತ  ಸಿನಿಮಾಗಳಲ್ಲೊಂದಾದ, ಟಾಪ್ ಡೈರೆಕ್ಟರ್‌ ಎಂದೇ ಕರೆಸಿಕೊಂಡಿರುವ   ಜೋಗಿ ಪ್ರೇಮ್ (Jogi Prem) ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 1.55 ನಿಮಿಷದ ಟ್ರೇಲರ್ ಬಹಳ ಹಾಗೂ ಅದ್ಭುತವಾಗಿ ದೃಶ್ಯಕಾವ್ಯದ ರೀತಿ (Ek Love Ya Trailer) ಮೂಡಿಬಂದಿದೆ. ಇಡೀ ಏಕ್ ಲವ್ ಯಾ ಸಿನಿಮಾದ ಬಗ್ಗೆ ಕುತೂಹಲ ಮೂಡುವಂತೆ ಟ್ರೇಲರ್ ಮೂಡಿಬಂದಿರುವ ವಿಶೇಷ.

ಚಿತ್ರದ ಹೀರೋ ಪ್ರೇಮ್ ಅವರ ಬಾವಮೈದ. ಅಂದರೆ ರಕ್ಷಿತಾ ಅವರ ಸಹೋದರ ರಾಣಾ. ಇದು ಅವರ ಮೊದಲ ಸಿನಿಮಾ. ಬಾವನೇ ಬಾಮೈದುನನಿಗಾಗಿ ಕಥೆ, ಚಿತ್ರಕತೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ತಮ್ಮನಿಗಾಗಿ ರಕ್ಷಿತಾ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಟಿ ರಚಿತಾ ರಾಮ್ ಸಿಗರೇಟ್ ಸೇದಿದ್ದಾರೆ ಅಂತ ಈ ಸಿನಿಮಾ ಬಹಳ ಸದ್ದು ಮಾಡಿತ್ತು. ರಚಿತಾರಾಮ್ ಈ ಬಗ್ಗೆ ಮಾತನಾಡಿ, ‘ಪಾತ್ರ ಏನು ಬೇಡುತ್ತದೋ ಅದನ್ನು ನಾನು ಮಾಡಿದ್ದೇನೆ. ಪಾತ್ರದ ಸಹಜತೆಯನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿದ್ದೇನೆಯೇ ಹೊರತು ಬೇರೆ ಉದ್ದೇಶವಿಲ್ಲ. ನೀವು ಸಿನಿಮಾ ನೋಡಿದ ಮೇಲೆ ನಾನು ಏಕೆ ಬೋಲ್ಡಾಗಿ ಕಾಣಿಸಿಕೊಂಡಿದ್ದೇನೆ ಅನ್ನೋದು ತಿಳಿಯುತ್ತದೆ’ ಎಂದು ಸ್ಪಷ್ಟಣೆ ನೀಡಿದ್ದರು. ಸಿನಿಮಾದ ಸಂಗೀತದ ಹೊಣೆಯನ್ನು ಅರ್ಜುನ್ ಜನ್ಯಾ ಹೊತ್ತುಕೊಂಡಿದ್ದಾರೆ.

ಅಂದಹಾಗೇ, ಈ ಟ್ರೇಲರ್ ಜನವರಿ 4ರಂದು ಬಿಡುಗಡೆಯಾಗಬೇಕಿತ್ತು. ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದರು. ಆದರೆ,ಚಿತ್ರತಂಡ ತಾಂತ್ರಿಕ ಕಾರಣಗಳನ್ನು ನೀಡಿ ಟ್ರೇಲರ್ ಬಿಡುಗಡೆ ಮುಂದೂಡಿತ್ತು. ಅದು ಈಗ ಬಿಡುಗಡೆಗೊಂಡಿದೆ.ಜನವರಿ 21ಕ್ಕೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೊರೋನ ಕಾರಣದಿಂದ ಅದನ್ನು ಮುಂದೂಡಿ, ಫೆಬ್ರವರಿ 24ಕ್ಕೆ ತೆರೆಗೆ ತರಲು ಮುಂದಾಗಿದೆ.ಈ ಹಿನ್ನೆಲೆಯಲ್ಲಿ ಇವತ್ತು ಏಕ್ ಲವ್ ಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

ಪ್ರೇಮ್ ನಿರ್ದೇಶನದ ಯಾವುದೇ ಸಿನಿಮವಾಗಲಿ ಪೋಸ್ಟರ್ ನಿಂದಲೇ ಪ್ರಚಾರ ಶುರುವಾಗುತ್ತದೆ. ಅದರಲ್ಲೊಂದು ಕುತೂಹಲವನ್ನು ಇಟ್ಟು ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆತರುವಲ್ಲಿ ಪ್ರೇಮ್ ಕನ್ನಡದ ನಂಬರ್ 1 ನಿರ್ದೇಶಕರು. ಟ್ರೇಲರ್ ನಲ್ಲಿ ರಚಿತಾರಾಮ್ ಅವರ ಬೋಲ್ಡ್ ಪಾತ್ರ ಎದ್ದು ಕಾಣುತ್ತದೆ. ನವನಾಯಕ ರಾಣ ಅಬ್ಬರ ಕೂಡ ಇದರ ಜೊತೆಗಿದೆ. ಭಗ್ನಪ್ರೇಮ ಕತೆಯ ನೆರಳು ಟ್ರೇಲರ್ ಮೇಲಿದೆ. ಆದರೆ ಪ್ರೇಮ್ ಸೆಂಟಿಮೆಂಟ್ ಡೈರೆಕ್ಟರ್ ಅಂತ ಹೆಸರು ಮಾಡಿದವರು. ಟೀಸರ್ ನಲ್ಲಿ ಯಾವ ಸೆಂಟಿಮೆಂಟ್ ಸುಳಿವು ಬಿಟ್ಟುಕೊಟ್ಟಿಲ್ಲ. ಬದಲಿಗೆ ಯುವಜನಾಂಗಕ್ಕೆ ಪ್ರೀತಿ ಪಾಠ ಮಾಡುವ ಪಂಚಿಂಗ್ ಡೈಲಾಗ್ ಗಳು ಇವೆ. ಪ್ರೇಮ್ ಬುದ್ಧಿವಂತ ನಿರ್ದೇಶಕ ಅನ್ನೋದು ಸಿನಿಮಾಕ್ಕೆ ಇಟ್ಟಿರುವ ಹೆಸರು, ಅದನ್ನು ಅಕ್ಷರಗಳಲ್ಲಿ ಪ್ರಸೆಂಟ್ ಮಾಡಿರುವ ರೀತಿಯಲ್ಲೇ ತಿಳಿಯುತ್ತದೆ.

ಇದನ್ನೂ ಓದಿ: ‘ಏಕ್ ಲವ್ ಯಾ’ ನಲ್ಲಿ ರಚ್ಚು ಸಖತ್ ಹಾಟ್ : ವೈರಲ್ ಆಯ್ತು ಲಿಪ್ ಲಾಕ್ ಸೀನ್

(Ek Love Ya Official Trailer releasd Jogi Prem musical visual treat)

Comments are closed.