ಗುಜರಾತ್‌ ಮಾಸ್ಕ್ ಕಾರ್ಖಾನೆಯಲ್ಲಿ ಅಗ್ನಿ ಅವಘಡ : 2 ಸಾವು,125 ಮಂದಿಗೆ ಗಾಯ

ಸೂರತ್ : ಮಾಸ್ಕ್‌ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿ, 125 ಕ್ಕೂ ಅಧಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್‌ನ ಸೂರತ್‌ನ ಪಲ್ಸಾನಾ ತಾಲೂಕಿನಲ್ಲಿ ನಡೆದಿದೆ. ಅಗ್ನಿಶಾಮಕ ದಳ ಸಿಬಂದಿಗಳು ಬೆಂಕಿ ನಂದಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ. ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಮಾಸ್ಕ್‌ ತಯಾರಿಕಾ ಘಟಕದ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಇತರ ಮಹಡಿಗಳಿಗೂ ವ್ಯಾಪಿಸಿದೆ. ಕಟ್ಟಡದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೈಡ್ರಾಲಿಕ್ ಕ್ರೇನ್ ಬಳಸಿ ( Hydraulic cranes ) ಬಳಸಿ ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: Kerala : ಕೇರಳದಲ್ಲಿ ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಮನೆ : ಸಾವಿನ ಸಂಖ್ಯೆ 26 ಏರಿಕೆ

ಅಗ್ನಿಅವಘಡದಲ್ಲಿ ಸಾವನ್ನಪ್ಪಿರುವವರನ್ನು ಈಗಾಗಲೇ ಸೂರತ್‌ ಹಾಗೂ ಬಾರ್ಡೋಲಿ ಮತ್ತು ಕಡೋದೊರದಿಂದ ಅಂಬ್ಯುಲೆನ್ಸ್‌ ತರಿಸಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಮೇಯರ್‌ ಹೇಮಾಲಿ ಬೋಗವಾಲಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಗ್ನಿಅವಘಡ ಸಂಭವಿಸುತ್ತಿದ್ದಂತೆಯೇ ಕಟ್ಟಡದಿಂದ ಜಿಗಿದ ಸುಮಾರು 200 ಜನರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ, ಬಾರ್ಡೋಲಿ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ರೂಪಲ್ ಸೋಲಂಕಿ ತಿಳಿಸಿದ್ದಾರೆ. ಇದೀಗ ಬೆಂಕಿಯಲ್ಲಿ ಸಿಲುಕಿ ಹಾಕಿಕೊಂಡವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದೂ, ಇದುವರೆಗೆ ಬೆಂಕಿ ಅವಘಡದಲ್ಲಿ ಇಬ್ಬರು ಸಾವನ್ನಪ್ಪಿದ್ದೂ 125ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: 7 ತಿಂಗಳ ಮಗುವಿಗೆ ಜ್ವರ, ಶೀತಕ್ಕೆ ಚಿಕಿತ್ಸೆಯೆಂದು ಬಿಸಿ ಕಬ್ಬಿಣದಿಂದ ಬರೆ ಎಳೆದ ಕ್ರೂರಿ ಮಾಂತ್ರಿಕ

(2 killed, 125 injured in fire at Gujarat mask factory)

Comments are closed.