ಭಾನುವಾರ, ಏಪ್ರಿಲ್ 27, 2025
HomeNationalThanu Padmanabhan: ಖ್ಯಾತ ವಿಜ್ಞಾನಿ ಪ್ರೊ. ತನು ಪದ್ಮನಾಭನ್ ನಿಧನ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಖಗೋಳಶಾಸ್ತ್ರಜ್ಞ

Thanu Padmanabhan: ಖ್ಯಾತ ವಿಜ್ಞಾನಿ ಪ್ರೊ. ತನು ಪದ್ಮನಾಭನ್ ನಿಧನ: ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಖಗೋಳಶಾಸ್ತ್ರಜ್ಞ

- Advertisement -

ವಿಶ್ವಪ್ರಸಿದ್ಧ ಭೌತ ವಿಜ್ಞಾನಿ ಪ್ರೊ.ತನು ಪದ್ಮನಾಭನ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 64 ವರ್ಷ ವಯಸ್ಸಾಗಿತ್ತು.  ಶುಕ್ರವಾರ ಪುಣೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೇರಳದ ತಿರುವನಂತಪುರದಲ್ಲಿ 1957 ಮಾರ್ಚ್  10 ರಂದು   ಜನಿಸಿದ್ದ  ತನು ಪದ್ಮನಾಭನ್, ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ನಲ್ಲಿ ಖಗೋಳ ಭೌತ ಶಾಸ್ತ್ರದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕ್ವಾಂಟಮ್ ಸಿದ್ಧಾಂತ, ಗುರುತ್ವಾಕರ್ಷಣೆ, ವಿಶ್ವವಿಜ್ಞಾನ ಮತ್ತು ವಿಶ್ವದ ರಚನೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಸಾಮಾನ್ಯ ಸಾಪೇಕ್ಷತೆ ಹಾಗೂ ಥರ್ಮೋಡೈನಾಮಿಕ್ಸ್ ಬಗ್ಗೆ ವಿಶೇಷ ಸಂಶೋಧನೆಯಲ್ಲಿ ತೊಡಗಿದ್ದರು. 

ಪ್ರೊ.ಪದ್ಮನಾಭನ್ ತಮ್ಮ 20 ನೇ ವಯಸ್ಸಿನಿಂದ ವಿಜ್ಞಾನದ ಬಗ್ಗೆ ಸಂಶೋಧನಾ ಬರಹಗಳನ್ನು ಬರೆಯಲಾರಂಭಿಸಿದ್ದು, ಬಿಎಸ್ಸಿ ಹಾಗೂ ಎಂಎಸ್ಸಿ ಚಿನ್ನದ ಪದಕ ಪಡೆದಿದ್ದರು. ಇತ್ತೀಚಿಗಷ್ಟೇ ಕೇರಳದ ಪ್ರತಿಷ್ಠಿತ ಕೇರಳ ಶಾಸ್ತ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

ತನು ಪದ್ಮನಾಭನ್ ನಿಧನಕ್ಕೆ ಕೇಂದ್ರ ಸರ್ಕಾರ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ತನು ಪದ್ಮನಾಭನ್ ಪತ್ನಿ ಡಾ.ವಾಸಂತಿ ಪದ್ಮನಾಭನ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಪ್ರೊ.ತನು ಪದ್ಮನಾಭನ್ ಅವರಿಗೆ ಪದ್ಮಶ್ರೀ ಪುರಸ್ಕಾರ ಸಂದಿದೆ.

Renowned astrophysicist thanu padmanabhan passes away.

RELATED ARTICLES

Most Popular